ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2013ರಲ್ಲಿ ಬಿಜೆಪಿ ಸೇರಿದ್ದ ನಟಿ, 2019ರಲ್ಲಿ ಪಕ್ಷ ತೊರೆದಿದ್ದೇಕೆ?

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 1: ಜನಪ್ರಿಯ ಬೆಂಗಾಲಿ ನಟಿಯೊಬ್ಬರು ಭಾರತೀಯ ಜನತಾ ಪಕ್ಷ(ಬಿಜೆಪಿ) ತೊರೆದಿದ್ದಾರೆ. 2013ರಲ್ಲಿ ಬಿಜೆಪಿ ಸೇರಿದ್ದ ಈ ನಟಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ದೇಶದಲ್ಲಿ ಇತ್ತೀಚಿನ ಹೆಚ್ಚಾಗಿರುವ ದ್ವೇಷಪೂರಿತ ಸನ್ನಿವೇಶಗಳನ್ನು ಪಕ್ಷದ ಸರಿಯಾಗಿ ನಿಭಾಯಿಸದ ಕಾರಣ, ಮನನೊಂದು ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಆದರೆ, ನಟಿ ನೀಡಿರುವ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್ ಅಂಗೀಕರಿಸಿಲ್ಲ.

Bengali actor who joined BJP resigns over hate filled situation

"ತುಂಬಾ ಆಶಾವಾದದೊಂದಿಗೆ ಪಕ್ಷ ಸೇರಿದೆ. ಆದರೆ, ಇತ್ತೀಚಿಗೆ ದೆಹಲಿಯಲ್ಲಿನ ಗಲಭೆ, ದ್ವೇಷಪೂರಿತ ವಾತಾವರಣದಿಂದ ನಾನು ನೊಂದಿದ್ದೇನೆ" ಎಂದು ನಟಿ ಸುಭದ್ರಾ ಮುಖರ್ಜಿ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಅವರಿಗೆ ರಾಜೀನಾಮೆ ಸಲ್ಲಿಸಿರುವ ಸುಭದ್ರಾ ಮುಖರ್ಜಿ, "ಸೋದರರಂತೆ ಬಾಳಬೇಕಾದವರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದು ದುಃಖ ತರಿಸಿದೆ'' ಎಂದಿದ್ದಾರೆ.

ಧರ್ಮ, ಹಗೆತನ, ದ್ವೇಷಭರಿತ ರಾಜಕೀಯದೊಡನೆ ನಾನು ಬೆರೆಯಲು ಇಷ್ಟಪಡುವುದಿಲ್ಲ ಎಂದಿದ್ದಾರೆ.ತಮ್ಮ ನಿರ್ಣಯವನ್ನು ಮುಖರ್ಜಿ ಅವರು ಹಿಂಪಡೆಯುತ್ತಾರೆ ಎಂಬ ನಂಬಿಕೆಯಿದೆ ಎಂದು ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

English summary
A popular Bengali actor, who joined the BJP in 2013, has resigned from the primary membership of the party expressing dismay over the "recent hate-filled situation" in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X