ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ದೇಶದ್ರೋಹಿಗಳು''

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜನವರಿ ೨೬: ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ದೇಶದ್ರೋಹಿಗಳು ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

ರೈತರ ಹೆಸರಿನಲ್ಲಿ ಉಗ್ರ ಹೋರಾಟ ಮಾಡುತ್ತಿರುವವರು ರೈತರಲ್ಲ. ನಿಜವಾದ ರೈತ ಹೋರಾಟಗಾರರು ಪೋಲಿಸರು ಮೇಲೆ ಟ್ರಾಕ್ಟರ್ ಹರಿಸುವುದು, ಹಲ್ಲೆ ಮಾಡುವುದು, ಬಸ್ ಗಳನ್ನು ಧ್ವಂಸ ಮಾಡುವ ಸ್ಥಿತಿಗೆ ಹೋಗುವುದಿಲ್ಲ ಎಂದರು.

ಕೆಂಪುಕೋಟೆಯಲ್ಲಿ ರೈತರು ಧ್ವಜ ಹಾರಿಸಿದ್ದು ಖಂಡನೀಯ: ಸಚಿವ ಪ್ರಹ್ಲಾದ್ ಕೆಂಪುಕೋಟೆಯಲ್ಲಿ ರೈತರು ಧ್ವಜ ಹಾರಿಸಿದ್ದು ಖಂಡನೀಯ: ಸಚಿವ ಪ್ರಹ್ಲಾದ್

ದೆಹಲಿಯ ಕೆಂಪುಕೋಟೆಯಲ್ಲಿ ನಡೆದಿರುವ ಘಟನೆ ರಾಜಕೀಯ ಪಿತೂರಿಯಿಂದ ಕೂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತಪರ ಮಸೂದೆ ಸಹಿಸಿಕೊಳ್ಳದ ವಿರೋಧ ಪಕ್ಷಗಳು ನಡೆಸುತ್ತಿರುವ ಷಡ್ಯಂತ್ರ ಎಂದು ಆರೋಪಿಸಿದರು.

Those Who Have Insulted The National Flag Are Traitors: MP Muniswamy

ಪ್ರತಿಭಟನೆಯಲ್ಲಿ ಘರ್ಷಣೆಗೆ ಇಳಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೇಶದ ಜನ ನೋಡುತ್ತಿದ್ದಾರೆ, ಅವರು ಯಾವುದನ್ನು ಬೇಕಾದರೂ ಸಹಿಸಿಕೊಳ್ಳತ್ತಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಆದರೆ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಇಳಿಸಿ ಬೇರೆ ಧ್ವಜ ಹಾರಿಸಿರುವುದು ಸಹಿಸುವುದಿಲ್ಲ. ಅವರೆಲ್ಲ ಭಯೋತ್ಪಾದಕರು. ವಿರೋಧ ಪಕ್ಷಗಳು, ದಲ್ಲಾಳಿಗಳ ಪ್ರಚೋದನೆಗೆ ಒಳಗಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಹಿಂದೆ ಯಾರ ಕೈವಾಡ ಇದೆ ಎಂದು ಮುಂದೆ ಗೊತ್ತಾಗಲಿದೆ ಎಂದರು.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಮಾಜಿ ಸಿಎಂ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡಬಾರದು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಕಾಯ್ದೆಗಳಿಂದ ಇಂದು ನಿಜವಾಗಿ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಇಂತಹವರ ಮೇಲೆ ಪ್ರಧಾನಿ ಮೋದಿ ಕ್ರಮ ವಹಿಸಿದರೆ ಯಾರು ವಿರೋಧ ಮಾಡುವುದಿಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

Recommended Video

ಬೆಂಗಳೂರು: ನೆಲಮಂಗಲದಲ್ಲಿ ಅನ್ನದಾತರ ಬೃಹತ್ ಪ್ರೊಟೆಸ್ಟ್..! | Oneindia Kannada

English summary
Kolar MP S.Muniswamy said that those who insulted the national flag at the Red Fort in Delhi were traitors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X