• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳ ಗೆಲ್ಲಲು ಬೃಹತ್ ಗುರಿ ಕೊಟ್ಟ ಅಮಿತ್ ಶಾ

|

ಕೋಲ್ಕತಾ, ನ.6: ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಟಾರ್ಗೆಟ್ ನಿಗದಿಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಅವರು ಪಶ್ಚಿಮ ಬೆಂಗಾಳದಲ್ಲಿ ಬಿಜೆಪಿಗೆ 294ರಲ್ಲಿ 200 ಸೀಟುಗಳನ್ನು ಗೆಲ್ಲುವ ಗುರಿಯನ್ನು ಇಟ್ಟಿದ್ದಾರೆ.

ಬಂಕುರಾಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಅಮಿತ್ ಶಾ ಅವರು ಸರಣಿ ಮಹತ್ವದ ಸಭೆಗಳನ್ನು ನಡೆಸಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರವಾದ ಹೋರಾಟ ನಡೆಸಿ ಕೇಸರಿ ಬಾವುಟ ಹಾರಿಸುವಂತೆ ಅಮಿತ್ ಕರೆ ನೀಡಿದ್ದಾರೆ.

ಬಿಜೆಪಿ ಸದ್ಯ 8 ಶಾಸಕರನ್ನು ಹೊಂದಿದ್ದು, ಟಿಎಂಸಿಯಿಂದ ಇತ್ತೀಚೆಗೆ ಬಿಜೆಪಿ ಸೇರಿರುವ 8 ಶಾಸಕರ ಬಲ ಹೊಂದಿದೆ. ಜನಪರ ಯೋಜನೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಚಿಂತನೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ಮಮತಾ ಸರ್ಕಾರದ ಜನ ವಿರೋಧಿ ನೀತಿಗಳನ್ನು ಎತ್ತಿ ಹಿಡಿಯಿರಿ ಎಂದು ಅಮಿತ್ ಕರೆ ನೀಡಿದ್ದಾರೆ.

ಎಲ್ಲಾ ಕ್ಷೇತ್ರಗಳಿಂದ ಆಡಳಿತ ವಿರೋಧಿ ಅಲೆ ಎದ್ದಿರುವ ಬಗ್ಗೆ ವರದಿಗಳು ಬರುತ್ತಿವೆ. ಮುಂದಿನ ಸರ್ಕಾರ ಸುಭದ್ರವಾಗಿ ಜನಪರವಾಗಿರುವಂತೆ ನೋಡಿಕೊಳ್ಳುತ್ತೇವೆ. ಬಿಜೆಪಿಗೆ ಒಂದು ಅವಕಾಶ ನೀಡಿ, ಸೋನಾರ್ ಬಾಂಗ್ಲಾ(ಚಿನ್ನದ ನಾಡು ಬಾಂಗ್ಲಾ) ರೂಪಿಸಲು ನೆರವಾಗಿ ಎಂದು ಅಮಿತ್ ಶಾ ಅವರು ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ 22 ಸ್ಥಾನ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದ್ದ ಅಮಿತ್ ಶಾ ಅವರು ಅಂತಿಮವಾಗಿ 18 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಶೇ 40.5 ಮತ ಗಳಿಕೆ ಮೂಲಕ ಬಿಜೆಪಿಗೆ ಬೆಂಗಾಳದಲ್ಲಿ ಗೆಲುವಿನ ಹುರುಪು ಮೂಡಿತು. ಈಗ ಮುಂದಿನ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಅಧಿಕಾರ ಗಳಿಸುವ ಉತ್ಸಾಹದಲ್ಲಿದೆ.

English summary
Union Home Minister and top BJP leader Amit Shah Thursday set a target of 200 out of the total 294 seats in the 2021 West Bengal assembly elections and to come to power in the state, party sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X