• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಯಾನಕ ವಿಡಿಯೋ; ವೈರ್ ಜೊತೆ ಹಾರಿ ಬಿದ್ದ ಆಟೋ ಡ್ರೈವರ್

By ಕೋಲಾರ ಪ್ರತಿನಿಧಿ
|

ಕೋಲಾರ, ಜುಲೈ 30: ದಾರಿಯಲ್ಲಿ ಜೋತುಬಿದ್ದಿದ್ದ ಕೇಬಲ್ ವೈರ್ ಮೇಲೆ ಟ್ರ್ಯಾಕ್ಟರ್ ಚಲಿಸಿ, ಆ ವೈರ್ ಗೆ ಸಿಲುಕಿದ ಆಟೋ ಚಾಲಕನೊಬ್ಬ ಹಾರಿ ಬಿದ್ದಿರುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.

   ಏನಿದು ಹೊಸ ಶಿಕ್ಷಣ ರೀತಿ?ಏನಿದು ಹೊಸ ಸಚಿವಾಲಯ ಬದಲಾವಣೆ? | Oneindia Kannada

   ಕೋಲಾರದಲ್ಲಿ ಹೀಗೊಂದು ಘಟನೆ ನಡೆದಿದ್ದು, ಈ ಭಯಾನಕ ವಿಡಿಯೋ ಸಿಸಿ ಟಿ.ವಿ.ಯಲ್ಲಿ ಸೆರೆಯಾಗಿದೆ. ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ವೈರ್ ಒಂದು ಜೋತಾಡುತ್ತಿದ್ದು, ದಾರಿಯಲ್ಲಿದ್ದ ಆ ವೈರ್ ಮೇಲೆ ಟ್ರ್ಯಾಕ್ಟರ್ ಚಲಿಸಿದೆ. ಟ್ರ್ಯಾಕ್ಟರ್ ಮುಂದೆ ಚಲಿಸುತ್ತಿದ್ದಂತೆಯೇ ಅದೇ ವೈರ್ ನ ಈ ಬದಿಯಲ್ಲಿದ್ದ ಆಟೋ ಚಾಲಕ ವೈರ್ ಗೆ ಸಿಲುಕಿಕೊಂಡಿದ್ದಾನೆ.

   ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ 300 ಕಿ.ಮೀ ವೇಗ: ಬೈಕ್ ಸವಾರ ಅರೆಸ್ಟ್

   ಟ್ರ್ಯಾಕ್ಟರ್ ಮುಂದೆ ಚಲಿಸುತ್ತಿದ್ದಂತೆ ವೈರ್ ಸಮೇತ ಆತನೂ ಮೇಲಕ್ಕೆ ಹಾರಿದ್ದಾನೆ. ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಚಾಲಕ ಬಿದ್ದಿದ್ದಾನೆ. ಭಯಾನಕವೆನಿಸುವ ಈ ವಿಡಿಯೋ ಇದೀಗ ವೈರಲ್ ಆಗಿದೆ. ಮಹಿಳೆ ಹಾಗೂ ಆಟೋ ಡ್ರೈವರ್​ಗೆ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

   English summary
   The video of an auto driver jumping with a wire which stucked into his legs viral is now viral
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X