ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಕಾಡಾನೆ ದಾಳಿಗಿಲ್ಲ ಪರಿಹಾರ, ರೈತರು ಹೈರಾಣ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 20; ಕೋಲಾರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ತಮಿಳುನಾಡು ಅರಣ್ಯದಿಂದ ಜಿಲ್ಲೆಯ ಗಡಿಭಾಗಗಳಿಗೆ ಕಾಡಾನೆಗಳ ದಾಳಿ ಮಾಮೂಲಾಗಿದೆ. ಕಾಡಾನೆಗಳನ್ನು ಹತೋಟಿಗೆ ತರಲು ಶಾಶ್ವತವಾದ ಕ್ರಮಗಳು ಸರ್ಕಾರದಲ್ಲಿ ಇಲ್ಲವಾಗಿದೆ. ಕಾಡಾನೆಗಳ ದಾಳಿ ತಪ್ಪಿಸಲು ಜನರು ನಿರೀಕ್ಷಿಸುತ್ತಿರುವ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ವಿಫಲವಾಗಿದೆ.

ಒಂದು ಕಾಲದಲ್ಲಿ ಕಾಡಾನೆಗಳು ಅಂದರೆ ಕೋಲಾರ ಜಿಲ್ಲೆಯ ಜನರ ಪಾಲಿಗೆ ಅಪರೂಪವಾಗಿತ್ತು. ಆದರೆ, ಐದಾರು ವರ್ಷದಿಂದೀಚೆಗೆ ಕಾಡಾನೆಗಳು ಅಂತ ಹೆಸರು ಹೇಳಿದರೆ ಈ ಜಿಲ್ಲೆಯ ಗಡಿಭಾಗದ ಜನರು ಬೆಚ್ಚಿ ಬೀಳುತ್ತಾರೆ.

ರಾಮನಗರ; ವಿದ್ಯುತ್ ಸ್ಪರ್ಶದಿಂದ ಆನೆ ಸಾವುರಾಮನಗರ; ವಿದ್ಯುತ್ ಸ್ಪರ್ಶದಿಂದ ಆನೆ ಸಾವು

ಮಾಲೂರು ಮತ್ತು ಬಂಗಾರಪೇಟೆ ತಾಲೂಕುಗಳ ಗಡಿಭಾಗದ ಹಳ್ಳಿಗಳಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಹಳ್ಳಿಗರ ಪ್ರಾಣಕ್ಕೂ ಸಂಚಕಾರ ತಂದಿರುವ ಕಾಡಾನೆಗಳು, ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನು ಹಾನಿ ಮಾಡುತ್ತಿವೆ.

ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ

Wild Elephants Destroy Crops In Kolar Villages

ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಗಳು ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಈ ಮೊದಲು ಅಲ್ಲಿನ ಕಾಡಾನೆಗಳು ಯಾವಾಗಲಾದರು ಒಮ್ಮೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಹಳ್ಳಿಗಳಿಗೆ ದಾಳಿಯಿಡುತ್ತಿದ್ದವು.

 ಬೈಕ್ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನ; ವಿಡಿಯೋ ವೈರಲ್ ಬೈಕ್ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನ; ವಿಡಿಯೋ ವೈರಲ್

ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಇಲ್ಲಿಯೇ ಬೀಡು ಬಿಟ್ಟಿವೆ. ಈ ಭಾಗದ ಜನರ ಪ್ರಾಣವನ್ನು ತೆಗೆಯುವ ಹಂತಕ್ಕೂ ತಲುಪಿರುವ ಕಾಡಾನೆಗಳಿಂದ ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ.

Wild Elephants Destroy Crops In Kolar Villages

ನಮ್ಮ ಜಿಲ್ಲೆಯ ಗಡಿಭಾಗದ ಹಳ್ಳಿಗಳಿಗೆ ದಾಳಿ ನಡೆಸುತ್ತಿರುವ ಕಾಡಾನೆಗಳನ್ನು ನಿಯಂತ್ರಿಸಲು ಜಿಲ್ಲಾಡಳಿತವು ಕೈಲಾದ ಕ್ರಮವನ್ನು ಜರುಗಿಸಿದೆ. ಅರಣ್ಯ ಪ್ರದೇಶದ 55 ಕಿ. ಮೀ. ದೂರದವರೆಗೂ ಸದ್ಯಕ್ಕೆ ಸೋಲಾರ್ ತಂತಿಬೇಲಿಯನ್ನು ಅಳವಡಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಶಾಶ್ವತ ಕ್ರಮವಾಗಿ ಕಾರಿಡಾರ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಒಟ್ಟಿನಲ್ಲಿ ಅನೇಕ ಸಮಸ್ಯೆಗಳಿಂದ ತತ್ತರಿಸುತ್ತಿರುವ ಕೋಲಾರ ಜಿಲ್ಲೆಯ ಕೃಷಿಕರಿಗೆ ಇದೀಗ ಕಾಡಾನೆಯ ಹಾವಳಿಯನ್ನು ಎದುರಿಸುವುದು ಸವಾಲಾಗಿದೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಜರುಗಿಸಬೇಕಾಗಿದೆ.

English summary
Wild elephants from Tamil Nadu destroy crops in villages of Malur, Bangarpet taluk of Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X