ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಜಿರೆ ಬಾಲಕನ ಅಪಹರಣ; ಮಂಜುನಾಥ್ ಬಿಡುಗಡೆಗಾಗಿ ಕಣ್ಣೀರು!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಡಿಸೆಂಬರ್ 19: ಉಜಿರೆಯಿಂದ ಅಪಹರಣಗೊಂಡಿದ್ದ ಬಾಲಕನ ಪ್ರಕರಣ ಸುಖಾಂತ್ಯವಾಗಿದೆ. ಕೋಲಾರದಲ್ಲಿ ಆರೋಪಿಗಳನ್ನು ಬಂಧಿಸಿ, ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಆರೋಪಿಗಳು ಮತ್ತು ಬಾಲಕ ಕೋಲಾರದ ಮಾಸ್ತಿ ಠಾಣೆಯ ಪೊಲೀಸರ ವಶದಲ್ಲಿದ್ದಾರೆ.

ಅಪಹರಣ ಪ್ರಕಣದಲ್ಲಿ ಆರೋಪಿಯಾಗಿರುವ ಮಂಜುನಾಥ್ ಕುಟುಂಬದವರು ಕಣ್ಣೀರಿಡುತ್ತಿದ್ದಾರೆ. ಬಾಲಕನಿಗೆ ಆಶ್ರಯ ನೀಡಿದ್ದ ಮಂಜುನಾಥ್ ಅಮಾಯಕ, ಮಾಲೂರಿನ ಮಹೇಶ್ ಈ ಪ್ರಕರಣದಲ್ಲಿ ಮಂಜುನಾಥ್‌ನನ್ನು ಬಳಸಿಕೊಂಡಿದ್ದಾನೆ ಎಂದು ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

 ಸುಖಾಂತ್ಯ ಕಂಡ ಉಜಿರೆ ಬಾಲಕನ ಅಪಹರಣ ಪ್ರಕರಣ; ಆರು ಮಂದಿ ಬಂಧನ ಸುಖಾಂತ್ಯ ಕಂಡ ಉಜಿರೆ ಬಾಲಕನ ಅಪಹರಣ ಪ್ರಕರಣ; ಆರು ಮಂದಿ ಬಂಧನ

ಮಂಜುನಾಥ್‌ ಫೋನ್ ಬಳಸಿಕೊಂಡು ಮಹೇಶ್ ಅಪಹರಣ ಮಾಡಿದ್ದಾನೆ. ಮಂಜುನಾಥ್‌ನನ್ನು ಬಿಡುಗಡೆ ಮಾಡಿ ಎಂದು ಕೋಲಾರದ ಮಾಲೂರಿನ ಕೂರ್ನಹಳ್ಳಿ ಗ್ರಾಮದಲ್ಲಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ನಾಲ್ವರು ಪ್ರಮುಖ ಆರೋಪಿಗಳ ಜೊತೆ ಸಂಪರ್ಕದಲ್ಲಿದದ್ದು ಮಹೇಶ್. ಆದರೆ, ಮಂಜುನಾಥ್‌ನ ಹೆಸರು ಮಾಧ್ಯಮಗಳಲ್ಲಿ ಬರುತ್ತಿದೆ ಎಂದು ಹೇಳಿದ್ದಾರೆ.

ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ನಾಲ್ವರ ಬಂಧನ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ನಾಲ್ವರ ಬಂಧನ

Ujire Kidnap Case Family Demand For Release Of Manjunath

ಮಗುವನ್ನು ಅಪಹರಣ ಮಾಡಿದವರ ಜೊತೆ ಮಂಜುನಾಥ್‌ನಿಗೆ ಸಂಬಂಧವೇ ಇಲ್ಲ. ಕರೆ ಮಾಡಲು ಮಹೇಶನಿಗೆ ಮೊಬೈಲ್ ಕೊಟ್ಟಿದ್ದೇ ಮಂಜುನಾಥನಿಗೆ ಮುಳುವಾಯ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಪಹರಣ ಪ್ರಕರಣದಲ್ಲಿ ಮಹೇಶನ ಜೊತೆಗೆ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ವರ್ತೂರು ಪ್ರಕಾಶ್ ಅಪಹರಣ; ಪೊಲೀಸರು ಕೊಟ್ಟ ವಿವರ ವರ್ತೂರು ಪ್ರಕಾಶ್ ಅಪಹರಣ; ಪೊಲೀಸರು ಕೊಟ್ಟ ವಿವರ

ಮಂಜುನಾಥ್‌ನನ್ನು ಬಿಡುಗಡೆ ಮಾಡಿ ಎಂದು ಕೂರ್ನಹಳ್ಳಿಯ ಗ್ರಾಮಸ್ಥರು ಬೇಡಿಕೊಳ್ಳುತ್ತಿದ್ದಾರೆ. ಕೋಲಾರ ಜಿಲ್ಲೆಗೆ ಪ್ರವಾಸ ಬಂದಿದ್ದೇವೆ. ನಿಮ್ಮ ಮನೆಯಲ್ಲಿ ಒಂದು ರಾತ್ರಿ ಇರುತ್ತೇವೆ ಎಂದು ಮಹೇಶನಿಗೆ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಕಮಲ್ ಕರೆ ಮಾಡಿದ್ದ.

ಮಹೇಶ್ ಕೂರ್ನಹೊಸಳ್ಳಿ ಗ್ರಾಮದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಇದ್ದಾಗ ಕಮಲ್ ಗ್ಯಾರೇಜ್‌ನಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದರು. ಆದ್ದರಿಂದ, ಇಬ್ಬರಿಗೂ ಚೆನ್ನಾಗಿ ಪರಿಚಯವಿತ್ತು. ಮಹೇಶ್ ಮತ್ತು ಮಂಜುನಾಥ್ ಪೋನ್ ಪೇಗೆ ಹಣವನ್ನು ಅಪಹರಣಕಾರರು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಮಂಜುನಾಥ್ ಗ್ರಾಮದಲ್ಲಿ ಟೈಲರ್ ಕೆಲಸ ಮಾಡುತ್ತಿದ್ದಾರೆ. ಮಂಜುನಾಥ್ ನಂಬರ್ ಆನ್‌ಲೈನ್ ಮೂಲಕ ಹಣವನ್ನು ಕಳಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಮಂಜುನಾಥ್ ಬಂಧಿಸಲಾಗಿದೆ. ಆದರೆ, ಅವರ ಪತ್ನಿ ಸುನೀತಾ ಹಾಗು ಗ್ರಾಮಸ್ಥರು ಅಪಹರಣ ಮಾಡಿದವರಿಗೂ ಮಂಜುನಾಥ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ.

Recommended Video

OLX ನಲ್ಲಿ ಮೋದಿ ಕಚೇರಿಯನ್ನು ಮಾರಾಟಕ್ಕಿಟ್ಟ ಕಿಡಿಗೇಡಿಗಳು..! | Oneindia Kannada

ಮಹೇಶ್ ಹಾಗು ಮಂಜುನಾಥ್ ಮಾಸ್ತಿ ಠಾಣೆಯ ಪೊಲೀಸರ ವಶದಲ್ಲಿದ್ದಾರೆ. ರಕ್ಷಣೆ ಮಾಡಿರುವ ಬಾಲಕ ಅನುಭವ್ (8) ಸಹ ಪೊಲೀಸರ ವಶದಲ್ಲಿದ್ದಾನೆ. ಮಂಗಳೂರು ಪೊಲೀಸರು ಬಂದ ಬಳಿಕ ಅವರನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.

English summary
8 year old boy who Kidnapped form Ujire rescued from Kolar. Police arrested four accused and Manjunath who helped kidnappers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X