• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳದಲ್ಲಿ ಟಾಟಾ ಹೂಡಿಕೆ ಮಾಡುವುದಾದರೆ ಸ್ವಾಗತ: ಟಿಎಂಸಿ

|
Google Oneindia Kannada News

ಪಶ್ಚಿಮ ಬಂಗಾಳ, ಜುಲೈ 20: ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡಲು ಟಾಟಾ ಸಂಸ್ಥೆ ಮತ್ತೆ ಮುಂದಾದರೆ ಸ್ವಾಗತ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುವುದರ ಕುರಿತು ಟಾಟಾ ಸಮೂಹದ ಜತೆ ಚರ್ಚೆ ನಡೆಸಲಾಗುತ್ತಿದೆ.

ರಾಜ್ಯದ ಸಿಂಗೂರ್‌ನಲ್ಲಿ ಟಾಟಾ ಕಂಪನಿ ಸಣ್ಣ ಗಾತ್ರದ ಕಾರುಗಳ ಉತ್ಪಾದನಾ ಘಟಕ ಸ್ಥಾಪನೆ ಕುರಿತಂತೆ ಭೂ ಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದ 13 ವರ್ಷದ ಬಳಿಮಕ ಇದೀಗ ಟಾಟಾ ಜತೆ ಮಾತುಕತೆ ನಡೆಯುತ್ತಿದೆ.

ಯಾವುದೇ ಪ್ರಮುಖ ಉದ್ಯಮ ಸಂಸ್ಥೆಗಳು ಆದಷ್ಟು ಬೇಗ ಎರಡು ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಬೇಕು ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಬಯಸುತ್ತದೆ ಎಂದು ತಿಳಿಸಿದರು.

ಉದ್ಯೋಗಾವಕಾಶ ಸೃಷ್ಟಿಯೇ ಟಿಎಂಸಿ ಸರ್ಕಾರದ ಮೊದಲ ಆದ್ಯತೆ ಎಂದು ಪ್ರತಿಪಾದಿಸಿರುವ ಸಚಿವ ಚಟರ್ಜಿ, ಉದ್ಯೋಗಾವಕಾಶಗಳ ಸೃಷ್ಟಿ ಸಾಮರ್ಥ್ಯ ಆಧರಿಸಿ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದರು.

"ಸಮಸ್ಯೆ ಇದ್ದಿದ್ದು ಆಗಿನ ಎಡಪಂಥದ ಸರ್ಕಾರ ಮತ್ತು ಒತ್ತಾಯದಿಂದ ಭೂಸ್ವಾಧೀನ ಪಡಿಸಿಕೊಳ್ಳಲು ಅದರ ನೀತಿಯಲ್ಲಿ, ರಾಜ್ಯದಲ್ಲಿಬಂಡವಾಳ ಹೂಡಿಕೆಗೆ ಟಾಟಾ ಸಮೂಹಕ್ಕೆ ಎಂದಿಗೂ ಮುಕ್ತ ಸ್ವಾತಂತ್ರ್ಯವಿದೆ' ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

ಟಾಟಾ ಕಂಪನಿಯು ತನ್ನ ಕಚೇರಿಗಳಾದ ಟಾಟಾ ಸೆಂಟರ್‌ ಅನ್ನು ರಾಜ್ಯದಲ್ಲಿ ಸ್ಥಾಪಿಸುವ ಆಸಕ್ತಿ ಹೊಂದಿದೆ. ಈಗಾಗಲೇ ಟಿಸಿಎಸ್‌, ಟಾಟಾ ಮೆಟಾಲಿಕ್ ಇವೆ. ಉಳಿದಂತೆ, ಇತರೆ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿಯನ್ನು ತೋರುವುದಾದರೆ ಸ್ವಾಗತ ಎಂದು ಹೇಳಿದ್ದಾರೆ.

ಟಾಟಾ ಜತೆಗೆ ನಮಗೆ ಯಾವುದೇ ದ್ವೇಷವಿಲ್ಲ, ಅವರ ಜತೆಗೆ ಜಗಳವೂ ಆಗಿಲ್ಲ, ಟಾಟಾ ಸಮೂಹ ದೇಶದ ಅತಿದೊಡ್ಡ ಗೌರವಾನ್ವಿತ ಉದ್ಯಮ ಸಂಸ್ಥೆಯಾಗಿದೆ. ಸಿಂಗೂರ್‌ನ ವೈಫಲ್ಯಕ್ಕಾಗಿ ನಾವು ಟಾಟಾ ಸಮೂಹವನ್ನು ದೂರುವುದಿಲ್ಲ ಎಂದರು.

English summary
Thirteen years after their small car project was forced out of West Bengal following the anti-land acquisition movement in Singur, Industry and IT Minister Partha Chatterjee has said talks are on with the Tatas for big-ticket investments in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X