ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಹೊತ್ತು ಊಟಕ್ಕೂ ಪರದಾಟ; ಮಲೇಷಿಯಾದಲ್ಲಿ ಸಿಲುಕಿಕೊಂಡ ಕೋಲಾರ ವಿದ್ಯಾರ್ಥಿ ಅಳಲು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 29: ಲಾಕ್ ಡೌನ್ ನಿಂದಾಗಿ ಮಲೇಷಿಯಾದಲ್ಲಿ ಕೋಲಾರ ಮೂಲದ ವಿದ್ಯಾರ್ಥಿ ಸಿಲುಕಿಕೊಂಡಿದ್ದು, ಊಟ ಮಾಡಲೂ ಹಣವಿಲ್ಲದೇ ಪರದಾಡುತ್ತಿರುವುದಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ತಮ್ಮನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಕೇಳಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Recommended Video

ಹಾವೇರಿ ಜಿಲ್ಲೆಯ ಆಡೂರಿನಲ್ಲಿ ಕೊರೊನ ತಪಾಸಣೆ | Haveri | Checking | Oneindia Kannada

ಮಲೇಷಿಶಿಯಾದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಮೂಲದ ವಿದ್ಯಾರ್ಥಿ ಭಾರ್ಗವ್ ರಾಮ್ ಸಿಲುಕಿಕೊಂಡಿದ್ದಾರೆ. ವಿದ್ಯಾಭ್ಯಾಸದ ಸಲುವಾಗಿ ಮಲೇಷಿಯಾಗೆ ಹೋಗಿದ್ದವರು ಅಲ್ಲೇ ಲಾಕ್ ಆಗಿದ್ದಾರೆ. ಇದೀಗ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

 ಮಲೇಷಿಯಾದಲ್ಲಿ ಸಿಲುಕಿಕೊಂಡ ಕೋಲಾರದ ಭಾರ್ಗವ್

ಮಲೇಷಿಯಾದಲ್ಲಿ ಸಿಲುಕಿಕೊಂಡ ಕೋಲಾರದ ಭಾರ್ಗವ್

ವಿದ್ಯಾಭ್ಯಾಸದ ಸಲುವಾಗಿ ಕೋಲಾರದ ಶ್ರೀನಿವಾಸಪುರದ ಭಾರ್ಗವ್ ಮಲೇಷಿಯಾಗೆ ಹೋಗಿದ್ದರು. ಆದರೆ ಅಲ್ಲಿ ಲಾಕ್ ಡೌನ್ ಹೇರಿದ್ದರಿಂದ ಕಳೆದ 45 ದಿನಗಳಿಂದ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ವಾಪಸ್ ಬರಲೂ ಆಗದೇ ಅಲ್ಲೇ ಪರದಾಡುತ್ತಿದ್ದಾರೆ. "ಇಲ್ಲಿ ಎಲ್ಲದಕ್ಕೂ ಕಷ್ಟವಾಗಿದೆ. ನನ್ನ ರೀತಿಯೇ ಹಲವು ವಿದ್ಯಾರ್ಥಿಗಳು, ಪ್ರವಾಸಿಗರು, ಗರ್ಭಿಣಿಯರು, ವಯಸ್ಸಾದವರು ಇಲ್ಲಿ ಸಿಲುಕಿಕೊಂಡಿದ್ದಾರೆ. ನೆರವಿಗೆ ಬನ್ನಿ" ಎಂದು ಕೇಳಿಕೊಂಡಿದ್ದಾರೆ.

ಕೇರಳಕ್ಕೆ ವಾಪಸ್ ಆಗಲು 1 ಲಕ್ಷ ಜನರ ನೋಂದಣಿಕೇರಳಕ್ಕೆ ವಾಪಸ್ ಆಗಲು 1 ಲಕ್ಷ ಜನರ ನೋಂದಣಿ

 ಊಟ ಮಾಡಲೂ ದುಡ್ಡಿಲ್ಲವೆಂದು ಅಳಲು

ಊಟ ಮಾಡಲೂ ದುಡ್ಡಿಲ್ಲವೆಂದು ಅಳಲು

45 ದಿನಗಳಿಂದ ಅಲ್ಲಿಯೇ ಉಳಿದುಕೊಂಡಿರುವ ಭಾರ್ಗವ್ ಮೊದಲು ಇರುವ ಸ್ವಲ್ಪ ಹಣದಲ್ಲೇ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಅಲ್ಲಿ ಸಾಮಗ್ರಿಗಳು ದುಬಾರಿಯಾಗಿದ್ದು, ಇರುವ ದುಡ್ಡೂ ಖಾಲಿಯಾಗಿದೆ. "ಈಗ ಏನು ಮಾಡಲೂ ತೋಚುತ್ತಿಲ್ಲ. ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ. ಏನೂ ಸೌಲಭ್ಯ ಸಿಗದೆ ದಿನಕ್ಕೆ ಒಂದು ಬಾರಿ ಊಟ ಮಾಡುತ್ತಿದ್ದೇವೆ" ಎಂದು ವಿಡಿಯೋ ಮಾಡಿದ್ದಾರೆ ಭಾರ್ಗವ್.

"ಕ್ವಾರಂಟೈನ್ ಆಗಲು ಸಿದ್ಧ"

ಕೊರೊನಾ ಲಾಕ್ ಡೌನ್ ಹಿನ್ನೆಲೆ ಅಂತರರಾಷ್ಟ್ರೀಯ ವಿಮಾನ ಯಾನ ಬಂದ್ ಆಗಿದೆ. "ನಮ್ಮನ್ನು ಹೇಗಾದರೂ ವಾಪಸ್ ಕರೆಸಿಕೊಳ್ಳಿ, ನಾವು ಕ್ವಾರಂಟೈನ್ ಆಗಲು ಸಿದ್ಧ" ಎಂದು ಭಾರ್ಗವ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ತನ್ನೂರಿನ ಜನರಿಗೆ ಕೊರೊನಾ ಬರಬಾರದು: ಬಾಲಕಿಯ ದೊಡ್ಡತನತನ್ನೂರಿನ ಜನರಿಗೆ ಕೊರೊನಾ ಬರಬಾರದು: ಬಾಲಕಿಯ ದೊಡ್ಡತನ

 ಶ್ರೀನಿವಾಸಪುರದಲ್ಲಿ ಪೋಷಕರ ಆತಂಕ

ಶ್ರೀನಿವಾಸಪುರದಲ್ಲಿ ಪೋಷಕರ ಆತಂಕ

ತಮ್ಮ ಮಗನ ಅಳಲು ನೋಡಿ ಭಾರ್ಗವ್ ರಾಮ್ ಪೋಷಕರು ಆತಂಕಗೊಂಡಿದ್ದಾರೆ. ವಿಮಾನ ವ್ಯವಸ್ಥೆ ಮಾಡಿಕೊಟ್ಟು ಭಾರತಕ್ಕೆ ಕರೆತರುವಂತೆ ಮನವಿ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸರ್ಕಾರ ತಮ್ಮ ನೆರವಿಗೆ ಧಾವಿಸಬೇಕೆಂದು ಕೇಳಿಕೊಂಡಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಜನರಿಗೆ ಸಹಾಯಹಸ್ತ ಚಾಚಿದ ಟಿಬೆಟಿಯನ್ನರುಕೊರೊನಾ ಸಂಕಷ್ಟದಲ್ಲಿ ಜನರಿಗೆ ಸಹಾಯಹಸ್ತ ಚಾಚಿದ ಟಿಬೆಟಿಯನ್ನರು

English summary
A student from srinivasapura of kolar district stucked in malaysia because of lockdown, His video requesting for help viral in social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X