ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ: ಪ್ರಮುಖ ನಿರ್ಧಾರ ತೆಗೆದುಕೊಂಡ ಅಮಿತ್ ಶಾ

|
Google Oneindia Kannada News

ಕೋಲ್ಕತ್ತಾ, ನ 18: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಗೆ ಪೂರ್ವತಯಾರಿ ಬಿಜೆಪಿ ಮಾಡಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಅಮಿತ್ ಶಾ ಅಲ್ಲಿ ಭೇಟಿ ನೀಡಿ ಬಂದಿದ್ದರು.

ಚುನಾವಣೆಯ ವಿಚಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಂಡಿರುವ ಬಿಜೆಪಿ, ಮುಂದಿನ ತಿಂಗಳಿನಿಂದ ಇನ್ನಷ್ಟು ಆಕ್ರಮಣಕಾರಿಯಾಗಿ ಸಿದ್ದತೆ ನಡೆಸಲು ಯೋಜನೆ ಹಾಕಿಕೊಂಡಿದೆ. ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ, ಚುನಾವಣೆ ಮುಗಿಯುವವರೆಗೆ ಪ್ರತೀ ತಿಂಗಳು ಬಂಗಾಳ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ.

ಉಪಚುನಾವಣೆ, ಬಿಹಾರ ಚುನಾವಣೆ ಯಶಸ್ವಿ: ಅಮಿತ್ ಶಾ ಮುಂದಿನ ಸ್ಟೇಷನ್ ಪಶ್ಚಿಮ ಬಂಗಾಳಉಪಚುನಾವಣೆ, ಬಿಹಾರ ಚುನಾವಣೆ ಯಶಸ್ವಿ: ಅಮಿತ್ ಶಾ ಮುಂದಿನ ಸ್ಟೇಷನ್ ಪಶ್ಚಿಮ ಬಂಗಾಳ

"ಅಮಿತ್ ಶಾ ಮತ್ತು ನಡ್ಡಾ ಮುಂದಿನ ತಿಂಗಳಿನಿಂದ, ಚುನಾವಣೆ ಮುಗಿಯುವವರೆಗೆ ಪ್ರತೀ ತಿಂಗಳು ಪ್ರತ್ಯೇಕವಾಗಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ದಿನಾಂಕ ಇನ್ನಷ್ಟೇ ಅಂತಿಮವಾಗಬೇಕಿದೆ"ಎಂದು ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

Ahead Of West Bengal Assembly Election, Amit Shah, JP Nadda to visit State Atleast Two Days Every Month

"294 ಸದಸ್ಯ ಬಲದ ಅಸೆಂಬ್ಲಿ ಚುನಾವಣೆ ಮುಂದಿನ ವರ್ಷದ ಏಪ್ರಿಲ್ -ಮೇ ತಿಂಗಳಲ್ಲಿ ನಡೆಯಲಿದೆ. ಇಬ್ಬರು ನಾಯಕರು ಪ್ರತೀ ತಿಂಗಳು ಕನಿಷ್ಠ ಎರಡು ಅಥವಾ ಮೂರು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ.ಇದು ಪಕ್ಷ ಬಲವೃದ್ದನೆಗೆ ಇನ್ನಷ್ಟು ಸಹಕಾರಿಯಾಗಲಿದೆ"ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

"ಕಾಂಗ್ರೆಸ್, ಸಿಪಿಎಂ ಮತ್ತು ಟಿಎಂಸಿಗೆ ನಮ್ಮ ಜನತೆ ಅಧಿಕಾರವನ್ನು ಈಗಾಗಲೇ ಕೊಟ್ಟಿದ್ದಾರೆ. ಆದರೆ, ರಾಜ್ಯದ ಅಭಿವೃದ್ದಿಯಲ್ಲಿ ಯಾವುದೇ ಸುಧಾರಣೆಯಾಗಲಿಲ್ಲ. ಕಾನೂನು, ಸುವ್ಯವಸ್ಥೆ ತುಂಬಾ ಹದೆಗೆಟ್ಟಿದೆ. ಬಿಜೆಪಿ ಈ ಎಲ್ಲಾ ವಿಚಾರಕ್ಕೆ ಆದ್ಯತೆ ನೀಡಿ, ವ್ಯವಸ್ಥೆಯನ್ನು ಸರಿದಾರಿಗೆ ತರಲಿದೆ, ಆ ಮೂಲಕ ಮತದಾರರಿಗೆ ನಾವೇ ಉತ್ತಮ ಆಯ್ಕೆಯಾಗಲಿದೆ"ಎನ್ನುವ ವಿಶ್ವಾಸವನ್ನು ಘೋಷ್ ವ್ಯಕ್ತ ಪಡಿಸಿದ್ದಾರೆ.

 ಸುಳ್ಳಿನ ಹರಡುವಿಕೆ, ಭ್ರಮೆ ಸೃಷ್ಟಿವುದೇ ಮೋದಿ ಮಾರ್ಗ ಎಂದ ಕಾಂಗ್ರೆಸ್ ಸುಳ್ಳಿನ ಹರಡುವಿಕೆ, ಭ್ರಮೆ ಸೃಷ್ಟಿವುದೇ ಮೋದಿ ಮಾರ್ಗ ಎಂದ ಕಾಂಗ್ರೆಸ್

ಕಳೆದ ವಾರ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಶಾ ಭೇಟಿ ಅಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರವಾದ ಹೋರಾಟ ನಡೆಸಿ ಕೇಸರಿ ಬಾವುಟ ಹಾರಿಸುವಂತೆ ಅಮಿತ್ ಕರೆ ನೀಡಿದ್ದರು.

English summary
Ahead Of West Bengal Assembly Election, Amit Shah, JP Nadda to visit State Atleast Two Days Every Month,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X