ಭಯಾನಕ ವಿಡಿಯೋ; ವೈರ್ ಜೊತೆ ಹಾರಿ ಬಿದ್ದ ಆಟೋ ಡ್ರೈವರ್
ಕೋಲಾರ, ಜುಲೈ 30: ದಾರಿಯಲ್ಲಿ ಜೋತುಬಿದ್ದಿದ್ದ ಕೇಬಲ್ ವೈರ್ ಮೇಲೆ ಟ್ರ್ಯಾಕ್ಟರ್ ಚಲಿಸಿ, ಆ ವೈರ್ ಗೆ ಸಿಲುಕಿದ ಆಟೋ ಚಾಲಕನೊಬ್ಬ ಹಾರಿ ಬಿದ್ದಿರುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.
Recommended Video
ಕೋಲಾರದಲ್ಲಿ ಹೀಗೊಂದು ಘಟನೆ ನಡೆದಿದ್ದು, ಈ ಭಯಾನಕ ವಿಡಿಯೋ ಸಿಸಿ ಟಿ.ವಿ.ಯಲ್ಲಿ ಸೆರೆಯಾಗಿದೆ. ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ವೈರ್ ಒಂದು ಜೋತಾಡುತ್ತಿದ್ದು, ದಾರಿಯಲ್ಲಿದ್ದ ಆ ವೈರ್ ಮೇಲೆ ಟ್ರ್ಯಾಕ್ಟರ್ ಚಲಿಸಿದೆ. ಟ್ರ್ಯಾಕ್ಟರ್ ಮುಂದೆ ಚಲಿಸುತ್ತಿದ್ದಂತೆಯೇ ಅದೇ ವೈರ್ ನ ಈ ಬದಿಯಲ್ಲಿದ್ದ ಆಟೋ ಚಾಲಕ ವೈರ್ ಗೆ ಸಿಲುಕಿಕೊಂಡಿದ್ದಾನೆ.
ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ 300 ಕಿ.ಮೀ ವೇಗ: ಬೈಕ್ ಸವಾರ ಅರೆಸ್ಟ್
ಟ್ರ್ಯಾಕ್ಟರ್ ಮುಂದೆ ಚಲಿಸುತ್ತಿದ್ದಂತೆ ವೈರ್ ಸಮೇತ ಆತನೂ ಮೇಲಕ್ಕೆ ಹಾರಿದ್ದಾನೆ. ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಚಾಲಕ ಬಿದ್ದಿದ್ದಾನೆ. ಭಯಾನಕವೆನಿಸುವ ಈ ವಿಡಿಯೋ ಇದೀಗ ವೈರಲ್ ಆಗಿದೆ. ಮಹಿಳೆ ಹಾಗೂ ಆಟೋ ಡ್ರೈವರ್ಗೆ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.