ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ಸಮೀಕ್ಷೆ: ಬೆಂಗಾಳದಲ್ಲಿ ಬಿಜೆಪಿ ಏಳಿಗೆ ನಡುವೆ ಟಿಎಂಸಿಗೆ ಗೆಲುವು

|
Google Oneindia Kannada News

ಕೋಲ್ಕತಾ, ಫೆಬ್ರವರಿ 28: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ಕ್ಕೆ ಮೊದಲ ಹಂತದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಚುನಾವಣೆಯಲ್ಲಿ ಟಿಎಂಸಿ ಮತ್ತೊಮ್ಮೆ ಜಯಭೇರಿ ಬಾರಿಸಲಿದ್ದು, ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ.

ತೃಣಮೂಲ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಾರ್ಟಿ, ಎಡಪಕ್ಷ ಹಾಗೂ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಅಸಾದುದ್ದಿನ್ ಓವೈಸಿಯ ಎಐಎಂಐಎಂ ಕೂಡ ಕಣದಲ್ಲಿದೆ. ಸದ್ಯಕ್ಕೆ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ಇದ್ದು, ಎಡಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧಿಸುತ್ತಿವೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ...ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ...

2016ರಲ್ಲಿ ಏಪ್ರಿಲ್ 4 ರಿಂದ ಮೇ 5ರ ತನಕ ಏಳು ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು. 294 ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿತ್ತು.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಜಯ

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಜಯ

ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಸ್ಥಾನಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 148 ರಿಂದ 164 ಸ್ಥಾನಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ. ಬಿಜೆಪಿ 92 ರಿಂದ 108 ಸ್ಥಾನ ಗಳಿಸಲಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಹೇಳಿದೆ. ಆದರೆ, ಕಾಂಗ್ರೆಸ್ ಹಾಗೂ ಎಡಪಕ್ಷಗಳು 31 ರಿಂದ 39 ಸ್ಥಾನ ಮಾತ್ರ ಗಳಿಸಿವೆ ಎಂದಿವೆ.

2016ರಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ

2016ರಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ

2016ರಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ 294 ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಕೇವಲ 3 ಸ್ಥಾನ ಗಳಿಸಿತ್ತು. ಕಾಂಗ್ರೆಸ್- ಎಡಪಕ್ಷಗಳು 76 ಸ್ಥಾನ ಗಳಿಸಿದ್ದವು.

ಹಾಲಿ ವಿಧಾನಸಭೆ ಬಲಾಬಲ (294): ಎಐಟಿಸಿ 209, ಜಿಜೆಎಂ 2; ವಿಪಕ್ಷ : ಕಾಂಗ್ರೆಸ್ 23, ಸಿಪಿಐ(ಎಂ) 19, ಎಐಎಫ್ ಬಿ 2, ಆರ್ ಎಸ್ ಪಿ 2; ಬಿಜೆಪಿ 27; 10 ಸ್ಥಾನ ಖಾಲಿ.

ABP-C Voter Opinion Poll: ಪಶ್ಚಿಮ ಬಂಗಾಳದಲ್ಲಿ ಜನರ ಒಲವು ಯಾರ ಪರ?ABP-C Voter Opinion Poll: ಪಶ್ಚಿಮ ಬಂಗಾಳದಲ್ಲಿ ಜನರ ಒಲವು ಯಾರ ಪರ?

ಎಬಿಪಿ -ಸಿವೋಟರ್ ಸಮೀಕ್ಷೆಯಂತೆ ಶೇಕಡವಾರು ಮತ

ಎಬಿಪಿ -ಸಿವೋಟರ್ ಸಮೀಕ್ಷೆಯಂತೆ ಶೇಕಡವಾರು ಮತ

ಎಬಿಪಿ -ಸಿವೋಟರ್ ಸಮೀಕ್ಷೆಯಂತೆ ತೃಣಮೂಲ ಕಾಂಗ್ರೆಸ್ ಸುಮಾರು ಶೇ 43ರಷ್ಟು ಮತಗಳಿಸಲಿದೆ. ಭಾರತೀಯ ಜನತಾ ಪಕ್ಷ ಶೇ 38ರಷ್ಟು ಮತ ಗಳಿಸಲಿದೆ. ಕಾಂಗ್ರೆಸ್ -ಎಡ ಪಕ್ಷಗಳು ಶೇ 13ರಷ್ಟು ಮತಗಳಿಸಲಿವೆ. ಇತರೆ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಶೇ 6ರಷ್ಟು ಮತ ಗಳಿಸುವ ಸಾಧ್ಯತೆಯಿದೆ ಎಂದು ವರದಿ ಬಂದಿದೆ.

ಈ ಹಿಂದಿನ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು?

ಈ ಹಿಂದಿನ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು?

ಟಿಎಂಸಿ: 158
ಬಿಜೆಪಿ: 102
ಎಡಪಕ್ಷ/ಕಾಂಗ್ರೆಸ್: 30
ಇತರೆ: 4

+++
ರಾಜ್ಯ ಸರ್ಕಾರದ ಆಡಳಿತ ಎಷ್ಟು ತೃಪ್ತಿಕರ ?
ತುಂಬಾ ತೃಪ್ತಿಕರ: 16%
ತೃಪ್ತಿಕರ: 22%
ಅತೃಪ್ತಿಕರ: 49%
ಹೇಳಲು ಅಸಾಧ್ಯ: 13%

+++
ಮುಖ್ಯಮಂತ್ರಿ ಆಡಳಿತ ಎಷ್ಟು ತೃಪ್ತಿಕರ
ತುಂಬಾ ತೃಪ್ತಿಕರ: 43%
ತೃಪ್ತಿಕರ: 32%
ಅತೃಪ್ತಿಕರ: 22%
ಹೇಳಲು ಅಸಾಧ್ಯ: 03%

English summary
ABP C-Voter West Bengal Elections 2021 Opinion Poll: CM Mamata Banerjee led TMC Likely To Return To Power and BJP performace will be improved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X