ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ: 9 ತಿಂಗಳ ಮಗು ಸೇರಿ ಕುಟುಂಬದ 5 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಕೊಲ್ಕತ್ತ, ಮಾರ್ಚ್ 28: ಬಂಗಾಳದ 9 ತಿಂಗಳ ಮಗು ಸೇರಿ ಕುಟುಂಬದ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.

Recommended Video

2 people disobeying home quarentine in Chitradurga | Oneindia Kannada

ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 9 ತಿಂಗಳ ಮಗು, 6 ವರ್ಷದ ಬಾಲಕಿ, 11 ವರ್ಷದ ಬಾಲಕ, 27 ವರ್ಷ ಹಾಗೂ 45 ವರ್ಷದ ಇಬ್ಬರು ಮಹಿಳೆಯರು ಸೇರಿ ಒಟ್ಟು 6 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಇತ್ತೀಚೆಗಷ್ಟೇ ಕೊರೊನಾ ಪಾಸಿಟಿವ್ ಬಂದಿದ್ದ ಯುಕೆಯ ವ್ಯಕ್ತಿಯ ಜೊತೆಗೆ 27 ವರ್ಷದ ಮಹಿಳೆ ಸಂಪರ್ಕದಲ್ಲಿದ್ದರು. ಮಹಿಳೆಯು ಪಶ್ಚಿಮ ಬಂಗಾಳದ ನಾದಿಯಾದವಳು ಈಗ ಉತ್ತರಖಂಡದಲ್ಲಿ ನೆಲೆಸಿದ್ದಾರೆ.

baby

ವ್ಯಕ್ತಿ ಯುಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆತ ದೆಹಲಿಗೆ ಬಂದ ತಕ್ಷಣವೇ ಗೃಹಬಂಧನದಲ್ಲಿಡಲಾಗಿದೆ. ಆದರೆ ಗೃಹ ಬಂಧನ ಬಿಟ್ಟು ಕುಟುಂಬದ ಯಾವುದೋ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟಿದ್ದ.

ಕೊರೊನಾ ವೈರಸ್‌ ಹತ್ತಿಕ್ಕಲು ಲಸಿಕೆ ಸಿದ್ದ ಎಂದ ವೈದ್ಯರುಕೊರೊನಾ ವೈರಸ್‌ ಹತ್ತಿಕ್ಕಲು ಲಸಿಕೆ ಸಿದ್ದ ಎಂದ ವೈದ್ಯರು

ಮಾರ್ಚ್ 23ರವರೆಗೆ ಕುಟುಂಬದ ಎಂಟು ಮಂದಿಯನ್ನು ಗೃಹಬಂಧನದಲ್ಲಿಡಲಾಗಿತ್ತು. ಅದರಲ್ಲಿ ಐದು ಮಂದಿಗೆ ಕೊರೊನಾ ವೈರಸ್ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಾದಿಯಾ ಜಿಲ್ಲೆಯಲ್ಲಿ ಈ ಐವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆ ಕುಟುಂಬದ ಸಂಪರ್ಕದಲ್ಲಿದ್ದ 18 ಮಂದಿಯನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಶಂಕಿತ 33 ಮಂದಿಯ ತಪಾಸಣೆ ಮಾಡಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ. ಒಟ್ಟು 15 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.

English summary
Five members of a family, including three children, tested positive for COVID-19 in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X