ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ವರ್ಷದ ಅವಿಜಿತ್ ಗೆ ಬ್ಲಡ್ ಕ್ಯಾನ್ಸರ್, ನಾವೆಲ್ಲ ಸೇರಿ ಅವನ ಉಳಿಸೋಣ

Google Oneindia Kannada News

ಮೂರು ವರ್ಷದ ನನ್ನ ಮಗ ಒಂದು ದಿನ ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದ ಹಾಗೆ ಅತಿಯಾಗಿ ಬೆವರುತ್ತಿದ್ದ. ಜೊತೆಗೆ ಒಮ್ಮೆಲೇ ತೀವ್ರವಾದ ರಕ್ತದ ಕಲೆಗಳು ಕಾಣಿಸಿಕೊಂಡವು ಇದನ್ನು ಕಂಡ ನನಗೆ ಹೃದಯವೇ ಒಡೆದಂತಾಯಿತು. ಮಗನ ಅನಾರೋಗ್ಯದ ಚಿಕಿತ್ಸೆ ಸಲುವಾಗಿ 1800 ಕಿ.ಮೀ. ದೂರದಲ್ಲಿರುವ ಚೆನ್ನೈನ ಅಪೋಲೋ ಆಸ್ಪ್ರತೆಗೆ ಕರೆದೊಯ್ದೆ. ಪ್ರಪಂಚ ಎಂದರೇನು ಎಂಬುದು ಕೂಡ ತಿಳಿಯದ ನನ್ನ ಮಗನಿಗೆ ಕ್ಯಾನ್ಸರ್ ಗೆ ಎನ್ನುವುದು ತಿಳಿದು, ಭೂಮಿಯೇ ಬಾಯಿ ತೆರೆದಂತಾಯಿತು ಎನ್ನುತ್ತಾರೆ ನೆರವಿನ ನಿರೀಕ್ಷೆಯಲ್ಲಿರುವ ಅವಿಜಿತ್ ತಂದೆ.

ಮುದ್ದು ಮಗನೊಂದಿಗೆ ಕೋಲ್ಕತ್ತಾದಲ್ಲಿ ಸಂತೋಷದ ಜೀವನ ನಡೆಸುತ್ತಿದ್ದರು ಅರ್ಚನಾ ಮತ್ತು ಅವರ ಪತಿ. ಅವಿಜಿತ್ ಇನ್ನೇನು ಅಂಗನವಾಡಿಯಲ್ಲಿ ಕಲಿಕೆ ಆರಂಭಿಸಬೇಕಿತ್ತು. ಅಲ್ಲಿಗೆ ಹೋಗಲು ಬೇಕಾದ ಚೀಲ, ಬಣ್ಣದ ಪೆನ್ಸಿಲ್ ಗಳು ಎಲ್ಲವನ್ನೂ ಸಿದ್ಧ ಮಾಡಿದ್ದರು. ಆದರೆ ಅವನ ದುರದೃಷ್ಟವು ಅವೆಲ್ಲವನ್ನೂ ಕಸಿದುಕೊಂಡಿದೆ. ಅವನನ್ನು ನೋಡನೋಡುತ್ತಿದ್ದಂತೆ ಸಾಕಷ್ಟು ತೂಕ ಕಳೆದುಕೊಂಡಿದ್ದ.

3 year old Avijit who suffers from cancer will not survive without urgent treatment

ಅದು ಬೇಸಿಗೆಯ ಕಾಲ. ಆ ಸಮಯದಲ್ಲಿ ನನ್ನ ಮಗ ಚಳಿಯಿಂದ ನಡುಗುತ್ತಿದ್ದ. ತನ್ನ ಹಾಸಿಗೆಯಿಂದ ಎದ್ದು ಬರಲು ಅವನಿಗೆ ಇಷ್ಟವಿರಲಿಲ್ಲ. ಕಂಬಳಿಯ ಹೊದಕೆಯಲ್ಲಿ ಮುಚ್ಚಿಕೊಂಡಿದ್ದ. ಅವನಿಗೆ ಅತಿಯಾದ ಜ್ವರ ಬಂದಿದೆ. ಹಾಗಾಗಿಯೇ ಅವನು ನಡುಗುತ್ತಿದ್ದಾನೆ ಎನ್ನುವುದು ನಮ್ಮ ಅರಿವಿಗೆ ಬಂತು. ಮರುದಿನ ಬೆಳಗ್ಗೆ ಅವನ ತಲೆ ದಿಂಬುಗಳು ರಕ್ತದ ಕಲೆಗಳಿಂದ ಕೂಡಿದ್ದವು. ಅದನ್ನು ನೋಡಿದಾಗ ಎದೆಯು ಒಡೆದಂತಾಯಿತು. ಮೂಗಿನಿಂದ ಹಾಗೂ ಬೆವರಿನ ಮೂಲಕ ರಕ್ತಕಣಗಳು ಸಿಂಪಡಿಸಿದಂತಾಗಿದ್ದವು. ರಾತ್ರಿಯೆಲ್ಲಾ ಅವನ ಅನಾರೋಗ್ಯದಿಂದ ಬಳಲಿದ್ದು ಬಹಳ ದುಃಖ ಉಂಟು ಮಾಡಿತು.

3 year old Avijit who suffers from cancer will not survive without urgent treatment

ದಿನ ಕಳೆದಂತೆ ಅವಿಜಿತ್ ಆಹಾರವನ್ನು ತೆಗೆದುಕೊಳ್ಳುವುದು ಸಹ ನಿರಾಕರಿಸಿದ. ಜೊತೆಗೆ ಹೊಟ್ಟೆ ನೋವು ಎಂದು ಬಳಲುತ್ತಿದ್ದ. ಕೋಲ್ಕತ್ತಾದಲ್ಲಿನ ಹತ್ತಿರದ ಆಸ್ಪತ್ರೆಗೆ ಪಾಲಕರು ಕರೆದೊಯ್ದರು. ಅಲ್ಲಿಯ ವೈದ್ಯರು ಸೂಕ್ತ ತಪಾಸಣೆ ನಡೆಸುವುದರ ಮೂಲಕ ಕೆಲವು ಔಷಧಿಗಳನ್ನು ಸೇವಿಸಲು ಸಲಹೆ ನೀಡಿದರು. ಒಂದು ವಾರದ ಬಳಿಕ ಜ್ವರವು ಕಡಿಮೆಯಾಗದೆ ಹಾಗೆಯೇ ಉಳಿದುಕೊಂಡಿತು. ಔಷಧಗಳು ಸಹ ಯಾವುದೂ ಪರಿಣಾಮ ಬೀರುತ್ತಿಲ್ಲ ಎನ್ನುವುದು ತಿಳಿಯಿತು.

ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಅವಿಜಿತ್ ನ ತಂದೆ ರಕ್ತ ಪರೀಕ್ಷೆ ಮಾಡಲು ಮುಂದಾದರು. ರಕ್ತ ಪರೀಕ್ಷೆಗಾಗಿ ರಕ್ತ ತೆಗೆಯುವಾಗ ಮಗನು ನನ್ನನ್ನು ಬಿಗಿಯಾಗಿ ತಬ್ಬಿಕೊಂಡಿದ್ದ. ಅವನ ಅಳು ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಅವನ ಪ್ಲೇಟ್ ಲೆಟ್ ಎಣಿಕೆ ಅಪಾಯಕಾರಿಯಾಗಿತ್ತು. ಅವರಿಗೆ ಹೆಚ್ಚು ರಕ್ತದ ಅಗತ್ಯವಿದೆ ಎನ್ನುವುದು ನಮಗೆ ತಿಳಿಯಿತು. ಅವನಿಗೆ ರಕ್ತದ ಅಗತ್ಯವಿದೆ, ಅದನ್ನು ಭರಿಸಲು ನಾವು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ ಯಾರು ಸಹ ನನ್ನ ಮಗನ ಆರೋಗ್ಯ ಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿರಲಿಲ್ಲ. ಅಜಾಗರೂಕತೆಯ ಕಾರಣದಿಂದ ಅವಿಜಿತ್ ಗೆ ಕೆಲವು ಸೋಂಕುಗಳು ಅಂಟಿಕೊಂಡವು ಎಂದು ದುಃಖಿಸುತ್ತಾರೆ ಆ ಬಾಲಕನ ತಂದೆ.

3 year old Avijit who suffers from cancer will not survive without urgent treatment

ಅಂತಿಮವಾಗಿ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಲಾಯಿತು. ಅದು ಕೋಲ್ಕತ್ತಾದಿಂದ 1800 ಕಿ.ಮೀ. ದೂರದಲ್ಲಿತ್ತು. ಮಗನ ಚೇತರಿಕೆಯೊಂದೇ ಪಾಲಕರ ಆಸೆಯಾಗಿತ್ತು. ಅಲ್ಲಿಯ ಆಸ್ಪತ್ರೆಯಲ್ಲಿ ನಡೆಸಿದ ತಪಾಸಣೆ ಹಾಗೂ ಪರೀಕ್ಷೆಯ ಮೂಲಕ ಅವಿಜಿತ್ ಲ್ಯುಕೇಮಿಯಾ ಎನ್ನುವ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎನ್ನುವುದು ತಿಳಿಯಿತು. ಈ ಸಮಸ್ಯೆಯಿಂದಾಗಿ ಅವನ ಕೋಶಗಳು ಬಹುಬೇಗ ಸಾಯುತ್ತಿವೆ. ಅದಕ್ಕೆ ಕಿಮೊಥೆರಪಿ ಒಂದೇ ಪರಿಹಾರ ಎಂದು ಹೇಳಿದರು.

"ನಮ್ಮ ಮಗುವಿನ ಚೇತರಿಕೆಗೆ ಕಿಮೊಥೆರಪಿಯನ್ನು ಪ್ರಾರಂಭಿಸುವುದನ್ನು ಬಿಟ್ಟರೆ ನಮಗೆ ಇನ್ಯಾವುದೇ ಆಯ್ಕೆ ಇರಲಿಲ್ಲ. ಈ ಚಿಕಿತ್ಸೆಯನ್ನು ಕೊಡಿಸಲು ನಮಗೆ ಒಟ್ಟು 15 ಲಕ್ಷ ರುಪಾಯಿ ಬೇಕಾಗುವುದು. ಇಲ್ಲಿಯವರೆಗೆ ವೈದ್ಯಕೀಯ ಪರೀಕ್ಷೆ ಹಾಗೂ ಔಷಧಕ್ಕಾಗಿ 2 ಲಕ್ಷ ರುಪಾಯಿಯನ್ನು ಭರಿಸಿದ್ದೇವೆ. ಮಗನ ಚೇತರಿಕೆಗೆ ಅನುಕೂಲವಾಗಲೆಂದು ಆಸ್ಪತ್ರೆಯ ಬಳಿಯೇ ಒಂದು ಪುಟ್ಟ ಕೋಣೆಯನ್ನು ಬಾಡಿಗೆಗೆ ಪಡೆದಿದ್ದೇವೆ. ಇದು ನಮಗೆ ಹೊಸದಾದ ನಗರ ಪ್ರದೇಶವಾದ್ದರಿಂದ ಇಲ್ಲಿಯ ಭಾಷೆಯ ಪರಿಚಯವೂ ಇಲ್ಲ. ಜೊತೆಗೆ ಕೆಲಸವನ್ನು ಹುಡುಕಲು ಸಹ ಕಷ್ಟವಾಗುತ್ತಿದೆ. ಆದರೆ ನನ್ನ ಪ್ರಯತ್ನವನ್ನು ಬಿಡುವುದಿಲ್ಲ. ಕೆಲಸಕ್ಕಾಗಿ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇದ್ದೇನೆ" ಎಂದು ನೊಂದ ಮನಸ್ಸಿನಿಂದ ಹೇಳುತ್ತಾರೆ ಅವಿಜಿತ್ ತಂದೆ.

3 year old Avijit who suffers from cancer will not survive without urgent treatment

ಈ ಸಂಸಾರವು ಈಗಾಗಲೇ ಪಡೆದ ಸಾಲವನ್ನು ಮರು ಪಾವತಿಸಲು ಹೆಣಗಾಡುತ್ತಿದೆ. ಸಾಲದ ಬಡ್ಡಿಯು ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿದೆ. ಹೊಸ ಪ್ರದೇಶದಲ್ಲಿ ತಮ್ಮ ಕಷ್ಟಗಳನ್ನು ಸಹಿಸಿಕೊಳ್ಳುವುದರ ಮೂಲಕ ತಾಳಿಕೊಂಡಿದ್ದಾರೆ.

3 year old Avijit who suffers from cancer will not survive without urgent treatment

ನೀವು ಹೇಗೆ ಸಹಾಯ ಮಾಡಬಹುದು?

ಜಗತ್ತಿನಲ್ಲಿ ತನ್ನ ಪಾತ್ರವನ್ನು ಇನ್ನೇನು ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ಮೂರು ವರ್ಷದ ಪುಟ್ಟ ಕಂದನಿಗೆ ಕ್ಯಾನ್ಸರ್ ಮಾರಿ ತಗುಲಿದೆ. ಇದೀಗ ಕಿಮೊಥೆರಪಿಯ ಮೂಲಕ ಮಾತ್ರ ಅವನು ಉಳಿದುಕೊಳ್ಳುವ ಸಾಧ್ಯತೆಗಳಿವೆ. ನೀವು ಮಾಡುವ ಒಂದು ಪುಟ್ಟ ಸಹಾಯವು ಅವನಿಗೆ ಜೀವವನ್ನು ಮರುಕಳಿಸಿದಂತಾಗುವುದು. ನೀವು, ನಿಮ್ಮ ಸ್ನೇಹಿತರು ಹಾಗೂ ಬಂಧುಗಳೊಂದಿಗೂ ಹಂಚಿಕೊಂಡು ಸಹಾಯ ಹಸ್ತ ನೀಡಲು ಮುಂದಾಗಬಹುದು. ನಾವು ಒಬ್ಬರಿಗೆ ಸಹಾಯ ಮಾಡಿದರೆ ನಮಗೂ ಯಾರಾದರೂ ಅಗತ್ಯವಿರುವಾಗ ಸಹಾಯ ಮಾಡುತ್ತಾರೆ ಎನ್ನುವುದನ್ನು ಅರಿಯುವುದರ ಮೂಲಕ ಧನ ಸಹಾಯ ಮಾಡೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X