ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲುವೆಯಲ್ಲಿ ಬಿಜೆಪಿ ಕಾರ್ಯಕರ್ತನ ಶವ, ಆಡಳಿತ ಪಕ್ಷದ ಮೇಲೆ ಗುಮಾನಿ?

|
Google Oneindia Kannada News

ಕೋಲ್ಕತ್ತಾ, ಜುಲೈ 28: ಹೂಗ್ಲಿ ಜಿಲ್ಲೆಯ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕಾರ್ಯಕರ್ತನೊಬ್ಬನ ಶವ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೈವಾಡ ಇರಬಹುದು ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ಬೆಂಗಾಳ ಘಟಕದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮೃತ ಕಾರ್ಯಕರ್ತನ ವಿವರ ಬಹಿರಂಗವಾಗಿದೆ. ಮೃತ ವ್ಯಕ್ತಿಯನ್ನು ಕಾಶಿನಾಥ್ ಘೋಶ್ ಎಂದು ಗುರುತಿಸಲಾಗಿದೆ. ಕಾಶಿನಾಥ್ ನನ್ನು ಹುತಾತ್ಮ ಎಂದು ಕರೆದಿರುವ ಬೆಂಗಾಳದ ಬಿಜೆಪಿ ಘಟಕ, ಬಿಜೆಪಿ ಏಳಿಗೆಯನ್ನು ಟಿಎಂಸಿ ಸಹಿಸಲು ಆಗುತ್ತಿಲ್ಲ ಎಂದು ಆರೋಪಿಸಿದೆ.

Bengal BJP worker’s body found floating in canal; TMC blamed

ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ನಿರಂತರವಾಗಿ ದ್ವೇಷಪೂರಿತ ವಾಕ್ಸಮರ ನಡೆಯುತ್ತಿದ್ದು, ಹಲವು ಬಾರಿ ಗಲಭೆ, ಸಾವು ನೋವಿಗೆ ಕಾರಣವಾಗಿದೆ.

"ಕಾಶಿನಾಥ್ ಘೋಶ್- ಆರಂಭಾಗ್ ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದರು. ಅವರನ್ನು ಟಿಎಂಸಿ ಗೂಂಡಾಗಳು ಭೀಕರವಾಗಿ ಕೊಂದು ಹಾಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇಕಡಾವಾರು ಮತ ಗಳಿಕೆ 44%ರಷ್ಟಿತ್ತು. ಆರಂಭಾಗದಲ್ಲಿನ ಬಿಜೆಪಿ ನಾಯಕರ ಹಿಟ್ ಲಿಸ್ಟ್ ತಯಾರಿಸಿರುವ ಟಿಎಂಸಿ, ಬಿಜೆಪಿ ಏಳಿಗೆ ಸಹಿಸದೆ ಇಂಥ ಮಾರ್ಗಕ್ಕೆ ಇಳಿದಿದೆ. 2021ಕ್ಕೆ ಬರುವ ಫಲಿತಾಂಶವನ್ನು ತಡೆಯಲು ಸಾಧ್ಯವಿಲ್ಲ, ಹುತಾತ್ಮ ಸಂಖ್ಯೆ 74" ಎಂದು ಬಿಜೆಪಿ ಟ್ವೀಟ್ ಮಾಡಿದೆ.

English summary
A Bharatiya Janata Party (BJP) worker's body was found floating in a canal in West Bengal's Hooghly district. The BJP alleged the Trinamool Congress was behind the death of its party worker, identified as Kashinath Ghosh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X