• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಂಜಿಬಿ ಎಂದರೆ 'ಮರ್ ಗಯಾ ಭಾಯ್'!: ಮಹಾಘಟಬಂಧನದ ಲೇವಡಿ ಮಾಡಿದ ಸಚಿವ

|

ಕೋಲ್ಕತಾ, ನವೆಂಬರ್ 10: ಎಕ್ಸಿಟ್ ಪೋಲ್ ಸಮೀಕ್ಷೆಗಳ ನಿರೀಕ್ಷೆಗಳನ್ನು ಮೀರಿ ಬಿಹಾರ ವಿಧಾನಸಭೆ ಚುನಾವಣೆ ಕದನದಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಆದರೆ ಅಂತಿಮ ಫಲಿತಾಂಶ ಬರುವವರೆಗೂ ಈ ಮುನ್ನಡೆಯನ್ನು ಗೆಲುವು ಎಂದು ಪರಿಗಣಿಸಲು ಸಾಧ್ಯವಿಲ್ಲ.

   ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

   ಹಾಗಿದ್ದರೂ ಚುನಾವಣೆಯ ಮೂರನೇ ಹಂತದ ಮತದಾನ ಮುಗಿದ ಬಳಿಕ ಶನಿವಾರ ಪ್ರಕಟವಾದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಹಾಗೂ ಅದರ ಮಿತ್ರಪಕ್ಷ ಜೆಡಿಯು ಪಾಳಯದಲ್ಲಿ ತೀವ್ರ ಚಿಂತೆ ಮೂಡಿಸಿತ್ತು. ಒಂದೆರಡು ಸಮೀಕ್ಷೆಗಳ ಹೊರತಾಗಿ ಹೆಚ್ಚಿನ ಸಮೀಕ್ಷೆಗಳು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ (ಎಂಜಿಬಿ) ಮೈತ್ರಿಕೂಟಕ್ಕೆ ನಿಚ್ಚಳ ಬಹುಮತ ಸಿಗಲಿದೆ ಎಂದು ಹೇಳಿದ್ದವು.

   ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿ

   ಬಿಹಾರದ ಇದುವರೆಗಿನ ಫಲಿತಾಂಶ ಕಂಡಿರುವ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಬಾಬುಲ್ ಸುಪ್ರಿಯೋ 'ಎಂಜಿಬಿ' ಮೈತ್ರಿಕೂಟವನ್ನು ಲೇವಡಿ ಮಾಡಿದ್ದಾರೆ. ಎಂಜಿಬಿ ಎಂದರೆ 'ಮರ್ ಗಯಾ ಭಾಯ್' ಎಂದು ವ್ಯಂಗ್ಯವಾಡಿದ್ದಾರೆ.

   'ರಾಹುಲ್ ಗಾಂಧಿಗೆ ಕರೆ ಮಾಡಿದ ತೇಜಸ್ವಿ (ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್) ಹೇಳುತ್ತಾರೆ: ಎಂಜಿಬಿ= ಮರ್ ಗಯಾ ಭಾಯ್!!

   ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ

   ನಾನು ಇದನ್ನು ಗಂಭೀರವಾಗಿ ಹೇಳುತ್ತಿದ್ದೇನೆ, ನಿಜ ಎಲ್ಲ ಪನ್‌ಗಳೂ ಬಹಳ ಅಗತ್ಯವಿದೆ. ಜೈಲು ಮತ್ತು ಬೈಲಿನಲ್ಲಿರುವ ಜನರು ಬಿಹಾರವು ಎಲ್ಲವನ್ನೂ ಮರೆತಿದೆ ಎಂದು ಯಾವ ಧೈರ್ಯದಿಂದ ಯೋಚಿಸುತ್ತಾರೆ? ಜಂಗಲ್ ರಾಜ್‌ನಲ್ಲಿ ಜನರನ್ನು ಹಿಂಸಿಸಲು ಹೋಗಿದ್ದವರು ಅವರೇ ಅಲ್ಲವೇ?' ಎಂದು ಬಾಬುಲ್ ಸುಪ್ರಿಯೋ ಟ್ವೀಟ್ ಮಾಡಿದ್ದಾರೆ.

   English summary
   Bihar Assembly Election Results 2020 Updates in Kannada: Union state minister Babul Supriyo mocked Mahagathbandhan (MGB) as Mar Gaya Bhai!.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X