• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ: ಬಿಜೆಪಿಗರ ಬಂಧನ

|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್‌ 13: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಕೋಲ್ಕತ್ತಾದ ರಾಜ್ಯ ಸಚಿವಾಲಯದ ಬಳಿ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಸುವೇಂದು ಅಧಿಕಾರಿ, ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಮತ್ತು ರಾಹುಲ್ ಸಿನ್ಹಾ ಸೇರಿದಂತೆ ಇತರ ಪಕ್ಷದ ನಾಯಕರನ್ನು ಸಚಿವಾಲಯದ ಬಳಿಯ ಎರಡನೇ ಹೂಗ್ಲಿ ಸೇತುವೆಯ ಬಳಿಗೆ ಬರುತ್ತಿದ್ದಂತೆ ಪೊಲೀಸರು ತಡೆದು ಪೊಲೀಸ್‌ ವ್ಯಾನ್‌ನಲ್ಲಿ ಕರೆದೊಯ್ದರು. ಹೌರಾ ಸೇತುವೆ ಬಳಿ ಪ್ರತಿಭಟನಾಕಾರರು ಭದ್ರತಾ ಅಧಿಕಾರಿಗಳೊಂದಿಗೆ ವಾಗ್ದಾದಕ್ಕೆ ನಡೆಸುತ್ತಿದ್ದಂತೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ಚದುರಿಸಿದರು. ಮಹಿಳೆಯರು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಣಿಗಂಜ್‌ನಲ್ಲೂ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ನೂರಾರು ಬಿಜೆಪಿ ಬೆಂಬಲಿಗರು ಮಂಗಳವಾರ ಬೆಳಗ್ಗೆ ಕೋಲ್ಕತ್ತಾ ಮತ್ತು ನೆರೆಯ ಹೌರಾಕ್ಕೆ ಸರ್ಕಾರದ ಸಚಿವಾಲಯಕ್ಕೆ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

Breaking: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸೊಸೆ ಮನೇಕಾ ಗಂಭೀರ್‌ಗೆ ಇಡಿ ಸಮನ್ಸ್Breaking: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಸೊಸೆ ಮನೇಕಾ ಗಂಭೀರ್‌ಗೆ ಇಡಿ ಸಮನ್ಸ್

ಬಂಧನಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು, "ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ಉತ್ತರ ಕೊರಿಯಾವನ್ನಾಗಿ ಮಾಡಿದ್ದಾರೆ. ಮುಖ್ಯಮಂತ್ರಿ ಮಮತಾ ಅವರಿಗೆ ಅವರ ಜನರ ಬೆಂಬಲವಿಲ್ಲ. ಅವರು ಬಂಗಾಳದಲ್ಲಿ ಉತ್ತರ ಕೊರಿಯಾದಂತೆಯೇ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಿದ್ದಾರೆ. ಮುಂದೆ ಬಿಜೆಪಿ ಬರುತ್ತದೆ. ಈಗ ಪೊಲೀಸರು ಅದು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇವೆ ಮುಂದೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ," ಎಂದು ಅವರು ಹೇಳಿದರು.

ಸುವೇಂದು ಅಧಿಕಾರಿ ಸಂತ್ರಗಚಿ ಪ್ರದೇಶದಿಂದ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದರೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಉತ್ತರ ಕೋಲ್ಕತ್ತಾದಿಂದ ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದರು. ಟಿಎಂಸಿ ಸರ್ಕಾರವು ಸಾರ್ವಜನಿಕ ದಂಗೆಗೆ ಹೆದರುತ್ತಿದೆ. ಅವರು ನಮ್ಮ ಪ್ರತಿಭಟನಾ ಮೆರವಣಿಗೆಯನ್ನು ನಿಲ್ಲಿಸಲು ಪ್ರಯತ್ನಿಸಿದರೂ, ನಾವು ಶಾಂತಿಯುತವಾಗಿ ವಿರೋಧಿಸುತ್ತೇವೆ. ಯಾವುದೇ ಅಹಿತಕರ ಬೆಳವಣಿಗೆಗೆ ರಾಜ್ಯ ಆಡಳಿತವು ಜವಾಬ್ದಾರವಾಗಿರುತ್ತದೆ ಎಂದು ದಿಲೀಪ್‌ ಘೋಷ್ ಇಂದು ಮುಂಜಾನೆ ಹೇಳಿದರು.

ಅಮಿತ್ ಶಾ ದೊಡ್ಡ ಪಪ್ಪು ಎಂದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಅಮಿತ್ ಶಾ ದೊಡ್ಡ ಪಪ್ಪು ಎಂದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

 ವಿಶೇಷ ರೈಲು ಹತ್ತದಂತೆ ತಡೆ

ವಿಶೇಷ ರೈಲು ಹತ್ತದಂತೆ ತಡೆ

ಮಮತಾ ಬ್ಯಾನರ್ಜಿ ಸರ್ಕಾರವು ತನ್ನ ಪಕ್ಷದ ಪ್ರಜಾಪ್ರಭುತ್ವ ಮಾದರಿ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಪ್ರತಿಭಟನಾಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಬೆಂಬಲಿಗರನ್ನು ನಿನ್ನೆ ಸಂಜೆ ಅಲಿಪುರ್‌ದೌರ್‌ನಿಂದ ಸೀಲ್ದಾಹ್‌ಗೆ ವಿಶೇಷ ರೈಲು ಹತ್ತದಂತೆ ತಡೆಯಲಾಗಿದೆ. ಅವರ ಮೇಲೂ ರಾಜ್ಯ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ರಾಹುಲ್ ಸಿನ್ಹಾ ಆರೋಪಿಸಿದರು.

 ಸಚಿವಾಲಯದ ಬಳಿ ಪೊಲೀಸರಿಂದ ತಡೆ

ಸಚಿವಾಲಯದ ಬಳಿ ಪೊಲೀಸರಿಂದ ತಡೆ

'ನಬನ್ನ ಅಭಿಜನ್' ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಏಳು ರೈಲುಗಳನ್ನು ಉತ್ತರ ಬಂಗಾಳದಿಂದ ಮೂರು ಮತ್ತು ದಕ್ಷಿಣದಿಂದ ನಾಲ್ಕು ರೈಲುಗಳನ್ನು ವ್ಯವಸ್ಥೆ ಮಾಡಿತ್ತು. ಕೋಲ್ಕತ್ತಾಗೆ ಬಿಜೆಪಿ ಕಾರ್ಯಕರ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗಳನ್ನು ಬಂಗಾಳದ ಉತ್ತರ ಭಾಗದಲ್ಲಿ ಪೊಲೀಸರು ತಡೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿಯ ಪ್ರತಿಭಟನೆ ಮೆರವಣಿಗೆಗೆ ಮುನ್ನ ಕೋಲ್ಕತ್ತಾದ ರಾಜ್ಯ ಸರ್ಕಾರದ ಹೊಸ ಸಚಿವಾಲಯದ ಬಳಿ ಕೋಲ್ಕತ್ತಾ ಪೊಲೀಸರು ಬಾರೀ ಬ್ಯಾರಿಕೇಡಿಂಗ್‌ಗಳನ್ನು ಹಾಕಿದ್ದರು.

 ದುರ್ಗಾಪುರ ರೈಲು ನಿಲ್ದಾಣದ ಬಳಿ ತಡೆ

ದುರ್ಗಾಪುರ ರೈಲು ನಿಲ್ದಾಣದ ಬಳಿ ತಡೆ

ನೂರಾರು ಬಿಜೆಪಿ ಕಾರ್ಯಕರ್ತರು ರೈಲುಗಳ ಮೂಲಕ ಬಿಜೆಪಿಯ ಪ್ರತಿಭಟನೆಗೆ ಸೇರಲು ಕೋಲ್ಕತ್ತಾ ಕಡೆಗೆ ಹೋಗುತ್ತಿದ್ದಾಗ, ಪೊಲೀಸರು ರೈಲು ನಿಲ್ದಾಣಗಳಿಗೆ ಹೋಗುವ ಮಾರ್ಗಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಿದ್ದರು. ನಮ್ಮ 20 ಕಾರ್ಯಕರ್ತರನ್ನು ದುರ್ಗಾಪುರ ರೈಲು ನಿಲ್ದಾಣದ ಬಳಿ ಪೊಲೀಸರು ತಡೆದರು. ನಾನು ಬೇರೆ ಮಾರ್ಗಗಳನ್ನು ಬಳಸಿ ಇಲ್ಲಿಗೆ ತಲುಪಿದ್ದೇನೆ ಎಂದು ಬಿಜೆಪಿ ನಾಯಕ ಅಭಿಜಿತ್ ದತ್ತಾ ಹೇಳಿದ್ದಾರೆ.

 ಕೋಲ್ಕತ್ತಾದ ಗಡಿಗಳಲ್ಲಿ ಪೊಲೀಸ್‌ ಸರ್ಪಗಾವಲು

ಕೋಲ್ಕತ್ತಾದ ಗಡಿಗಳಲ್ಲಿ ಪೊಲೀಸ್‌ ಸರ್ಪಗಾವಲು

ಇದೇ ವೇಳೆ ಬಿಜೆಪಿಯ ಪ್ರತಿಭಟನೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಮೆರವಣಿಗೆಯನ್ನು ತಡೆಯಲು ಕೋಲ್ಕತ್ತಾದ ಗಡಿಗಳಲ್ಲಿ ಬಿಗಿ ಭದ್ರತೆಯೊಂದಿಗೆ ಪೊಲೀಸ್‌ ಸುತ್ತುವರಿದಿದೆ. ಬಿಜೆಪಿಯ ಪಾದಯಾತ್ರೆಯನ್ನು ಗಮನದಲ್ಲಿಟ್ಟುಕೊಂಡು ಹೌರಾದಲ್ಲಿ ಭಾರಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಕೋಲ್ಕತ್ತಾದಾದ್ಯಂತ ವಿವಿಧ ರಸ್ತೆಗಳನ್ನು ಬ್ಯಾರಿಕೇಡ್‌ಗಳಿಂದ ನಿರ್ಬಂಧಿಸಲಾಗಿದೆ. ಮೆರವಣಿಗೆಯನ್ನು ತಡೆಯಲು ಪಶ್ಚಿಮ ಬಂಗಾಳ ಪೊಲೀಸರು ಸಚಿವಾಲಯದ ಸುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯನ್ನು ಕೋಟೆಯನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ.

English summary
The BJP is holding a massive protest against the corruption of the ruling Trinamool Congress government in West Bengal, and many BJP leaders, including opposition leader Suvendu Adhikari, were arrested by the police while they were marching near the State Secretariat in Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X