ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಸಂಸದ, ಶಾಸಕರ ನಡುವೆ ಸಚಿವರ ಮುಂದೆ ವಾಗ್ವಾದ!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಡಿಸೆಂಬರ್ 31; ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ. ಸಿ. ಪಾಟೀಲ್ ಸಂಸದ ಮತ್ತು ಶಾಸಕರ ನಡುವಿನ ವಾಗ್ವಾದಕ್ಕೆ ಸಾಕ್ಷಿಯಾದರು. ಕ್ರಷರ್ ವಿಚಾರವಾಗಿ ಬಿಜೆಪಿ ಸಂಸದ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಗುರುವಾರ ಮಾಲೂರು ತಾಲೂಕಿನ ಕೋಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ವೈ. ನಂಜೇಗೌಡ ಹಾಗೂ ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ ನಡುವೆ ಗಲಾಟೆ ನಡೆದಿದೆ. ಸಚಿವ ಸಿ. ಟಿ. ಪಾಟೀಲ್ ಅವರು ಕ್ರಷರ್ ವೀಕ್ಷಣೆಗಾಗಿ ಬಂದಿದ್ದರು.

ಕೋಲಾರ ವಿಸ್ಟ್ರಾನ್‌ ಗಲಭೆ; ಉಪಾಧ್ಯಕ್ಷನನ್ನು ವಜಾ ಮಾಡಿದ ಆ್ಯಪಲ್ಕೋಲಾರ ವಿಸ್ಟ್ರಾನ್‌ ಗಲಭೆ; ಉಪಾಧ್ಯಕ್ಷನನ್ನು ವಜಾ ಮಾಡಿದ ಆ್ಯಪಲ್

ಗುಂಡು ತೋಪಿನಲ್ಲಿ ಶಾಸಕರು ಕ್ರಷರ್ ಮಾಡುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಸಚಿವರ ಬಳಿ ದೂರು ಹೇಳಿದರು. ಸಚಿವರ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದಾಗ, "ಇದೆಲ್ಲಾ ಬಿಡಪ್ಪ ಪರ್ಸನಲ್ ಆಗಿ ತಗೋಬೇಡ" ಎಂದು ಶಾಸಕರು ಟಾಂಗ್ ಕೊಟ್ಟರು.

ಕೋಲಾರ; ಮತದಾನ ಬಹಿಷ್ಕಾರ ಮಾಡಿದ ಗ್ರಾಮದ ಜನ ಕೋಲಾರ; ಮತದಾನ ಬಹಿಷ್ಕಾರ ಮಾಡಿದ ಗ್ರಾಮದ ಜನ

Verbal Fight Between Kolar MP Muniswamy And MLA KY Nanjegowda

"ನೀವು ಇದೆಲ್ಲಾ ಬಿಡಿ ನನಗೂ ಎಲ್ಲಾ ಗೊತ್ತಿದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ ವೈಯಕ್ತಿಕವಾಗಿ ಬೇಡ" ಎದು ಶಾಸಕರು ಹೇಳಿದರು. ಇಬ್ಬರೂ ಸಹ ಸುಮ್ಮನಿರಿ ಎಂದು ಸಚಿವ ಸಿ. ಸಿ. ಪಾಟೀಲ್ ಹೇಳಿದರೂ ಸಹ ಸಚಿವರ ಮುಂದೆಯೇ ಗಲಾಟೆ ಮಾಡಿಕೊಂಡರು.

ನರಸಾಪುರ ಐಫೋನ್ ಕಾರ್ಖಾನೆ ಧ್ವಂಸ: 'ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ'ನರಸಾಪುರ ಐಫೋನ್ ಕಾರ್ಖಾನೆ ಧ್ವಂಸ: 'ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ'

"ನೀನು ಗಾಳಿಯಲ್ಲಿ ಬಂದಿದೀಯ ಗಾಳಿಯಲ್ಲಿ ಹೋಗ್ತಿಯ ಬಿಡು. ನಾವಿಬ್ಬರೂ ಒಂದೇ ಹೋಬಳಿಯವರು ಇದೆಲ್ಲ ಬಿಟ್ಟುಬಿಡು" ಎಂದು ಶಾಸಕ ಕೆ. ವೈ. ನಂಜೇಗೌಡ ಹೇಳಿದರು. ಸಚಿವರ ಜೊತೆ ಇದ್ದ ಜನರು, ಮಾಧ್ಯಮ ಪ್ರತಿನಿಧಿಗಳು ನಾಯಕರ ಗಲಾಟೆ ನೋಡಿ ಮುಸಿ ಮುಸಿ ನಕ್ಕರು.

Recommended Video

Rohit Sharma ಹಾಗು KL Rahulಗೆ ದಾರಿ ಮಾಡಿಕೊಟ್ಟ Mayank ಹಾಗು Vihari | Oneindia Kannada

ಸಂಸದ ಮನಿಸ್ವಾಮಿ ಅವರು, "ಒಂದೇ ಹೋಬಳಿಯವರಾದರೇನು?" ಎಂದು ಶಾಸಕರಿಗೆ ಟಾಂಗ್ ಕೊಟ್ಟು ಸಚಿವರ ಮುಂದೆ ಹೆಜ್ಜೆ ಹಾಕಿದರು.

English summary
Verbal war between Kolar BJP MP Muniswamy and Malur Congress MLA KY Nanjegowda. Minister C. C. Patil witnessed for the verbal fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X