ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಬ್ಯಾನರ್ಜಿ ಘೋಷಿಸಿದ ಅಪರೂಪದ ಆಫರ್: ಇದರಿಂದ ಜನಸಾಮಾನ್ಯರಿಗೆ ಏನು ಲಾಭ?

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 6: ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿದೆ. ಪ್ರಮುಖ ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ನಿರತರಾಗಿದ್ದಾರೆ.

ನಗರದ ಕಾಳಿಘಾಟ್ ನಲ್ಲಿರುವ ಕಿರಿದಾದ ಕೊಠಡಿಯಲ್ಲಿ ಮಮತಾ ಬ್ಯಾನರ್ಜಿಯವರು ತಮ್ಮ ಪಕ್ಷವಾದ ತೃಣಮೂಲ ಕಾಂಗ್ರೆಸ್ಸಿನ 291 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಈ ಪುಟ್ಟ ಕೊಠಡಿಯಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದೇಕೆ? ಸೀಕ್ರೆಟ್ ಬಹಿರಂಗಮಮತಾ ಬ್ಯಾನರ್ಜಿ ಈ ಪುಟ್ಟ ಕೊಠಡಿಯಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದೇಕೆ? ಸೀಕ್ರೆಟ್ ಬಹಿರಂಗ

ಪಾರ್ಥ ಚಟ್ಟೋಪಾಧ್ಯಾಯ, ಅಮಿತ್ ಮಿತ್ರಾ ಸೇರಿದಂತೆ ಇಪ್ಪತ್ತು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಲೀಡರ್‌ಗಳು ಚುನಾವಣೆಯ ವೇಳೆ ಪಕ್ಷದ ಇಮೇಜ್ ಅನ್ನು ಡ್ಯಾಮೇಜ್ ಮಾಡುವುದಾಗಲಿ ಅಥವಾ ಬೇರೊಂದು ಪಕ್ಷಕ್ಕೆ ಸೇರದಂತೆ ತಡೆಯಲು ಮಮತಾ ಹೊಸ ಭರವಸೆಯನ್ನು ನೀಡಿದ್ದಾರೆ.

"ವಯಸ್ಸು ಮತ್ತು ಬೇರೆ ಬೇರೆ ಕಾರಣಗಳಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದು, ಹಿರಿಯ ನಾಯಕರಿಗಾಗಿ ವಿಧಾನ ಪರಿಷತ್ ನಿರ್ಮಿಸುವುದಾಗಿ ಹೇಳಿರುವುದು ಹಲವು ಚರ್ಚೆಗೆ ನಾಂದಿ ಹಾಡಿದೆ.

ಪ.ಬಂಗಾಳದಲ್ಲಿ ಆರು ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ ಪ.ಬಂಗಾಳದಲ್ಲಿ ಆರು ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ

ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡುವ ಪದ್ದತಿಯಿಲ್ಲ

ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡುವ ಪದ್ದತಿಯಿಲ್ಲ

ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡುವ ಪದ್ದತಿಯಿಲ್ಲ. ಈ ಬಾರಿ ತೃಣಮೂಲ ಕಾಂಗ್ರೆಸ್ ಟಿಕೆಟ್ ನೀಡುವಾಗ 80 ವರ್ಷ ಮೇಲ್ಪಟ್ಟವರನ್ನು ಪರಿಗಣಿಸಲಿಲ್ಲ. ಈ ವಿದ್ಯಮಾನ ಪಕ್ಷಕ್ಕೆ ಚುನಾವಣೆಯ ಹೊತ್ತಿಲಲ್ಲಿ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ ಎನ್ನುವ ಮಾಹಿತಿಯ ಮೇರೆಗೆ, ಇಂತಹ ನಾಯಕರನ್ನು ಹಿಡಿದಿಟ್ಟುಕೊಳ್ಳಲು ವಿಧಾನ ಪರಿಷತ್ ನಿರ್ಮಿಸುವ ಭರವಸೆಯನ್ನು ಮಮತಾ ನೀಡಿದ್ದಾರೆ.

ಮಮತಾ ಅವರ ಈ ನಿರ್ಧಾರವನ್ನು ಬಿಜೆಪಿ ಮತ್ತು ಎಡಪಕ್ಷಗಳಿಂದ ವ್ಯಂಗ್ಯ

ಮಮತಾ ಅವರ ಈ ನಿರ್ಧಾರವನ್ನು ಬಿಜೆಪಿ ಮತ್ತು ಎಡಪಕ್ಷಗಳಿಂದ ವ್ಯಂಗ್ಯ

75 ವರ್ಷ ಮೇಲ್ಪಟ್ಟವರಿಗೆ ಬಿಜೆಪಿಯಲ್ಲಿ ಮಾರ್ಗದರ್ಶಕ ಮಂಡಳಿಯಲ್ಲಿ ಸ್ಥಾನ ನೀಡಲಾಗುತ್ತದೆ. ಇದನ್ನು ಬಿಜೆಪಿಯ ವೃದ್ದಾಶ್ರಮ ಎಂದು ಅಣಕವಾಡಲಾಗುತ್ತದೆ. ಟಿಎಂಸಿ ಟಿಕೆಟ್ ವಂಚಿತರಿಗಾಗಿ ವಿಧಾನ ಪರಿಷತ್ ನಿರ್ಮಿಸಿ, ಅದರಲ್ಲಿ ಸದಸ್ಯರನ್ನಾಗಿ ಮಾಡುವ ಭರವಸೆಯನ್ನು ನೀಡಿದ್ದಾರೆ. ಮಮತಾ ಅವರ ಈ ನಿರ್ಧಾರವನ್ನು ಬಿಜೆಪಿ ಮತ್ತು ಎಡಪಕ್ಷಗಳು ವ್ಯಂಗ್ಯವಾಡಲಾರಂಭಿಸಿವೆ.

ವಿಧಾನ ಪರಿಷತ್ ಸ್ಥಾಪಿಸಿ, ಹಿರಿಯ ಮುಖಂಡರಿಗೆ, ಅನುಭವಸ್ಥರಿಗೆ ಸ್ಥಾನ

ವಿಧಾನ ಪರಿಷತ್ ಸ್ಥಾಪಿಸಿ, ಹಿರಿಯ ಮುಖಂಡರಿಗೆ, ಅನುಭವಸ್ಥರಿಗೆ ಸ್ಥಾನ

"ನಾವು ಈ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದ ಮೇಲೆ, ವಿಧಾನ ಪರಿಷತ್ ಸ್ಥಾಪಿಸಿ, ಪಕ್ಷದ ಹಿರಿಯ ಮುಖಂಡರಿಗೆ ಮತ್ತು ಅನುಭವಸ್ಥರಿಗೆ ಅದರಲ್ಲಿ ಸದಸ್ಯರನ್ನಾಗಿ ಮಾಡುತ್ತೇವೆ"ಎಂದು ಮಮತಾ ಬ್ಯಾನರ್ಜಿ ಭರವಸೆಯನ್ನು ನೀಡಿದ್ದಾರೆ.

ವಿಧಾನ ಪರಿಷತ್ ನಿರ್ಮಿಸಲು ಕೋಟ್ಯಾಂತರ ರೂಪಾಯಿ ವೆಚ್ಚ

ವಿಧಾನ ಪರಿಷತ್ ನಿರ್ಮಿಸಲು ಕೋಟ್ಯಾಂತರ ರೂಪಾಯಿ ವೆಚ್ಚ

"ವಿಧಾನ ಪರಿಷತ್ ನಿರ್ಮಿಸಲು ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತದೆ. ತಮ್ಮ ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಮಮತಾ ಇಂತಹ ಭರವಸೆಯನ್ನು ನೀಡುತ್ತಿದ್ದಾರೆಯೇ ಹೊರತು ಜನಸಾಮಾನ್ಯರಿಗೆ ಇದರಿಂದ ಏನೂ ಪ್ರಯೋಜನವಿಲ್ಲ"ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತ ಪಡಿಸಿವೆ.

English summary
West Bengal election 2021: CM Mamata Banerjee to create Vidhan Parishad to accommodate senior, experienced TMC leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X