ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣಿಗಳ ಮೇಲೆ ಅಲ್‌ಕೈದಾ ಉಗ್ರರ ದಾಳಿ ಸಂಚು: ಗುಪ್ತಚರ ಸಂಸ್ಥೆ ಮಾಹಿತಿ

|
Google Oneindia Kannada News

ಕೋಲ್ಕತಾ, ನವೆಂಬರ್ 13: ಪಶ್ಚಿಮ ಬಂಗಾಳದಲ್ಲಿ ಅಲ್‌ ಕೈದಾ ಉಗ್ರರ ಸಂಘಟನೆಯು ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆ (ಐಬಿ) ಬಹಿರಂಗಪಡಿಸಿದೆ. ಅಲ್ ಕೈದಾ ಉಗ್ರರು ಬಂಗಾಳದಲ್ಲಿ ಸ್ಲೀಪರ್ ಸೆಲ್‌ಗಳನ್ನು ಬಳಸಿಕೊಂಡು ದಾಳಿ ನಡೆಸಲು ಯೋಜನೆ ಮಾಡುತ್ತಿದೆ ಎಂಬುದನ್ನು ಅದು ತಿಳಿಸಿದೆ.

ನವೆಂಬರ್ 5ರಂದು ಐಬಿ ಸರ್ಕಾರಕ್ಕೆ ಈ ವರದಿ ನೀಡಿದೆ. ಅಲ್ ಕೈದಾ ಭಯೋತ್ಪಾದನಾ ಸಂಘಟನೆಯ ವಿದೇಶಿ ಉಗ್ರರ ನೆರವಿನಿಂದ ಸ್ಥಳೀಯರನ್ನು ತೀವ್ರಗಾಮಿಗಳನ್ನಾಗಿಸಿ ಕೆರಳಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಅಲ್‌ ಕೈದಾದ ಉಗ್ರನೊಬ್ಬನ ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಈ ಮಾಹಿತಿ ದೊರಕಿದೆ.

ಭಯೋತ್ಪಾದನೆ ನಂಟು: ಆಗಸ್ಟ್‌ನಿಂದ ಇಲ್ಲಿಯವರೆಗೆ 7 ಮಂದಿ ಬಂಧಿಸಿದ ಎನ್‌ಐಎಭಯೋತ್ಪಾದನೆ ನಂಟು: ಆಗಸ್ಟ್‌ನಿಂದ ಇಲ್ಲಿಯವರೆಗೆ 7 ಮಂದಿ ಬಂಧಿಸಿದ ಎನ್‌ಐಎ

ಪಾಕಿಸ್ತಾನ ಮೂಲದ ಅಲ್ ಕೈದಾ ಭಯೋತ್ಪಾದನಾ ಸಂಘಟನೆಯು ಆನ್‌ಲೈನ್ ಮಾಧ್ಯಮದ ಮೂಲಕವೇ ಬಂಗಾಳದಲ್ಲಿನ ಸ್ಥಳೀಯರನ್ನು ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

Al Qaeda Planning Terror Attack In West Bengal: IB Report

ಬಂಗಾಳದ ಅನೇಕ ಪ್ರಮುಖ ರಾಜಕೀಯ ನಾಯಕರನ್ನು ಅಲ್ ಕೈದಾ ಸಂಘಟನೆ ಗುರಿಯನ್ನಾಗಿರಿಸಿಕೊಂಡಿದೆ. ಕರಾಚಿ ಮತ್ತು ಪೇಶಾವರಗಳಲ್ಲಿ ನೇಮಕಾತಿ ಕೇಂದ್ರಗಳನ್ನು ಅಲ್‌ ಕೈದಾ ಆರಂಭಿಸಿದೆ. ಅಲ್ಲಿಂದ ಬಂಗಾಳದ ಸ್ಥಳೀಯರನ್ನು ಪ್ರಚೋದಿಸಿ ಅವರನ್ನು ಉಗ್ರರನ್ನಾಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಉಗ್ರಗಾಮಿ ಚಟುವಟಿಕೆಗೆ ಸಂಬಂಧಿಸಿದಂತೆ ಎನ್‌ಐಎ ಇದುವರೆಗೂ 11 ಉಗ್ರರನ್ನು ಬಂಧಿಸಲಾಗಿದೆ.

English summary
Intelligence Bureau (IB) report has revealed Al Qaeda is planning an attack in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X