ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ರೋಶಕ್ಕೆ ಹೆದರಿ ಕೋಲ್ಕತ್ತಾ 'ಗೋಮಾಂಸ ಹಬ್ಬ' ಕಾರ್ಯಕ್ರಮ ರದ್ದು

|
Google Oneindia Kannada News

ಕೋಲ್ಕತ್ತಾ, ಜೂನ್ 07: ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ 'ಗೋಮಾಂಸ ಹಬ್ಬ' ಎಂಬ ಹೆಸರಿನ ಕಾರ್ಯಕ್ರಮಕ್ಕೆ ದೇಶದೆಲ್ಲೆಡೆಯಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕ ಸಂಸ್ಥೆ ತಿಳಿಸಿದೆ.

ಮೈಸೂರಿನಲ್ಲಿ ಬೀಫ್ ಮಾಫಿಯಾ ? 5 ಹಸುಗಳನ್ನು ಕೊಂದ ದುಷ್ಕರ್ಮಿಗಳು ಮೈಸೂರಿನಲ್ಲಿ ಬೀಫ್ ಮಾಫಿಯಾ ? 5 ಹಸುಗಳನ್ನು ಕೊಂದ ದುಷ್ಕರ್ಮಿಗಳು

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 'ಗೋಮಾಂಸದ ಆಹಾರಗಳ ಮೇಳ'ವನ್ನು ಆಯೋಜಿಸಲಾಗಿತ್ತು. ಮೊದಲಿಗೆ "Kolkata beef Festival" ಎಂದಿದ್ದ ಹೆಸರನ್ನು ನಂತರ "Kolkata beep festival ಎಂದು ಬದಲಾಯಿಸಲಾಗಿತ್ತು. ಆದರೆ ಗೋಮಾಂಸದ ಆಹಾರದ ಹಬ್ಬ ಎಂಬುದು ತಿಳಿಯುತ್ತಿದ್ದಂತೆಯೇ ಕಾರ್ಯಕ್ರಮ ಆಯೋಜಕರಿಗೆ ದಿನಕ್ಕೆ 200 - 300 ಕರೆ ಬರಲಾರಂಭಿಸಿತ್ತು. ಕರೆ ಮಾಡಿದ ವ್ಯಕ್ತಿಗಳು, 'ಕಾರ್ಯಕ್ರಮವನ್ನು ಮಾಡಿದರೆ ಸುಮ್ಮನೆ ಬಿಡುವುದಿಲ್ಲ' ಎಂದು ಬೆದರಿಕೆ ಒಡ್ಡುತ್ತಿದ್ದರು. ಇದರಿಂದ ಆತಂಕಗೊಂಡ ಆಯೋಜಕರು ಕಾರ್ಯಕ್ರಮವ್ನು ರದ್ದುಗೊಳಿಸಿದ್ದಾರೆ.

Beef festival in Kolkata calls off after huge opposition

ಈ ಕಾರ್ಯಕ್ರಮವನ್ನು ಜೂನ್ 23 ರಂದು ನಡೆಸಲು ಉದ್ದೇಶಿಸಲಾಗಿತ್ತು. ಚುನಾವಣೆಗೂ ಮುನ್ನವೇ ನಡೆದರೆ ಇಂಥ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೇ ನಾವು ಈ ಕಾರ್ಯಕ್ರಮವನ್ನು ಮುಂದೆ ಹಾಕಿದ್ದೆವು. ಆದರೆ ಚುನಾವಣೆಯ ನಂತರವೂ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ ಎಂದು ಆಯೋಜಕ ಸಂಸ್ಥೆ ತಿಳಿಸಿದೆ.

English summary
After huge oppostion from people, A beef food festival in Kolkata, scheduled for later this month, has been called off ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X