ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಯೋಗಿ ಆದಿತ್ಯನಾಥ್ ದೇವರನ್ನು ಗುತ್ತಿಗೆ ಪಡೆದಿದ್ದಾರೆಯೇ?’

|
Google Oneindia Kannada News

ಕೋಲಾರ, ಡಿಸೆಂಬರ್ 22 : 'ಪರಮೇಶ್ವರ, ಶಿವಕುಮಾರ, ಸಿದ್ದರಾಮ ನಾವೆಲ್ಲ ಹಿಂದೂಗಳಲ್ಲವೇ?, ಆಂಜನೇಯನ ಭಕ್ತರಲ್ಲವೇ?. ಯೋಗಿ ಆದಿತ್ಯನಾಥ್ ದೇವರನ್ನು ಗುತ್ತಿಗೆ ಪಡೆದಿದ್ದಾರೆಯೇ?' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.

ಯೋಗಿ ಆದಿತ್ಯನಾಥ ಮಾತಿನ ಓಘಕ್ಕೆ ಉಘೇ ಎಂದ ಹುಬ್ಬಳ್ಳಿ ಮಂದಿಯೋಗಿ ಆದಿತ್ಯನಾಥ ಮಾತಿನ ಓಘಕ್ಕೆ ಉಘೇ ಎಂದ ಹುಬ್ಬಳ್ಳಿ ಮಂದಿ

ಶುಕ್ರವಾರ ಕೋಲಾರದಲ್ಲಿ 'ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ' ಸಮಾವೇಶ ಉದ್ದೇಶಿಸಿ ಮಾತನಾಡಿದ ಜಿ.ಪರಮೇಶ್ವರ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

ಯೋಗಿಯ ಬಿಟ್ಟಿ ಉಪದೇಶ ಬೇಕಾಗಿಲ್ಲ : ಸಿದ್ದು ಕೆಂಡಾಮಂಡಲಯೋಗಿಯ ಬಿಟ್ಟಿ ಉಪದೇಶ ಬೇಕಾಗಿಲ್ಲ : ಸಿದ್ದು ಕೆಂಡಾಮಂಡಲ

ಹುಬ್ಬಳ್ಳಿಯಲ್ಲಿ ಗುರುವಾರ ಬಿಜೆಪಿ ಪರಿವರ್ತನಾ ಯಾತ್ರಯಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, 'ನಾವೆಲ್ಲ ಆಂಜನೇಯನನ್ನು ಪೂಜಿಸುತ್ತೇವೆ. ಕರ್ನಾಟಕ ಸರ್ಕಾರ ಟಿಪ್ಪುವನ್ನು ಪೂಜಿಸುತ್ತದೆ' ಎಂದು ಹೇಳಿದ್ದರು.

Tipu Jayanti issue : Dr G Parameshwara hits out at Yogi Adityanath

ಪರಮೇಶ್ವರ ಹೇಳಿದ್ದೇನು?

* ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬರುವುದಕ್ಕೆ ನಮ್ಮ ವಿರೋಧವಿಲ್ಲ. ನಾವು ಕರ್ನಾಟಕದವರು ಎಲ್ಲರನ್ನು ಸ್ವಾಗತಿಸುತ್ತೇವೆ. ಆದರೆ, ನೀವು ಆಡಿತುವ ಮಾತು ಏನು?.

* ನಾವು ಟಿಪ್ಪು ಜಯಂತಿ ಮಾಡುತ್ತೇವೆ. ಹನುಮ ಜಯಂತಿ ಮಾಡುವುದಿಲ್ಲವೇ?. ನಾವು ಹಿಂದೂಗಳು ಗಣಪತಿ ಪೂಜೆ, ಆಂಜನೇಯನ ಪೂಜೆ ಮಾಡುತ್ತೇವೆ. ನಮ್ಮ ಹಿಂದೂ ಸಂಸ್ಕೃತಿಯ ಅರಿವು ನಮಗೂ ಇದೆ.

* ಇತಿಹಾಸವನ್ನು ತಿಳಿದುಕೊಂಡು ಮಾತನಾಡಿ. ಟಿಪ್ಪು ಜಯಂತಿ ಏಕೆ ಮಾಡಿದ್ದೇವೆ ಗೊತ್ತೆ. ದೇಶದ ಜನರನ್ನು ಶೋಷಣೆ ಮಾಡಿದ ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಹುಟ್ಟಿದ್ದು ನಮ್ಮ ಕರ್ನಾಟಕದಲ್ಲಿ. ಜಯಂತಿ ಆಚರಣೆ ಮಾಡಿ ನಾವು ಗೌರವ ಸಲ್ಲಿಸಿದ್ದೇವೆ.

* ಪರಮೇಶ್ವರ, ಶಿವಕುಮಾರ, ಮುನಿಯಪ್ಪ, ಆಂಜನೇಯ ನಾವೆಲ್ಲ ಹಿಂದೂಗಳಲ್ಲವೇ?, ಆಂಜನೇಯನ ಭಕ್ತರಲ್ಲವೇ? ದೇವರುಗಳನ್ನೆಲ್ಲ ನಿಗಮಗೆ ಬರೆದುಕೊಡಲಾಗಿದೆಯೇ?

* ಬಿಜೆಪಿಯವರು ರಾಜಕಾರಣ ಮಾಡಲಿ. ಆದಿತ್ಯನಾಥ್ ಬಿಜೆಪಿಗೆ ಮತ ಕೇಳಲಿ. ಆದರೆ, ನಮಗೆ ಹಿಂದೂ ಸಂಸ್ಕೃತಿಯ ಪಾಠ ಹೇಳಲು ಬರಬೇಡಿ

* ಪರಿವರ್ತನಾಯಾತ್ರೆಯಂತೆ. ಜೈಲಿಗೆ ಹೋಗಿ ಬಂದ ನೀವು ಪರಿವರ್ತನೆಯಾಗಬೇಕಾ?, ಜನರು ಪರಿವರ್ತನೆಯಾಗಬೇಕಾ? ಎಂಬುದನ್ನು ಬಿಜೆಪಿ ನಾಯಕರು ಹೇಳಲಿ.

English summary
Karnataka Pradesh Congress Committee (KPCC) president Dr.G. Parameshwara hit out at Yogi Adityanath after he raised question on celebrating Tipu Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X