• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲ್ಕತ್ತದಲ್ಲಿ 3 ದಿನಗಳಲ್ಲಿ 250 ನಾಯಿಗಳ ಸಾವು, ವೈರಸ್ ಶಂಕೆ

|

ಕೋಲ್ಕತ್ತಾ,ಫೆಬ್ರವರಿ 21: ಕೋಲ್ಕತ್ತದಲ್ಲಿ 3 ದಿನಗಳಲ್ಲಿ 250 ನಾಯಿಗಳು ಮೃತಪಟ್ಟಿದ್ದು, ಹೊಸ ವೈರಸ್ ಶಂಕೆ ವ್ಯಕ್ತವಾಗುತ್ತಿದೆ.

ಮೊದ ಮೊದಲು ವಿಷವಿಟ್ಟು ಯಾರಾದರೂ ಹತ್ಯೆ ಮಾಡಿದ್ದಾರೇನೋ ಅಂದುಕೊಂಡರೂ ಕೂಡ ಇದೀಗ ಅದ್ಯಾವುದೂ ಅಲ್ಲ ಹೊಸ ವೈರಸ್ ಇರಬೇಕು ಎನ್ನುವ ಶಂಕೆ ವ್ಯಕ್ತವಾಗಿದೆ.

ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ, ಬಿಬಿಎಂಪಿ ಏನ್ಮಾಡ್ತಿದೆ? ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ, ಬಿಬಿಎಂಪಿ ಏನ್ಮಾಡ್ತಿದೆ?

ಇನ್ನು ಸಾವನ್ನಪ್ಪಿದ ನಾಯಿಗಳನ್ನು ಬಿಷ್ಣುಪುರ ಪುರಸಭೆ ಸಿಬ್ಬಂದಿಗಳು ಸಾಮೂಹಿಕವಾಗಿ ಡಂಪಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ನಾಯಿಗಳ ಸಾವಿಗೆ ನಿಗೂಢ ಸೋಂಕು ಕಾರಣ ಎಂದು ಶಂಕಿಸಲಾಗಿದ್ದು, ಸಾಮಾನ್ಯವಾಗಿ ಬಂಗಾಳದಲ್ಲಿ ನಾಯಿಗಳಿಗೆ ಈ ಸಮಯದಲ್ಲಿ ಸೋಂಕು ಸಾಮಾನ್ಯ. ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ.

ನಾಯಿಗಳಿಗೆ ಹರಡಿದ ಸೋಂಕು ಇತರ ಪ್ರಾಣಿ ಅಥವಾ ಮನುಷ್ಯರಿಗೆ ಹರಡುವ ಸಾಧ್ಯತೆ ಇಲ್ಲ. ನಾಯಿಗಳ ದ್ರವವನ್ನು ಪಡೆದಿದ್ದೇವೆ ಪರೀಕ್ಷೆ ಮಾಡುತ್ತೇವೆ ಎಂದು ಸರ್ಕಾರಿ ಪಶುವೈದ್ಯರು ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ಶಾನ್ವಗಳು ಸಾವನ್ನಪ್ಪಿದೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ ಈ ಘಟನೆ ನಡೆದಿದ್ದು, ನಾಯಿಗಳ ದಿಢೀರ್ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಕಳೆದ ಮಂಗಳವಾರ 60, ಬುಧವಾರ 97, ಗುರುವಾರ 45 ಸೇರಿದಂತೆ ಮೂರು ದಿನಗಳಲ್ಲಿ ಸುಮಾರು 200 ನಾಯಿಗಳು ಸಾವನ್ನಪ್ಪಿವೆ.

ಈ ಕುರಿತಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಮೃತಪಟ್ಟ ನಾಯಿಗಳ ದ್ರವವನ್ನು ಸಂಗ್ರಹಿಸಿ ಕೊಲ್ಕತ್ತಾಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಾಯಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

English summary
More than 250 stray dogsmost of them puppieswere found dead in the pastthree days in Bishnupur, Bankura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X