• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರ; ಮಹಿಳೆ ಸಾವು, ರಸ್ತೆಯಲ್ಲೇ 4 ಗಂಟೆ ಉಳಿದ ಶವ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 29; ಕೊರೊನಾ ಭಯದಲ್ಲಿ ಜನರು ಮಾನವೀಯತೆಯನ್ನು ಮರೆತಿದ್ದಾರೆ. ಕೋಲಾರದಲ್ಲಿ ರಸ್ತೆಯಲ್ಲಿ ಕುಸಿದುಬಿದ್ದು ಮೃತಪಟ್ಟ ಮಹಿಳೆಯ ಶವ ನಾಲ್ಕು ಗಂಟೆಯಾದರೂ ಅನಾಥವಾಗಿ ಬಿದ್ದಿದ್ದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಸಂಗೊಂಡಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಇದೇ ಗ್ರಾಮದ 45 ವರ್ಷದ ನೀಲಾವತಿ ಎಂದು ಗುರುತಿಸಲಾಗಿದೆ.

ವೈರಲ್ ವಿಡಿಯೋ; ಬಿಡದಿಯಲ್ಲಿ ಜೆಸಿಬಿಯಲ್ಲಿ ಶವ ಸಾಗಾಟ! ವೈರಲ್ ವಿಡಿಯೋ; ಬಿಡದಿಯಲ್ಲಿ ಜೆಸಿಬಿಯಲ್ಲಿ ಶವ ಸಾಗಾಟ!

ನೀಲಾವತಿ ದಾರಿಯಲ್ಲಿ ಕುಸಿದು ಬಿದ್ದು ಮೃತಪಟ್ಟರೂ ಜನರು ಸಹಾಯಕ್ಕೆ ಧಾವಿಸಲಿಲ್ಲ. ಸಾವನ್ನಪ್ಪಿ ಮೂರು-ನಾಲ್ಕು ಗಂಟೆಯಾದರೂ ಕೋವಿಡ್ ಭಯದಿಂದ ಮಹಿಳೆ ಶವದ ಬಳಿಗೆ ಯಾರೊಬ್ಬರೂ ಹೋಗಲಿಲ್ಲ.

ಕೋಲಾರ; ವೆಂಟಿಲೇಟರ್ ಸಮಸ್ಯೆ 4 ರೋಗಿಗಳು ಸಾವು ಕೋಲಾರ; ವೆಂಟಿಲೇಟರ್ ಸಮಸ್ಯೆ 4 ರೋಗಿಗಳು ಸಾವು

ಮಧ್ಯಾಹ್ನ ರಸ್ತೆಯಲ್ಲಿ ಬರುವಾಗ ತಲೆಸುತ್ತು ಬಂದು ನೀಲಾವತಿ ಕುಸಿದು ಬಿದ್ದರು. ಆದರೆ, ಜನರು ಆಕೆಯನ್ನು ರಸ್ತೆಯಲ್ಲಿಯೇ ಬಿಟ್ಟರು. ಸೂಕ್ತ ಚಿಕಿತ್ಸೆ ಸಿಗದ ಕಾರಣ ಆಕೆ ಸ್ಥಳದಲ್ಲೇ ಸಾವನ್ನಪ್ಪಿದಳು.

ಕೋಲಾರ; ಕೋವಿಡ್ ಚಿಕಿತ್ಸೆ ಬಗ್ಗೆ ದೂರು ನೀಡಿದ್ದಕ್ಕೆ ಯೋಧನಿಗೆ ಥಳಿತ ಕೋಲಾರ; ಕೋವಿಡ್ ಚಿಕಿತ್ಸೆ ಬಗ್ಗೆ ದೂರು ನೀಡಿದ್ದಕ್ಕೆ ಯೋಧನಿಗೆ ಥಳಿತ

ಕೋವಿಡ್‌ನಿಂದ ಕುಸಿದು ಬಿದ್ದಿರಬಹುದು ಎಂದು ಜನರು ನೀಲಾವತಿ ಬಳಿಗೆ ಹೋಗಲಿಲ್ಲ. ತಾಯಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು ಮೂರು ಗಂಟೆಗಳ ಬಳಿಕ ಆಕೆಯನ್ನು ರವಾನೆ ಮಾಡಲಾಯಿತು.

   ಚಾಮರಾಜನಗರ: 960 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ | Oneindia Kannada

   ವೈದ್ಯರು ಪರೀಕ್ಷೆ ನಡೆಸಿ ಕೊರೊನಾ ಇಲ್ಲವೆಂದು ದೃಢಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಗ್ರಾಮದಲ್ಲಿ ಶವ ಸಂಸ್ಕಾರವನ್ನು ಸಂಬಂಧಿಕರು ಮಾಡಿ ಮುಗಿಸಿದ್ದಾರೆ.

   English summary
   48 year old women died in the road in Kolar. Body left abandoned on the road for several hours in the fear of COVID 19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X