ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದ ಮೊಬೈಲ್ ಘಟಕ ವಿಸ್ತರಣೆ ಮಾಡಲಿದೆ ವಿಸ್ಟ್ರಾನ್

|
Google Oneindia Kannada News

ಕೋಲಾರ, ನವೆಂಬರ್ 24: ಕೋಲಾರದ ನಸರಾಪುರದಲ್ಲಿರುವ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ತನ್ನ ಘಟಕವನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಿದೆ. ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕ ಸುಮಾರು 10 ಸಾವಿರ ಉದ್ಯೋಗವನ್ನು ಸೃಷ್ಟಿಮಾಡಿದೆ.

ಕರ್ನಾಟಕ ಸರ್ಕಾರದ ವಾಣಿಜ್ಯ & ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ತಂಡ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಗೆ ಭೇಟಿ ನೀಡಿದೆ.

ಕೋಲಾರ; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ ಕೋಲಾರ; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್ ಲೀ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುದಿಪ್ತೋ ಗುಪ್ತ ಅವರು ಅಧಿಕಾರಿಗಳ ನಿಯೋಗದ ಜೊತೆ ಮಾತುಕತೆಯನ್ನು ನಡೆಸಿದರು. ಪ್ರಸ್ತುತ ಕಂಪನಿ ಕೆ.ಐ.ಎ.ಡಿ.ಬಿ. ಹಂಚಿಕೆ ಮಾಡಿರುವ 49 ಎಕರೆ ಭೂಮಿಯಲ್ಲಿ ಮೊಬೈಲ್ ಫೋನ್‌ಗಳ ತಯಾರಿಕೆಯ ಘಟಕವನ್ನು ಆರಂಭಿಸಿದೆ.

ವಿವಿಧ ಇಲಾಖೆಗಳ ನೇಮಕಾತಿ; ಅರ್ಜಿ ಹಾಕಿ ವಿವಿಧ ಇಲಾಖೆಗಳ ನೇಮಕಾತಿ; ಅರ್ಜಿ ಹಾಕಿ

Wistron Wish To Expend Mobile Manufacturing Unit

ಈ ಘಟಕದಲ್ಲಿ ಪ್ರಸ್ತುತ ಸುಮಾರು 10000 ಜನರಿಗೆ ಉದ್ಯೋಗವನ್ನು ಒದಗಿಸಿದೆ. ಘಟಕವು ಕೋಲಾರ ಜಿಲ್ಲೆಯಲ್ಲಿ ತನ್ನ ವಿವಿಧ ಉತ್ಪನ್ನಗಳ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸುತ್ತಿದೆ.

ನೇಮಕಾತಿ ಸ್ಥಗಿತ; ಹಲವರ ಕೈ ತಪ್ಪಲಿದೆ ಸರ್ಕಾರಿ ಉದ್ಯೋಗ! ನೇಮಕಾತಿ ಸ್ಥಗಿತ; ಹಲವರ ಕೈ ತಪ್ಪಲಿದೆ ಸರ್ಕಾರಿ ಉದ್ಯೋಗ!

ನರಸಾಪುರ ಕೈಗಾರಿಕಾ ಪ್ರದೇಶದ ಮಿಂಡಹಳ್ಳಿ ಗ್ರಾಮದ ಬಳಿ 2ನೇ ಹಂತದಲ್ಲಿ ಸುಮಾರು 100 ಎಕರೆ ಜಮೀನನ್ನು ಹಂಚಿಕೆ ಮಾಡಲು ಅಧಿಕಾರಿಗಳ ನಿಯೋಗಕ್ಕೆ ಕಂಪನಿ ಬೇಡಿಕೆ ಇಟ್ಟಿದೆ. ಅಧಿಕಾರಿಗಳ ತಂಡ ಹೊಸದಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಸಹ ಪರಿಶೀಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೌರವ್ ಗುಪ್ತ ಅವರು, ಸರ್ಕಾರದಿಂದ ನೀಡಬೇಕಾಗಿರುವ ಅನುಮೋದನೆಗಳು & ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ನೀಡುವ ಭರವಸೆಯನ್ನು ಕಂಪನಿಯ ಅಧಿಕಾರಿಗಳಿಗೆ ನೀಡಿದರು.

English summary
Wistron wish to expend it's mobile manufacturing unit at Narasapura industrial area of Kolar district, Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X