ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ 3 ಸಾವಿರ ಉದ್ಯೋಗಕ್ಕೆ ಕತ್ತರಿ ಹಾಕಿದ ಕೇಂದ್ರ

|
Google Oneindia Kannada News

ಕೋಲಾರ, ಫೆಬ್ರವರಿ 07 : ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕದ 3 ಸಾವಿರ ಉದ್ಯೋಗಳನ್ನು ಕಿತ್ತುಕೊಂಡಿದೆ. ಕೋಲಾರ ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ.

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದರು. ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ನೀಡಿದ ಅನುದಾ, ಹೊಸ ಯೋಜನೆಗಳ ಕುರಿತ ಮಾಹಿತಿ ಈಗ ಬಹಿರಂಗವಾಗಿದೆ.

 ಕೋಲಾರ ವಕೀಲ ಶಿವಣ್ಣನ ಕೈಹಿಡಿಯಿತು ಈ ಸಾವಯವ ಕೃಷಿ ಕೋಲಾರ ವಕೀಲ ಶಿವಣ್ಣನ ಕೈಹಿಡಿಯಿತು ಈ ಸಾವಯವ ಕೃಷಿ

ಕೋಲಾರದಲ್ಲಿ ರೈಲ್ವೆ ರಿಪೇರಿ ವರ್ಕ್ ಶಾಪ್ ನಿರ್ಮಾಣಕ್ಕೆ 495.3 ಕೋಟಿ ರೂ. ಹಣವನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಈ ವರ್ಕ್‌ಶಾಪ್‌ನಿಂದ 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ರೈಲು ನಿಲ್ದಾಣಕ್ಕೆ ಬಂತು ಹೊಸ ಸೌಲಭ್ಯಬೆಂಗಳೂರು ರೈಲು ನಿಲ್ದಾಣಕ್ಕೆ ಬಂತು ಹೊಸ ಸೌಲಭ್ಯ

ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ಭೂ ಸ್ವಾಧೀನ ಆಗಿತ್ತು. ಶಂಕು ಸ್ಥಾಪನೆಯನ್ನು ಮಾಡಲಾಗಿತ್ತು. ಆದರೆ, ಬಜೆಟ್‌ನಲ್ಲಿ ಈ ಯೋಜನೆಯನ್ನು ರೈಲ್ವೆ ವರ್ಕ್‌ ಶಾಪ್ ಆಗಿ ಬದಲಾಯಿಸಲಾಗಿದೆ.

ಪ್ರಯಾಣಿಕ ಸ್ನೇಹಿಯಾದ ಹುಬ್ಬಳ್ಳಿ ರೈಲು ನಿಲ್ದಾಣ ಪ್ರಯಾಣಿಕ ಸ್ನೇಹಿಯಾದ ಹುಬ್ಬಳ್ಳಿ ರೈಲು ನಿಲ್ದಾಣ

ಕೋಚ್ ಫ್ಯಾಕ್ಟರಿ ದಶಕಗಳ ಕನಸು

ಕೋಚ್ ಫ್ಯಾಕ್ಟರಿ ದಶಕಗಳ ಕನಸು

ಕೋಲಾರದ ಸಂಸದ ಕೆ. ಎಚ್. ಮುನಿಯಪ್ಪ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧವಾಯಿತು. 2011-12, 2012-13ನೇ ಸಾಲಿನ ಬಜೆಟ್‌ನಲ್ಲಿ ಯೋಜನೆಯನ್ನು ಸೇರಿಸುವಂತೆ ನೋಡಿಕೊಂಡರು. ಆದರೆ, ಯೋಜನೆ ಮುಂದುವರೆಯದೇ ಕಾಗದದಲ್ಲೇ ಉಳಿಯಿತು.

2014ರಲ್ಲಿ ಮರುಜೀವ

2014ರಲ್ಲಿ ಮರುಜೀವ

ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಖಾತೆ ಸಚಿವರಾದ ಬಳಿಕ ಯೋಜನೆಗೆ ಇದ್ದ ಅಡ್ಡಿಯನ್ನು ನಿವಾರಣೆ ಮಾಡಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ
ಶಂಕು ಸ್ಥಾಪನೆ ಸಹ ಆಯಿತು. ಆದರೆ, ಪುನಃ ಯೋಜನೆಗೆ ಗ್ರಹಣ ಹಿಡಿಯಿತು.

ವರ್ಷಕ್ಕೆ 1000 ಕೋಚ್ ಉತ್ಪಾದನೆ

ವರ್ಷಕ್ಕೆ 1000 ಕೋಚ್ ಉತ್ಪಾದನೆ

1460 ಕೋಟಿ ವೆಚ್ಚದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ 1123 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ಈ ಯೋಜನೆ ಪೂರ್ಣಗೊಂಡರೆ ವರ್ಷಕ್ಕೆ 1000 ರೈಲ್ವೆ ಬೋಗಿಗಳು ತಯಾರಾಗಲಿವೆ ಎಂದು ಅಂದಾಜಿಸಲಾಯಿತು. ಈ ಯೋಜನೆಯಿಂದ 5 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇತ್ತು.

ಈಗ ರೈಲು ವರ್ಕ್‌ ಶಾಪ್

ಈಗ ರೈಲು ವರ್ಕ್‌ ಶಾಪ್

ಈಗ ಕೇಂದ್ರ ಸರ್ಕಾರ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ರೈಲ್ವೆ ಕೋಚ್ ಫ್ಯಾಕ್ಟರಿಗಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ರೈಲ್ವೆ ವರ್ಕ್‌ ಶಾಪ್ ನಿರ್ಮಾಣವಾಗಲಿದೆ. ಇದಕ್ಕಾಗಿ 495 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಾಗಿಡಲಾಗಿದ್ದು, ಇದರಿಂದಾಗಿ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.

ಸಂಸದರು ಹೇಳುವುದೇನು?

ಸಂಸದರು ಹೇಳುವುದೇನು?

ಕೋಲಾರದ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಈ ಕುರಿತು ಹೇಳಿಕೆ ನೀಡಿದ್ದು, "ರೈಲ್ವೆ ವರ್ಕ್‌ ಶಾಪ್ 530 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ. ಇದರಿಂದಾಗಿ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ" ಎಂದು ಹೇಳಿದ್ದಾರೆ.

English summary
In the budget 2020 union government converted Kolar rail coach factory project as composite repair workshop. Rail coach factory project aim to create 5 thousand job. Now jobs cut to 2000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X