ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Asansol Bypoll Result: ಬಿಜೆಪಿಯ ಹೊಸ ಭದ್ರಕೋಟೆ ಛಿದ್ರ: ಆಸನ್ಸೋಲ್‌ನಲ್ಲಿ ಶತ್ರುಘ್ನಗೆ ಗೆಲುವಿನ ನಗೆ

|
Google Oneindia Kannada News

ಕೋಲ್ಕತಾ, ಏ. 16: ಪಶ್ಚಿಮ ಬಂಗಾಳ ರಾಜ್ಯವನ್ನು ವಶಪಡಿಸಿಕೊಳ್ಳಬೇಕೆಂದು ಇನ್ನಿಲ್ಲದ ಪ್ರಯತ್ನಗಳನ್ನ ಮಾಡುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ದೀದಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಭಾರೀ ತೊಡಕಾಗಿದೆ. ಬಿಜೆಪಿ ಈ ರಾಜ್ಯದಲ್ಲಿ ಬಹಳಷ್ಟು ಬೇರು ಬಿಟ್ಟಿದ್ದರೂ ಟಿಎಂಸಿ ಪಕ್ಷದ ಬುಡ ಅಲ್ಲಾಡಿಸಲು ಸಾಧ್ಯವಾಗಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷ ನಿರೀಕ್ಷೆಮೀರಿ ಗೆಲುವು ಸಾಧಿಸಿತ್ತು. ಅಧಿಕಾರ ಹಿಡಿಯುವ ಬಿಜೆಪಿಯ ಪ್ರಯತ್ನ ಕೈಗೂಡಲಿಲ್ಲ. ಅದಾದ ಬಳಿಕ ನಡೆದ ವಿವಿಧ ಮಟ್ಟದ ಚುನಾವಣೆಗಳಲ್ಲೂ ಬಿಜೆಪಿಗೆ ನಿರಾಸೆಯೇ ಕಾದಿತ್ತು. ಈಗ ಆಸನ್ಸೋಲ್ ಲೋಕಸಭೆ ಕ್ಷೇತ್ರ ಮತ್ತು ಬಾಲಿಗಂಜ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಟಿಎಂಸಿ ಪಕ್ಷದವರು ಗೆಲುವು ಸಾಧಿಸುತ್ತಿದ್ದಾರೆ.

ಕೆಪಿಸಿಸಿಗೆ ಇದ್ದಾರೆ 'ಬೇನಾಮಿ ಅಧ್ಯಕ್ಷೆ': ಏನಿದು ಬಿಜೆಪಿ ಹೊಸ ಹೇಳಿಕೆ?ಕೆಪಿಸಿಸಿಗೆ ಇದ್ದಾರೆ 'ಬೇನಾಮಿ ಅಧ್ಯಕ್ಷೆ': ಏನಿದು ಬಿಜೆಪಿ ಹೊಸ ಹೇಳಿಕೆ?

ಅಸನ್ಸೋಲ್ ಲೋಕಸಭೆ ಕ್ಷೇತ್ರ ಬಿಜೆಪಿ ಪಾಲಿಗೆ ಬಹಳ ಮುಖ್ಯವೆನಿಸಿದೆ. 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿ ಇಲ್ಲಿ ಹ್ಯಾಟ್ರಿಕ್ ಸಾಧಿಸುವ ಕನಸು ಭಗ್ನಗೊಂಡಿದೆ. ಮಾಜಿ ಕೇಂದ್ರ ಸಚಿವ ಹಾಗು ಮಾಜಿ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರು ಟಿಎಂಸಿ ಅಭ್ಯರ್ಥಿಯಾಗಿ ಆಸನ್ಸೋಲ್ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

Shatrughan Sinha beat Agnimitra Paul of BJP in Asansol Lok Sabha bypoll

ಬಿಜೆಪಿಯಲ್ಲಿ ಕಡೆಗಣಿಸಲಾಗಿದ್ದ ಶತ್ರುಘ್ನ ಸಿನ್ನಾ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಇತ್ತೀಚೆಗೆ ಟಿಎಂಸಿಗೆ ವಲಸೆ ಬಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರಾ ಪೌಲ್ ಅವರನ್ನ ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿಯೇತರ ಪಕ್ಷವನ್ನು ಪ್ರತಿನಿಧಿಸಿ ಶತ್ರುಘ್ನ ಅವರು ಗಳಿಸಿದ ಮೊದಲ ಗೆಲುವು ಇದಾಗಿದೆ.

ಬಿಜೆಪಿಗೆ ಭದ್ರಕೋಟೆಯಾಗುತ್ತಿತ್ತು ಆಸನ್ಸೋಲ್:
ಆಸನ್ಸೋಲ್ ಕ್ಷೇತ್ರ ಬಿಜೆಪಿ ಪಾಲಿಗೆ ಭದ್ರಕೋಟೆ ಎನಿಸಲು ಕಾರಣ ಇದೆ. ಈ ಕ್ಷೇತ್ರದ ಮುಖ್ಯ ಭಾಗವಾಗಿರುವ ಆಸನ್ಸೋಲ್ ನಗರ ಪಶ್ಚಿಮ ಬಂಗಾಳದ ಎರಡನೇ ಅತಿದೊಡ್ಡ ನಗರ ಎನಿಸಿದೆ. ಕೋಲ್ಕತಾ ಬಳಿಕ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವಾಗಿದೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಗಡಿ ಬಳಿ ಇರುವ ಈ ಲೋಕಸಭಾ ಕ್ಷೇತ್ರದಲ್ಲಿ 15 ಲಕ್ಷ ಮತದಾರರಿದ್ದಾರೆ. ಇವರಲ್ಲಿ ಶೇ. 50ರಷ್ಟು ಮಂದಿ ನೆರೆಯ ಜಾರ್ಖಂಡ್ ಮತ್ತು ಬಿಹಾರ ಮೂಲದಿಂದ ಬಂದ ಹಿಂದಿ ಭಾಷಿಕರೇ ಇದ್ದಾರೆ. ಇದು ಬಿಜೆಪಿ ನೆಲೆಯೂರಲು ಹೇಳಿ ಮಾಡಿಸಿದ ಅಂಶವೆನಿಸಿತ್ತು.

Shatrughan Sinha beat Agnimitra Paul of BJP in Asansol Lok Sabha bypoll

ಈ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳ ಕಾರ್ಮಿಕರ ಸಂಖ್ಯೆ ಬಹಳ ಇದೆ. ಅಲ್ಪಸಂಖ್ಯಾತರೂ ಇದ್ದಾರೆ. ಹೀಗಾಗಿ, ಇಲ್ಲಿ ಕಮಲ ಅರಳುವ ಮುನ್ನ ಕಮ್ಯೂನಿಸ್ಟರ ದೊಡ್ಡ ಭದ್ರಕೋಟೆ ಆಗಿತ್ತು. 2014ರಲ್ಲಿ ಬಿಜೆಪಿ ಎಡಕೋಟೆಯನ್ನ ಛಿದ್ರಗೊಳಿಸಿ ಕಮಲ ಅರಳಿಸಿತ್ತು. ಬಾಬುಲ್ ಸುಪ್ರಿಯೋ ಅವರು ಸತತ ಎರಡು ಬಾರಿ ಇಲ್ಲಿ ಗೆದ್ದು ಬಿಜೆಪಿಗೆ ಆಶಾಕಿರಣ ಒದಗಿಸಿದ್ದರು.

4 ರಾಜ್ಯಗಳ ಉಪ ಚುನಾವಣೆ: ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ4 ರಾಜ್ಯಗಳ ಉಪ ಚುನಾವಣೆ: ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ

ಬಾಬುಲ್ ಸುಪ್ರಿಯೋ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಾಲಿಗಂಜ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಆಸನ್ಸೋಲ್ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅವರ ದುರದೃಷ್ಟಕ್ಕೆ ಟಾಲಿಗಂಜ್ ಕ್ಷೇತ್ರದಲ್ಲಿ ಅವರು ಟಿಎಂಸಿ ಎದುರು ಸೋತರು. ಬಳಿಕ ಅವರು ಟಿಎಂಸಿ ಪಕ್ಷವನ್ನೇ ಸೇರಿಕೊಂಡು ಇದೀಗ ಬಾಲಿಗಂಜ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

ಹಿಂದೆ ತಮ್ಮ ಭದ್ರಕೋಟೆಯಾಗಿದ್ದ ಆಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ 2014ರಿಂದಲೂ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಿದೆ.

Shatrughan Sinha beat Agnimitra Paul of BJP in Asansol Lok Sabha bypoll

ಟಿಎಂಸಿಗೆ ಮಹತ್ವದ ಗೆಲುವು:
ಆಸನ್ಸೋಲ್ ಕ್ಷೇತ್ರದಲ್ಲಿ ಟಿಎಂಸಿ ಪಕ್ಷ ಗೆಲುವು ಸಾಧಿಸಿದ್ದು ಇದೇ ಮೊದಲು. ಶತ್ರುಘ್ನ ಸಿನ್ಹಾ ಅವರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದಿ ಭಾಷಿಕರನ್ನ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದಂತಿದೆ. ಹೀಗಾಗಿ, ಬಿಜೆಪಿ ವಿರುದ್ಧ ಟಿಎಂಸಿ ಸುಲಭ ಗೆಲುವು ಸಾಧಿಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಶತ್ರುಘ್ನ ಸಿನ್ಹ ಮೂರನೇ ಬಾರಿ ಲೋಕಸಭೆಗೆ:
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಲ ಕುಂದಿಸುವ ಟಿಎಂಸಿ ಪ್ರಯತ್ನದಲ್ಲಿ ಆಸನ್ಸೋಲ್ ಉಪಚುನಾವಣೆ ಗೆಲುವು ಪ್ರಮುಖವಾಗಿದೆ. ಇಲ್ಲಿನ ಸೋಲು ಬಿಜೆಪಿಗೆ ಮಾನಸಿಕವಾಗಿಯೂ ಹಿನ್ನಡೆ ತಂದಿದೆ.

Shatrughan Sinha beat Agnimitra Paul of BJP in Asansol Lok Sabha bypoll

ಇನ್ನು, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ರಾಜಕಾರಣದಲ್ಲಿ ಸಾಕಷ್ಟು ಅನುಭವಿಯಾಗಿದ್ದಾರೆ. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಅವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ ಎರಡು ಖಾತೆ ನಿಭಾಯಿಸಿದ್ದರು. ಬಳಿಕ ಬಿಹಾರದ ಪಾಟ್ನಾ ಸಾಹೀಬ್ ಕ್ಷೇತ್ರದಿಂದ ಎರಡು ಬಾರಿ ಅವರು ಲೋಕಸಭೆಗೆ ಚುನಾಯಿತರಾಗಿ ಹೋಗಿದ್ದರು. ಈಗ ಅವರು ಲೋಕಸಭೆ ಸದಸ್ಯರಾಗುತ್ತಿರುವುದು ಇದು ಮೂರನೇ ಬಾರಿ.

ಇತರೆಡೆಯ ಉಪಚುನಾವಣೆ ಫಲಿತಾಂಶ:
* ಬಾಲಿಗಂಜ್‌ನಲ್ಲಿ ಟಿಎಂಸಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರು ಭರ್ಜರಿ ಗೆಲುವಿನ ಹಾದಿಯಲ್ಲಿದ್ದಾರೆ. ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.
* ಛತ್ತೀಸ್‌ಗಡದ ಖೇರಗಡ್ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ವಿರುದ್ಧ ಜಯ ದಾಖಲಿಸಲು ಮುನ್ನುಗ್ಗುತ್ತಿದ್ದಾರೆ.
* ಮಹಾರಾಷ್ಟ್ರದ ಉತ್ತರ ಕೊಲ್ಹಾಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಬಿಜೆಪಿ ಸೋಲಿನ ಹಾದಿಯಲ್ಲಿದೆ.
* ಬಿಹಾರದ ಮುಜಾಫರ್‌ಪುರ್ ಜಿಲ್ಲೆಯಲ್ಲಿರುವ ಬೋಚಹ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಆರ್‌ಜೆಡಿ ಅಭ್ಯರ್ಥಿ ಅಮರ್ ಪಾಸ್ವಾನ್ ಗೆಲುವು ಸಾಧಿಸಿದ್ದಾರೆ.
ಒಟ್ಟಾರೆ, ಬಿಜೆಪಿ ಎಲ್ಲಾ ಐದು ಕ್ಷೇತ್ರಗಳಲ್ಲಿ ಸೋಲನುಭವಿಸಿದೆ. ಈ ಐದರಲ್ಲಿ ಎರಡು ಕ್ಷೇತ್ರಗಳನ್ನ ಉಳಿಸಿಕೊಳ್ಳಲೂ ಅದು ವಿಫಲವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
TMC candidate Shatrughan Sinha beat Agnimitra Paul of BJP in Asansol Lok Sabha bypoll. This is third time Sinha becoming member of Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X