ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳಕ್ಕೆ ಮರಳಿದ 400 ಕಾರ್ಮಿಕರಿಗೆ ಕೊರೊನಾ ಪಾಸಿಟಿವ್

|
Google Oneindia Kannada News

ಕೊಲ್ಕತ್ತಾ, ಮೇ 28: ವಿವಿಧ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದ ಸುಮಾರು 400ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Recommended Video

ಕಲಬುರಗಿಯಲ್ಲೊಂದು ಕರುಳು ಕಿವಿಚುವ ದೃಶ್ಯ | Oneindia Kannada

ಈ ಪೈಕಿ ಮಾಲ್ಡಾ, ಮುರ್ಷಿದಾಬಾದ್, ಬಿರ್ಭುಮ್, ಹೂಗ್ಲಿ ಮತ್ತು ಹೌರಾ ಜಿಲ್ಲೆಯ ನಿವಾಸಿಗಳೇ ಹೆಚ್ಚು. ಈ ಎಲ್ಲರೂ ಕೆಲವು ದಿನಗಳ ಹಿಂದೆಯಷ್ಟೆ ರಾಜ್ಯಕ್ಕೆ ಮರಳಿದ್ದರು.

ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ, ಊಟ ಕೊಡಿ: ಸುಪ್ರೀಂಕೋರ್ಟ್ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ, ಊಟ ಕೊಡಿ: ಸುಪ್ರೀಂಕೋರ್ಟ್

ಹೊರರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಬರಮಾಡಿಕೊಳ್ಳುವಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಹಿಂದೇಟು ಹಾಕಿತ್ತು.

400 Migrant Workers Tested COVID19 Positive

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದರು. ಪಶ್ಚಿಮ ಬಂಗಾಳ ಸರ್ಕಾರ ಶ್ರಮಿಕ್ ರೈಲುಗಳ ಸಂಚಾರಕ್ಕೆ ಅನುಮತಿ ಕೊಡ್ತಿಲ್ಲ ಎಂದು ದೂರಿದ್ದರು. ರೈಲ್ವೆ ಇಲಾಖೆ ಕೂಡ ಮಮತಾ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.

ಇದು ಪ್ರತಿಯೊಬ್ಬರ ಕರುಳು ಹಿಂಡುವ ಕರುಣಾಜನಕ ಸ್ಟೋರಿಇದು ಪ್ರತಿಯೊಬ್ಬರ ಕರುಳು ಹಿಂಡುವ ಕರುಣಾಜನಕ ಸ್ಟೋರಿ

ಮೇ 27ರಿಂದ ಶ್ರಮಿಕ್ ರೈಲು ಸಂಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅನುಮತಿ ನೀಡಿದ್ದು, ಹೊರರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ರಾಜ್ಯಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ.

400 Migrant Workers Tested COVID19 Positive

ಕಳೆದ ಒಂದು ವಾರದಲ್ಲಿ ಮಾಲ್ಡಾದಲ್ಲಿ 70 ಹೊಸ ಕೋವಿಡ್ -19 ಪ್ರಕರಣಗಳು ಮತ್ತು ಮುರ್ಷಿದಾಬಾದ್ 53 ಹೊಸ ಪ್ರಕರಣಗಳು, ಹೂಗ್ಲಿ ಜಿಲ್ಲೆಯಲ್ಲಿ 84 ಮತ್ತು ಹೌರಾ ಜಿಲ್ಲೆಯಲ್ಲಿ 98 ಕೇಸ್, ಬಂಕುರಾದಲ್ಲಿ 15 ಮತ್ತು ನಾಡಿಯಾ 19 ಪ್ರಕರಣಗಳು, ಪೂರ್ವ ಬುರ್ದ್ವಾನ್‌ನಲ್ಲಿ 21 ಹೊಸ ಪ್ರಕರಣಗಳು ದಾಖಲಾಗಿವೆ.

ಪ್ರಸ್ತುತ, ರಾಜ್ಯದಲ್ಲಿ 4192 ಜನರಿಗೆ ಸೋಂಕು ದೃಢವಾಗಿದೆ. 2325 ಜನರು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1578 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 289 ಮಂದಿ ಸಾವನ್ನಪ್ಪಿದ್ದಾರೆ.

English summary
In West bengal, More than 400 migrant workers who returned from other state in recent days tested covid19 positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X