ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲೂರಿನ ಈ ಗ್ಯಾರೇಜ್ ನಲ್ಲಿದೆ ರಾಜ ಮಹಾರಾಜರ ಕಾಲದ ಅಪರೂಪದ ಕಾರುಗಳು

By ವಿಮಲಾ, ಕೋಲಾರ
|
Google Oneindia Kannada News

ಅವೆಲ್ಲಾ ನಮ್ಮ ತಾತ ಮುತ್ತಾತನ ಕಾಲದ ಕಾರು​ಗಳು. ಸಿನಿಮಾದಲ್ಲಷ್ಟೇ ನೋಡಿದಂಥ ಹಳೇ ಜಮಾನದ ಕಾರುಗಳು. ಸದ್ಯ ಇಲ್ಲೊಂದು ಗ್ಯಾರೇಜ್​ ನಲ್ಲಿ ಅಂತಹ ಕಾರು​ಗಳಿಗೆ ಹೊಸತನ ನೀಡುತ್ತಿದ್ದು, ಟ್ರೆಂಡ್ ಸೆಟ್​ ಮಾಡುವ ಕೆಲಸವೊಂದು ಸದ್ದಿಲ್ಲದೆ ನಡೆಯುತ್ತಿದೆ.

ಬ್ರಿಟಿಷರ ಕಾಲದ ಮತ್ತು ರಾಜ ಮಹಾರಾಜರ ಕಾಲದ ಹತ್ತಾರು ಬಗೆಯ ಕಾರುಗಳ ದೊಡ್ಡ ಸಂಗ್ರಹವೇ ಇಲ್ಲಿದೆ. ಅಷ್ಟೇ ಅಲ್ಲ, ಇವಕ್ಕೆ ಹಳೆಯ ಕಾಲದ ಬೈಕ್ ಗಳೂ ಸಾಥ್ ನೀಡಿವೆ.

 ಮಾಲೂರು ತಾಲೂಕಿನಲ್ಲಿನ ಗ್ಯಾರೇಜ್

ಮಾಲೂರು ತಾಲೂಕಿನಲ್ಲಿನ ಗ್ಯಾರೇಜ್

ಈ ಕಾರುಗಳ ಗ್ಯಾರೇಜ್ ಕಂಡುಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹನುಮನಾಯಕನಹಳ್ಳಿ ಗ್ರಾಮದ ಬಳಿ. ಅಪರೂಪದ ಕಾರುಗಳನ್ನು ಹೊಂದಿರುವ ಈ ಗ್ಯಾರೇಜ್ ನಲ್ಲಿ ರಾಜ ಮಹಾರಾಜರು, ಆಗಿನ ಶ್ರೀಮಂತರು, ಬ್ರಿಟಿಷ್​ ಅಧಿಕಾರಿಗಳು ಬಳಸುತ್ತಿದ್ದ ಕಾರುಗಳಿವೆ. ಒಂದಕ್ಕಿಂತ ಒಂದು ವಿಭಿನ್ನ. ಕಾರು​ಗಳ ಬಗ್ಗೆ ಆಸಕ್ತಿ ಇರುವ, ಮೂಲತಃ ಕಾರ್​ ಮೆಕಾನಿಕ್ ಆಗಿರುವ ನವೀನ್​ ಮತ್ತು ಅವರ ಸ್ನೇಹಿತರು ಈ ಕಾರುಗಳ ಸಂಗ್ರಹದಲ್ಲಿ ತೊಡಗಿದ್ದಾರೆ.

ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!

 ಹಳೆ ಕಾರುಗಳಿಗೆ ಮರುಜೀವ

ಹಳೆ ಕಾರುಗಳಿಗೆ ಮರುಜೀವ

ಹಳೇ ಕಾರು​ಗಳನ್ನು ಮತ್ತೆ ರಿಪೇರಿ ಮಾಡಿ ರೋಡಿಗಿಳಿಸುವ ನಿಟ್ಟಿನಲ್ಲಿ ಈ ಯುವಕರು ಪ್ರಯತ್ನವೊಂದನ್ನು ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಳೆಯ ಕಾರುಗಳ ಮತ್ತು ಬೈಕ್​ಗಳ ಬಗ್ಗೆ ಯುವಕರಲ್ಲಿ ಹೊಸ ಕ್ರೇಜ್​ ಶುರುವಾಗಿರುವುದು ಇವರ ಈ ಪ್ರಯತ್ನಕ್ಕೆ ಹುಮ್ಮಸ್ಸು ತಂದಿದೆ. ಇತ್ತೀಚಿನ ದಿನಗಳಲ್ಲಿ ತೆರೆಕಾಣುತ್ತಿರುವ ಸಿನಿಮಾಗಳಲ್ಲೂ ಹಳೆಯ ಕಾರ್​ಗಳನ್ನು ಬಳಸುತ್ತಿರುವುದರಿಂದ ಅಂಥ ಕಾರುಗಳನ್ನು ಎಲೆಕ್ಟ್ರಿಕ್​ ಕಾರ್​ಗಳಾಗಿ ಬದಲಾಯಿಸಬೇಕು ಎನ್ನುವುದು ನವೀನ್​ ಅವರ ಆಶಯ.

 ವಿದೇಶದಿಂದ ಬಿಡಿಭಾಗಗಳ ಆಮದು

ವಿದೇಶದಿಂದ ಬಿಡಿಭಾಗಗಳ ಆಮದು

ಗ್ಯಾರೇಜ್ ನಲ್ಲಿ ಚೆನೈ, ಬೆಂಗಳೂರು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಿಂದ ಹತ್ತಾರು ಬಗೆಯ ಕಾರುಗಳನ್ನು ತಂದು ರಿಪೇರಿ ಮಾಡುವ ಕೆಲಸ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್​ಗಳು ಯುರೋಪ್, ಅಮೆರಿಕ ದೇಶದ ಕಾರು​ಗಳಾಗಿರುವ ಹಿನ್ನೆಲೆಯಲ್ಲಿ ಇದರ ಬಿಡಿಭಾಗಗಳನ್ನು ಅಲ್ಲಿಂದಲೇ ತರಿಸಿಕೊಂಡು ರಿಪೇರಿ ಮಾಡಲಾಗುತ್ತಿದೆ. ಬೀಟಲ್​, ಆಸ್ಟಿನ್​-11, ಆಸ್ಟಿನ್​-8, ಬೀಟಲ್​ ಬಗ್​, ಮೋರಿಸ್​, ಫೋರ್ಡ್​ ಆಸ್ಟಿನ್​-7, ಫೋರ್ಡ್​ ಫರ್ಪೆಕ್ಟ್​, ಅಮೇರಿಕ ಮೂಲದ ಕೆಡಿಲಾಕ್​ ಸೇರಿದಂತೆ ಹತ್ತಾರು ಬಗೆಯ ಹಳೆಯ ಬೈಕ್​​ ಕಲೆಕ್ಷನ್​ ಕೂಡಾ ಇಲ್ಲಿದೆ.

ಶೆಲ್ ಇಕೋ-ಮ್ಯಾರಥಾನ್: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ವೇದಿಕೆಶೆಲ್ ಇಕೋ-ಮ್ಯಾರಥಾನ್: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ವೇದಿಕೆ

 ರೋಡಿಗಿಳಿಯಲಿವೆ ಮೂಲೆ ಸೇರಿದ್ದ ಕಾರುಗಳು

ರೋಡಿಗಿಳಿಯಲಿವೆ ಮೂಲೆ ಸೇರಿದ್ದ ಕಾರುಗಳು

ಯುವಕರಲ್ಲಿ ಈ ವಿಂಟೇಜ್ ಕಾರುಗಳ ಕ್ರೇಜ್​ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ನವೀನ್​ ಹಾಗೂ ಅವರ ಸ್ನೇಹಿತರು ಕಾರುಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಂದುಕೊಂಡಂತೆ ಎಲ್ಲವೂ ಆದರೆ ಮೂಲೆ ಸೇರಿದ್ದ ನಮ್ಮ ತಾತ ಮುತ್ತಾತನ ಕಾಲದ ಕಾರು​ಗಳು ಮಾಲಿನ್ಯ ರಹಿತ ಕಾರು​ಗಳಾಗಿ ಮತ್ತೆ ರೋಡಿಗೆ ಇಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

English summary
By the craze of vintage cars and bikes, Naveen and his friends started vintage car garage in Hanumanayakanahalli In Malur Kolar. So many vintage cars are attracting people here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X