ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರಿದ ಬಾಂಗ್ಲಾ ಮೂಲದ ನಟಿ, ಟಿಎಂಸಿಯಿಂದ ಟೀಕೆ

|
Google Oneindia Kannada News

ಕೋಲ್ಕತ್ತಾ, ಜೂನ್ 06: ಒಂದು ಕಾಲದಲ್ಲಿ ಬಾಂಗ್ಲಾದೇಶದ ಬೇಡಿಕೆಯ ನಟಿಯಾಗಿದ್ದ ಅಂಜು ಘೋಷ್ ಅವರು ಕೋಲ್ಕತ್ತಾದಲ್ಲಿ ಗುರುವಾರ ಬಿಜೆಪಿ ಸೇರಿದರು.

ಬಾಂಗ್ಲಾ ಮೂಲದವರಾದರೂ ಹಲವು ವರ್ಷಗಳಿಂದ ಭಾರತದಲ್ಲೇ ವಾಸಿಸುತ್ತಿರುವ ಅಂಜು ಘೋಷ್ ಭಾರತೀಯ ಪಾಸ್ ಪೋರ್ಟ್ ಮತ್ತು ವೋಟರ್ ಐಡಿ ಹೊಂದಿದ್ದಾರೆ.

ಬಿಜೆಪಿಯ ಗೆಲುವಿಗೆ ಪಣತೊಟ್ಟವರಲ್ಲಿ ಮಮತಾ ಬ್ಯಾನರ್ಜಿಗೆ ಅಗ್ರಸ್ಥಾನ!ಬಿಜೆಪಿಯ ಗೆಲುವಿಗೆ ಪಣತೊಟ್ಟವರಲ್ಲಿ ಮಮತಾ ಬ್ಯಾನರ್ಜಿಗೆ ಅಗ್ರಸ್ಥಾನ!

ಘೋಷ್ ಬಿಜೆಪಿ ಸೇರುತ್ತಿದ್ದಂತೆಯೇ ಪಶ್ಚಿಮ ಟಿಎಂಸಿ ನಾಯಕರು ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

Bangladesh-born actor joins BJP

1989 ರಲ್ಲಿ ಬಿಡುಗಡೆಯಾಗಿ, ಬ್ಲಾಕ್ ಬಸ್ಟರ್ ಆಗಿದ್ದ 'ಬೆದೆರ್ ಮೆಯೆ ಜೋಸ್ನಾ' ಚಿತ್ರದ ನಾಯಕಿಯಾಗಿ ಆ ಕಾಲದ ಬೇಡಿಕೆಯ ನಟಿಯಾಗಿದ್ದ ಘೋಷ್ ಅವರ ಬಿಜೆಪಿ ಸೇರ್ಪಡೆಗೆ ವಿರೋಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತೀಯ ನಾಗರಿಕರಲ್ಲದವರೂ ಬಿಜೆಪಿ ಸೇರಬಹುದು ಎಂದು ಟೀಕಿಸಿದ್ದಾರೆ.

"ಬಿಜೆಪಿ ಒಂದು ಅಂತಾರಾಷ್ಟ್ರೀಯ ಪಕ್ಷ" ಎಂದೂ ಟಿಎಂಸಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಆದರೆ ಅವರ್ನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೊದಲೇ ಬಿಜೆಪಿ ಅಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯಲ್ಲಿ ಅವರ ನಾಗರಿಕತ್ವದ ಬಗ್ಗೆ ಎಲ್ಲಾ ದಾಖಲೆಗಳ ಪರಿಶೀಲನೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

English summary
Anju Ghosh A Bangladesh-born actor who became a superstar 30 years ago has now joined the BJP in Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X