ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ: ಗುಪ್ತಚರ ವರದಿ ಆಧರಿಸಿ ಕೊತ್ತೂರು ಮಂಜುನಾಥ್ ಸ್ಫೋಟಕ ಹೇಳಿಕೆ

|
Google Oneindia Kannada News

ಕೋಲಾರ, ಮೇ 5: ಕಾಂಗ್ರೆಸ್ಸಿನ ಸೋಲಿಲ್ಲದ ಸರದಾರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ ಎಚ್ ಮುನಿಯಪ್ಪ ಅವರ ಈ ಬಾರಿಯ ಚುನಾವಣೆಯ ಭವಿಷ್ಯ ಏನಾಗಲಿದೆ?

ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಮುನಿಯಪ್ಪಗೆ ಈ ಬಾರಿ ನಿರೀಕ್ಷಿತ ಬೆಂಬಲ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಸಿಕ್ಕಿರಲಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಬಿಬಿಎಂಪಿ ಕಾರ್ಪೋರೇಟರ್ ಮುನಿಸ್ವಾಮಿಯವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು.

ಕೋಲಾರ: ಕೊನೇ ಕ್ಷಣದಲ್ಲಿ ಕೆ ಎಚ್ ಮುನಿಯಪ್ಪಗೆ ಭಾರೀ ಹಿನ್ನಡೆಕೋಲಾರ: ಕೊನೇ ಕ್ಷಣದಲ್ಲಿ ಕೆ ಎಚ್ ಮುನಿಯಪ್ಪಗೆ ಭಾರೀ ಹಿನ್ನಡೆ

ಮುಖ್ಯಮಂತ್ರಿಯವರಿಗೆ ಸಲ್ಲಿಕೆಯಾಗಿರುವ ಗುಪ್ತಚರ ವರದಿಯನ್ನು ಉಲ್ಲೇಖಿಸಿ, ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ, ಇಲ್ಲಿನ ಪ್ರಭಾವಿ ಮುಖಂಡ ಮತ್ತು ಮುನಿಯಪ್ಪ ಅವರ ರಾಜಕೀಯ ವಿರೋಧಿ ಎಂದೇ ಗುರುತಿಸಿರುವ ಕೊತ್ತೂರು ಮಂಜುನಾಥ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.

ಚುನಾವಣಾ ಕಾಲೇ ಬಹುಕೃತ ವೇಷಂ: 'ಕೇಸರಿ' ಮೊರೆಹೋದ ಕಾಂಗ್ರೆಸ್ಚುನಾವಣಾ ಕಾಲೇ ಬಹುಕೃತ ವೇಷಂ: 'ಕೇಸರಿ' ಮೊರೆಹೋದ ಕಾಂಗ್ರೆಸ್

ಕೋಲಾರ ಫಲಿತಾಂಶದ ಬಗ್ಗೆ ಗುಪ್ತಚರ ದಳ ಎರಡೆರಡು ಬಾರಿ ಮುಖ್ಯಮಂತ್ರಿಗಳಿಗೆ ತನ್ನ ವರದಿಯನ್ನು ನೀಡಿದೆ ಎಂದು ಹೇಳಿರುವ ಕೊತ್ತೂರು ಮಂಜುನಾಥ್, ಮುನಿಯಪ್ಪಗೆ ದೇವರ ಶಾಪ ತಟ್ಟಲಿದೆ ಎಂದು ಹೇಳಿದ್ದಾರೆ. ಗುಪ್ತಚರ ವರದಿಯಲ್ಲಿ ಏನಿದೆ?

ಮುನಿಯಪ್ಪಗೆ ಈ ಬಾರಿ ಗೆಲುವು ಸುಲುಭದ ತುತ್ತಲ್ಲ ಎನ್ನುವ ಸ್ಥಿತಿ ನಿರ್ಮಾಣ

ಮುನಿಯಪ್ಪಗೆ ಈ ಬಾರಿ ಗೆಲುವು ಸುಲುಭದ ತುತ್ತಲ್ಲ ಎನ್ನುವ ಸ್ಥಿತಿ ನಿರ್ಮಾಣ

ಕೋಲಾರ ಕ್ಷೇತ್ರದಿಂದ ಡಿ ಎಸ್ ವೀರಯ್ಯ ಸೇರಿದಂತೆ ಹಲವು ಮುಖಂಡರು ಬಿಜೆಪಿ ಟಿಕೆಟಿಗೆ ಪ್ರಯತ್ನಿಸಿದ್ದರು. ಆದರೆ, ಬಿಜೆಪಿ, ಮುನಿಸ್ವಾಮಿಗೆ ಟಿಕೆಟ್ ನೀಡಿದ ನಂತರ, ಆರಂಭದಲ್ಲಿ ಮುನಿಯಪ್ಪಗೆ ಗೆಲುವು ಅತ್ಯಂತ ಸುಲಭ ಎನ್ನುವ ಮಾತಿತ್ತು. ಆದರೆ, ದಿನದಿಂದ ದಿನಕ್ಕೆ ಹೆಚ್ಚಿದ ಬಿಜೆಪಿ ಪ್ರಾಬಲ್ಯ, ಮೋದಿ ಅಲೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮೈತ್ರಿ ಪಕ್ಷದಲ್ಲಿನ ಸಮನ್ವಯದ ಕೊರತೆಯಿಂದಾಗಿ, ಚುನಾವಣೆಯ ವೇಳೆ ಮುನಿಯಪ್ಪಗೆ ಈ ಬಾರಿ ಗೆಲುವು ಸುಲುಭದ ತುತ್ತಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

ಮುನಿಯಪ್ಪ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಯನ್ನು ಮಾಡಿದ್ದಾರೆ

ಮುನಿಯಪ್ಪ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಯನ್ನು ಮಾಡಿದ್ದಾರೆ

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೊತ್ತೂರು ಮಂಜುನಾಥ್, ಜಿಲ್ಲೆಯಲ್ಲಿ ಯಾವ ಮುಖಂಡರನ್ನೂ ಮುನಿಯಪ್ಪ ಬೆಳೆಯಲು ಬಿಟ್ಟಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಎಲ್ಲಾ ಮುಖಂಡರಿಗೂ ಮುನಿಯಪ್ಪ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಯನ್ನು ಮಾಡಿದ್ದಾರೆ. ನಾನು ತುಂಬಾ ದೇವರನ್ನು ನಂಬುವವನು, ಈ ಬಾರಿ ಅವರ ಸೋಲು ನಿಶ್ಚಿತ ಎನ್ನುವುದನ್ನು ಜ್ಯೋತಿಷಿಗಳೂ ಹೇಳಿದ್ದಾರೆಂದು ಕೊತ್ತೂರು ಹೇಳಿದ್ದಾರೆ.

ಮುನಿಯಪ್ಪ ಸೋಲಲಿದ್ದಾರೆ ಎನ್ನುವುದು ಉಲ್ಲೇಖವಾಗಿದೆ

ಮುನಿಯಪ್ಪ ಸೋಲಲಿದ್ದಾರೆ ಎನ್ನುವುದು ಉಲ್ಲೇಖವಾಗಿದೆ

ಎರಡೆರಡು ಬಾರಿ ಮುಖ್ಯಮಂತ್ರಿಗಳಿಗೆ ಗುಪ್ತಚರ ದಳ ವರದಿಯನ್ನು ನೀಡಿದೆ. ಎರಡು ಬಾರಿಯ ವರದಿಯಲ್ಲೂ ಮುನಿಯಪ್ಪ ಸೋಲಲಿದ್ದಾರೆ ಎನ್ನುವುದು ಉಲ್ಲೇಖವಾಗಿದೆ. ಸಿಎಂ ಕಚೇರಿಯ ಸಿಬ್ಬಂದಿಗಳೇ ನನಗೆ ಈ ಮಾಹಿತಿಯನ್ನು ನೀಡಿದ್ದಾರೆ. ಈ ವರದಿಯ ಬಗ್ಗೆ ಕೆ ಎಚ್ ಮುನಿಯಪ್ಪ ಅವರಿಗೂ ಗೊತ್ತಿದೆ ಎನ್ನುವ ಹೇಳಿಕೆಯನ್ನು ಕೊತ್ತೂರು ಮಂಜುನಾಥ್ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ತಾನು ಗೆಲ್ಲುವುದಿಲ್ಲ ಎಂದೇ ಪ್ರಚಾರ ಮಾಡುತ್ತಿದ್ದರು

ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ತಾನು ಗೆಲ್ಲುವುದಿಲ್ಲ ಎಂದೇ ಪ್ರಚಾರ ಮಾಡುತ್ತಿದ್ದರು

ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ತಾನು ಗೆಲ್ಲುವುದಿಲ್ಲ ಎಂದೇ ಪ್ರಚಾರ ಮಾಡುತ್ತಿದ್ದರು. ಜಿಲ್ಲೆಯ ಹಲವು ಶಾಸಕರು, ಮಾಜಿ ಎಂಎಲ್ಎಗಳು ಬಿಜೆಪಿ ಪರವಾಗಿ ನಿಂತಿದ್ದರು. ಕೋಲಾರ ಶಾಸಕ ಶ್ರೀನಿವಾಸ ಗೌಡ್ರು ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿಗೆ ಮತಹಾಕಿ ಎಂದಿದ್ದಾರೆ. ಕೋಲಾರ ಜನತೆ, ಮೋದಿಗೆ ಮತಹಾಕಿದ್ದಾರೆ. ಮುನಿಯಪ್ಪ ಸೋಲುವುದು ನಿಶ್ಚಿತ - ಕೊತ್ತೂರು ಮಂಜುನಾಥ್.

ಬಿಜೆಪಿಗೆ ಇಲ್ಲಿ ಲಾಭವಾಗಿ ಪರಿಣಮಿಸಿದ ಸಾಧ್ಯತೆ

ಬಿಜೆಪಿಗೆ ಇಲ್ಲಿ ಲಾಭವಾಗಿ ಪರಿಣಮಿಸಿದ ಸಾಧ್ಯತೆ

ಕೋಲಾರ ವ್ಯಾಪ್ತಿಯ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದರಲ್ಲಿ, ಎರಡರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಇಲ್ಲಿ, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಫೈಟ್. ಹಾಗಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದುವೇ ಬಿಜೆಪಿಗೆ ಇಲ್ಲಿ ಲಾಭವಾಗಿ ಪರಿಣಮಿಸಿದ ಸಾಧ್ಯತೆಯಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.

English summary
What intelligence report says on Kolar Loksabha segment, former Mulbagilu MLA Kottur Manjunath revealed. As per Manjunath, congress candidate KH Muniyappa will loss the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X