ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹೊರಗಿನ ಪಕ್ಷ ಪಶ್ಚಿಮ ಬಂಗಾಳದಲ್ಲಿ ಜಾಗವಿಲ್ಲ: ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತ್ತ, ನವೆಂಬರ್ 26: ಬಿಜೆಪಿಯು ಹೊರಗಿನವರ ಪಕ್ಷ ಪಶ್ಚಿಮ ಬಂಗಾಳದಲ್ಲಿ ಅದಕ್ಕೆ ಜಾಗವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ದೇಶದ ಗಡಿಯಲ್ಲಿ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತ್ರ ಚುನಾವಣೆಯಲ್ಲಿ ನಿರತರಾಗಿರುವ ಬಗ್ಗೆ ಆಶ್ಚರ್ಯವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ , ತಮ್ಮ ವೃತ್ತಿ ಜೀವನದಲ್ಲೇ ಇಂತಹವರನ್ನು ಎಲ್ಲೂ ನೋಡಿಲ್ಲ ಎಂದರು.

ಮಮತಾ ಬ್ಯಾನರ್ಜಿಗೆ ಆಘಾತ: ಐವರು ಟಿಎಂಸಿ ಸಂಸದರು ಬಿಜೆಪಿಗೆ?ಮಮತಾ ಬ್ಯಾನರ್ಜಿಗೆ ಆಘಾತ: ಐವರು ಟಿಎಂಸಿ ಸಂಸದರು ಬಿಜೆಪಿಗೆ?

ಪಶ್ಚಿಮ ಬಂಗಾಳವನ್ನು ಗಲಭೆ ಪೀಡಿತ ಗುಜರಾತ್‌ ಆಗಿ ಪರಿವರ್ತಿಸಲು ಎಂದಿಗೂ ಬಿಡುವುದಿಲ್ಲ ಎಂದರು.ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇತ್ತೀಚೆಗೆ ರಾಜ್ಯವನ್ನು ಐದು ಸಾಂಸ್ಥಿಕ ವಲಯಗಳನ್ನಾಗಿ ವಿಂಗಡನೆ ಮಾಡಿದೆ. ಕೇಂದ್ರ ನಾಯಕರನ್ನು ಅವುಗಳ ಉಸ್ತುವಾರಿಯನ್ನಾಗಿ ನೇಮಿಸಿದೆ.

BJP, A Party Of Outsiders, Has No Place In Bengal

ಬಂಗಾಳದಲ್ಲಿ ಹೊರಗಿನವರಿಗೆ ಸ್ಥಾನವಿಲ್ಲ, ಚುನಾವಣೆಯ ಸಮಯದಲ್ಲಿ ಮಾತ್ರ ಇಲ್ಲಿಗೆ ಬಂದು ಇಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನ ಮಾಡುವವರಿಗೆ ಎಂದಿಗೂ ಸ್ವಾಗತವಿಲ್ಲ ಎಂದರು.

ಪಶ್ಚಿಮ ಬಂಗಾಳವನ್ನೂ ಗುಜರಾತ್‌ನಂತೆ ಗಲಭೆಪೀಡಿತ ರಾಜ್ಯವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ, ನಮಗೆ ಶಾಂತಿ ಬೇಕು ಗಲಭೆ ಬೇಡ ಎಂದು ಹೇಳಿದರು.

English summary
Days after her party, the Trinamool Congress, raised the pitch against “outsiders” and accused them of trying to occupy West Bengal, Chief Minister Mamata Banerjee on Thursday said the BJP was a party of outsiders, which has no place in the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X