ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರಗಂಗೆಯಲ್ಲಿ ಬಸವಳಿದ ಮಂಗಗಳಿಗೆ ಆಹಾರ ನೀಡಿದ ಯುವಕರು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 02: ಕೊರೊನಾ ಮನುಷ್ಯರ ಮೇಲಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಸಂಕಟ ತಂದಿದೆ. ಪ್ರವಾಸಿ ತಾಣಗಳಲ್ಲಿ ಬೀಡು ಬಿಟ್ಟಿರುವ, ಇಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರದ ಮೇಲೆಯೇ ಅವಲಂಬಿತವಾಗಿರುವ ಪ್ರಾಣಿಗಳಿಗೆ ಈಗ ಆಹಾರದ ಬರ ಬಂದಿದೆ.

ಲಾಕ್ ಡೌನ್ ನಿಂದಾಗಿ ಪ್ರವಾಸಿ ತಾಣಗಳು ಬಂದ್ ಆಗಿದ್ದು, ಇಲ್ಲಿರುವ ಪ್ರಾಣಿ ಪಕ್ಷಿಗಳೂ ಹಸಿವಿನಿಂದ ಕಂಗಾಲಾಗುತ್ತಿವೆ. ಕೋಲಾರದ ಅಂತರ ಗಂಗೆಯಲ್ಲೂ ನೂರಾರು ಮಂಗಗಳಿದ್ದು, ಲಾಕ್ ಡೌನ್ ಸಮಯದಲ್ಲಿ ಆಹಾರವಿಲ್ಲದೇ ಬಳಲುತ್ತಿವೆ.

ಕೋಲಾರದಲ್ಲಿ ಹಸಿದ ಹೊಟ್ಟೆ ತುಂಬಿಸಿದ ಯುವಶಕ್ತಿಕೋಲಾರದಲ್ಲಿ ಹಸಿದ ಹೊಟ್ಟೆ ತುಂಬಿಸಿದ ಯುವಶಕ್ತಿ

Youth Gave Food To Monkeys In Antaragange

ಪ್ರವಾಸಿಗರಿಲ್ಲದೇ ಅಂತರಗಂಗೆ ತಾಣ ಬಿಕೋ ಎನ್ನುತ್ತಿದೆ. ಅಂತರಗಂಗೆ ಬೆಟ್ಟದಲ್ಲಿ ಆಹಾರ, ನೀರು ಇಲ್ಲದೇ ಬಿಸಿಲ ತಾಪದಲ್ಲಿ ನೂರಾರು ಕೋತಿಗಳು ಬಸವಳಿದಿವೆ. ಈ ಮಂಗಗಳ ಸ್ಥಿತಿಯನ್ನು ಕಂಡ ಯುವಕರ ತಂಡ ಆಹಾರ ನೀಡಿದೆ. ಯುವ ಫೌಂಡೇಶನ್ ಹಾಗೂ ಗಾಂಧಿನಗರದ ಯುವಕರು ನೂರಾರು ಕೋತಿಗಳಿಗೆ ಹಣ್ಣು, ಬಿಸ್ಕತ್, ತರಕಾರಿ, ಬಾಳೆಹಣ್ಣು, ಬ್ರೆಡ್ ಹಾಗೂ ಕುಡಿಯುವ ನೀರನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

English summary
Youth gave food to hundreds of monkeys which were starving in antaragange tourist place,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X