ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಕೋಲಾರ ಮಾರುಕಟ್ಟೆಯಲ್ಲಿ ಮಳೆಗೆ ಕೊಚ್ಚಿ ಹೋದ ಹಣ್ಣುಗಳು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 30: ಕೋಲಾರದಲ್ಲಿ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ಸಂಜೆಯಿಂದ ಆರಂಭವಾಗಿ ನಿರಂತರವಾಗಿ ಮಳೆಯಾಗಿದ್ದು, ಮಳೆ ನೀರು ನುಗ್ಗಿ ಮಾವಿನ ಮಾರುಕಟ್ಟೆ ಸಂಪೂರ್ಣ ಜಲಾವೃತವಾಗಿದೆ.

ಏಷಿಯಾದ ದೊಡ್ಡ ಮಾವಿನ ಮಾರುಕಟ್ಟೆ ಎಂಬ ಹೆಗ್ಗಳಿಕೆ ಇರುವ ಕೋಲಾರದ ಶ್ರೀನಿವಾಸಪುರ ಮಾವಿನ ಮಾರುಕಟ್ಟೆಯು ಮಳೆಯಿಂದಾಗಿ ನಿನ್ನೆ ಕೊಚ್ಚೆಯಂತಾಗಿತ್ತು. ಮಾರುಕಟ್ಟೆ ತುಂಬಾ ಮಳೆ ನೀರು ತುಂಬಿಕೊಂಡಿದ್ದು, ಮಾರಾಟಕ್ಕಿಟ್ಟಿದ್ದ ಮಾವಿನ ಹಣ್ಣುಗಳು ಹಾಗೂ ಹಣ್ಣಿನ ಕ್ರೇಟ್ ಗಳು ಮಳೆ ನೀರಿನೊಂದಿಗೆ ಕೊಚ್ಚಿ ಹೋಗುತ್ತಿದ್ದವು.

Video Of Kolar Mango Market Flooded By Rain Water

 ಕೊಡಗಿನಲ್ಲಿ ಸಂಜೆ ಬಿರುಸು ಮಳೆಗೆ ಕುಸಿದ ತಡೆಗೋಡೆ ಕೊಡಗಿನಲ್ಲಿ ಸಂಜೆ ಬಿರುಸು ಮಳೆಗೆ ಕುಸಿದ ತಡೆಗೋಡೆ

ನೂರಾರು ಟನ್ ನಷ್ಟು ಮಾವು ನಷ್ಟವಾಗಿದೆ. ನೀರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ಮಾವನ್ನು ರಕ್ಷಿಸಿಕೊಳ್ಳಲು ಮಂಡಿ ಮಾಲೀಕರು ಹರಸಾಹಸ ಪಡುವಂತಾಯಿತು.

Video Of Kolar Mango Market Flooded By Rain Water

ಪೈಪ್ ಲೈನ್ ಒಡೆದು ಪೋಲಾಗುತ್ತಿರುವ ನೀರು: ಕೋಲಾರದ ಚಟ್ನಹಳ್ಳಿಯಲ್ಲಿರುವ ಜಮೀನಿನಲ್ಲಿ ಪೈಪ್ ಲೈನ್ ಗೇಟ್ ವಾಲ್ ಒಡೆದು, ಬೆಳಿಗ್ಗೆ 6 ಗಂಟೆಯಿಂದಲೂ ನೀರು ಪೋಲಾಗಿ ಹರಿಯುತ್ತಿದ್ದು, ಸುಮಾರು 70 ಅಡಿಗೂ ಎತ್ತರ ಚಿಮ್ಮುತ್ತಿದೆ. ಕೆರೆಯಂತೆ ರೈತರ ಜಮೀನಿನಲ್ಲಿ ನೀರು ತುಂಬಿಕೊಂಡಿದೆ. ಮಾಹಿತಿ ಇದ್ದರೂ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರದೇ ಟೊಮೊಟೊ ಹಾಗೂ ಮಾವನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಯಿತು.

English summary
The famous srinivasapura mango market flooded by rain water yesterday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X