• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು

|
   ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ | Oneindia Kannada

   ಕೋಲ್ಕತ್ತಾ, ಮೇ 28: ಲೋಕಸಭೆ ಚುನಾವಣೆಯಲ್ಲಿ ಆಘಾತಕಾರಿ ಪ್ರದರ್ಶನ ತೋರಿದ ನಂತರ ಮುಖಭಂಗ ಅನುಭವಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಭಾರೀ ಆಘಾತ ಎದುರಾಗಿದೆ.

   ಮೂವರು ಟಿಎಂಸಿ ಶಾಸಕರು ಬಿಜೆಪಿ ಸೇರುವುದಕ್ಕೆಂದು ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಸೋಮವಾರ ಸಂಜೆಯೇ ಈ ಶಾಸಕರು ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

   ಆಘಾತಕಾರಿ ಸೋಲು: ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರ್ಧಾರ ಆಘಾತಕಾರಿ ಸೋಲು: ರಾಜೀನಾಮೆಗೆ ಮಮತಾ ಬ್ಯಾನರ್ಜಿ ನಿರ್ಧಾರ

   2017 ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್ ರಾಯ್ ಅವರ ನೇತೃತ್ವದಲ್ಲಿ ಶಾಸಕರು ಬಿಜೆಪಿ ಸೇರಲಿದ್ದು, ಮೂವರೂ ಬಾರಾಕ್ಪೋರ್ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಸದಸ್ಯರಾಗಿದ್ದಾರೆ.

   ಟಿಎಂಸಿಯಿಂದ ಅಮಾನತುಗೊಂಡ ಸುಬ್ರಂಗ್ಶು ರಾಯ್(ಮುಕುಲ್ ರಾಯ್ ಪುತ್ರ), ದಿನೇಶ್ ತ್ರಿವೇದಿ, ಸುನಿಲ್ ಸಿಂಗ್ ಎಂಬ ಮೂವರು ಬಿಜೆಪಿ ಸೇರಲಿದ್ದು, ಲೋಕಸಭೆ ಚುನಾವಣೆಯ ಕಳಪೆ ಪ್ರದರ್ಶನದೊಂದಿಗೆ, ವಿಧಾನಸಭೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಉಭಯ ಸಂಕಟಕ್ಕೂ ಮಮತಾ ಬ್ಯಾನರ್ಜಿ ತುತ್ತಾಗುವ ಸಾಧ್ಯತೆ ಇದೆ.

   'ನಾನು ನಂಬುವುದಿಲ್ಲ...' ಪದ್ಯದ ಮೂಲಕ ಫಲಿತಾಂಶಕ್ಕೆ ದೀದಿ ಪ್ರತಿಕ್ರಿಯೆ'ನಾನು ನಂಬುವುದಿಲ್ಲ...' ಪದ್ಯದ ಮೂಲಕ ಫಲಿತಾಂಶಕ್ಕೆ ದೀದಿ ಪ್ರತಿಕ್ರಿಯೆ

   ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23 ರಂದು ಪ್ರಕಟವಾಗಿದ್ದು, ಬಿಜೆಪಿ 18(42) ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆದಿತ್ತು.

   English summary
   Another big shock to TMC chief and West Bengal chief minister Mamata Banerjee. 3 MLAs of TMC left party and travelling to Delhi to join BJP.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X