ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಾರ್ ಬಾಂಗ್ಲಾ ಕನಸು ಭಗ್ನಗೊಳಿಸುತ್ತಿರುವ ದೀದಿ: ಅಮಿತ್

|
Google Oneindia Kannada News

ಕೋಲ್ಕತ್ತಾ, ಡಿ. 20: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಚಟುವಟಿಕೆಗಳನ್ನು ಚುರುಕುಗೊಳಿಸಲು ಪಶ್ಚಿಮ ಬಂಗಾಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿ ಬೃಹತ್ ರೋಡ್ ಶೋ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಅವರ ಕನಸಿನ ಸೋನಾರ್ ಬಾಂಗ್ಲಾ ಕನಸು ಭಗ್ನಗೊಳಿಸುತ್ತಿರುವ ದೀದಿ ಮಮತಾ ಅವರು ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸುಮಾರು 300ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾರೆ.

ಮಮತಾಗೆ ಹಿನ್ನಡೆ, ಸುವೇಂದು ಅಧಿಕಾರಿ ರಾಜೀನಾಮೆಮಮತಾಗೆ ಹಿನ್ನಡೆ, ಸುವೇಂದು ಅಧಿಕಾರಿ ರಾಜೀನಾಮೆ

''ಮಮತಾ ದುರಾಡಳಿತ ಕೊನೆಗಾಣಿಸಲು ದೆಹಲಿಯಿಂದ ಯಾರೋ ಬರಬೇಕಾಗಿಲ್ಲ. ಇಲ್ಲಿನ ಜನತೆಯೇ ಸ್ಪಷ್ಟ ಆದೇಶ ನೀಡುವ ದಿನ ದೂರವಿಲ್ಲ'' ಎಂದು ಅಮಿತ್ ಶಾ ಅವರು ಭರವಸೆ ವ್ಯಕ್ತಪಡಿಸಿದರು.

Amit Shah in West Bengal slams Mamata Banerjee

"ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸೀಟುಗಳಿಂದ ಬಿಜೆಪಿ ಸರ್ಕಾರ ರಚಿಸಲಿದೆ" ಎಂದು ಬೋಲ್ ಪುರದ ರೋಡ್ ಶೋನಲ್ಲಿ ಪುನರುಚ್ಚರಿಸಿದರು. ಇಲ್ಲಿನ ಜನಸ್ತೋಮ ನೋಡಿದರೆ ಮಮತಾ ಸರ್ಕಾರದ ವಿರುದ್ಧ ಜನರ ಆಕ್ರೋಶ ಯಾವ ರೀತಿ ಇದೆ ಎಂಬುದು ತಿಳಿಯುತ್ತದೆ ಎಂದರು.

ಸಾರಿಗೆ, ನೀರಾವರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಸುವೇಂದು ಅವರು ಕನಿಷ್ಠ 40 ರಿಂದ 45 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ. ಜಂಗಲ್ ಮಹಾಲ್ ಪ್ರದೇಶ ಬುಡಕಟ್ಟು ಜನಾಂಗ, ಪಶ್ಚಿಮ ಮಿಡ್ನಾಪೂರ್, ಬಂಕುರಾ, ಪುರೂಲಿಯಾ ಹಾಗೂ ಝರ್ಗ್ರಾಮ್ ಹಾಗೂ ಬಿರ್ಬಂ ಕೆಲಭಾಗ ಮತ್ತುಅಲ್ಪಸಂಖ್ಯಾತರನ್ನು ಹೆಚ್ಚಾಗಿ ಹೊಂದಿರುವ ಮುರ್ಷಿದಾಬಾದ್ ಪ್ರದೇಶದಲ್ಲಿ ಸುವೇಂದು ಅವರಿಗೆ ಹಿಡಿತವಿದೆ.

English summary
Amit Shah today(Dec. 20)slammed Mamata Banerjee for large-scale corruption and violence in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X