ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಂತಾಮಣಿ ಹಸಿರನ್ನು ಕಾಪಾಡುತ್ತಿರುವ ಹಿರಿಯ.. ನಿಜಕ್ಕೂ ಕೋಟಿಗೊಬ್ಬ!

By ಶಿವಪ್ರಕಾಶ್ ರೆಡ್ಡಿ, ಚಿಂತಾಮಣಿ
|
Google Oneindia Kannada News

ಚಿಂತಾಮಣಿ, ಸೆಪ್ಟೆಂಬರ್ 21: ಚಿಂತಾಮಣಿ ನಗರಕ್ಕೆ ಕಳಶವಿಟ್ಟ0ತಿರುವ ಕೈಲಾಸಗಿರಿ, ಅಂಬಾಜಿದುರ್ಗ ಮತ್ತು ಕಾಡುಮಲ್ಲೇಶ್ವರ ಬೆಟ್ಟ ಪ್ರದೇಶಗಳಲ್ಲಿ ನೀವೇನಾದರು ಓಡಾಡಿದಲ್ಲಿ ಸುಮಾರು 70 ವರ್ಷ ವಯಸ್ಸಿನ ಹಿರಿಯ ಜೀವಿ ಅಲ್ಲಿ ಗಿಡಗಳನ್ನು ನೆಡುತ್ತಲೋ, ಇಲ್ಲ ನೆಟ್ಟಿರುವ ಗಿಡಗಳ ರಕ್ಷಣೆಗಾಗಿ ಬೇಲಿ ಹಾಕುತ್ತಲೋ ಅಥವಾ ನೀರು ನಿಲ್ಲಲು ಬದುಗಳನ್ನು ಮಾಡುತ್ತಲೋ ಕಾಣುತ್ತಾರೆ.

ಬ್ರಹ್ಮಚೈತನ್ಯ ಎನ್ನುವ ಈ ಹಿರಿಯ ಯುವಕ ಸಾಮಾನ್ಯರಲ್ಲ. ಗೌರಿಬಿದನೂರು ತಾಲ್ಲೂಕಿನ ಸೊನಗಾನಹಳ್ಳಿ ಇವರ ಜನ್ಮ ಸ್ಥಳವಾದರೂ ಚಿಂತಾಮಣಿಯನ್ನು ತಮ್ಮ ಕರ್ಮ ಭೂಮಿಯನ್ನಾಗಿ ಮಾಡಿಕೊಂಡು ಪ್ರಕೃತಿ ಸೇವೆ ಸಲ್ಲಿಸುತ್ತಿದ್ದಾರೆ.

The man engaged in growing his own forest for social cause in Chintamani

ಜಲಾನಯನ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಇವರು ಈ ದಿನ ಸಂಜೆ ಬೆಟ್ಟದ ಕಡೆ ನಾವು ಹಾಕಿದ್ದ ಬೀಜದುಂಡೆಗಳ ಬೆಳವಣಿಗೆಯನ್ನು ವೀಕ್ಷಿಸಲು ಹೋದಾಗ ಸಿಕ್ಕರು.

ಸೊಗಸಾಗಿ ಇಂಗ್ಲೀಷ್ ಮಾತಾಡ್ತಾರೆ!
ಉತ್ತಮವಾಗಿ ಇಂಗ್ಲಿಷ್ ಕೂಡ ಮಾತಾಡುವ ಇವರು ತಮ್ಮ ಪ್ರಕೃತಿ ಸೇವೆಯ ಬಗ್ಗೆ ಹೇಳಿದ್ದಿಷ್ಟು, 'ನನ್ನ ಎಪ್ಪತ್ತು ವರ್ಷದ ಜೀವನಕ್ಕೆ ಪ್ರಕೃತಿ ಆಧಾರವಾಗಿದೆ. ಈಗ ನಿವೃತ್ತಿಯಾದ ನಂತರ ಪ್ರಕೃತಿಯ ಸೇವೆಯನ್ನು ಮಾಡಿ ಸ್ವಲ್ಪವಾದರೂ ನನ್ನ ಋಣವನ್ನು ತೀರಿಸಲು ಯತ್ನಿಸುತ್ತಿದ್ದೇನೆ!'

The man engaged in growing his own forest for social cause in Chintamani

Recommended Video

800 Cylinder Exploded

ಇತರರೂ ಕೈ ಜೋಡಿಸಲಿ!
ಇಂಥ ಮನಸ್ಥಿತಿಯ ವ್ಯಕ್ತಿಗಳು ಕೋಟಿಗೊಬ್ಬರು. ಇವರ ಸೇವೆ ಹೀಗೆ ಮುಂದುವರೆಯಲಿ, ಇವರೊಂದಿಗೆ ಇನ್ನಷ್ಟು ಮಂದಿ ಕೈ ಜೋಡಿಸಿ ನಮ್ಮೂರಿಗೆ ಹಸಿರು ಹೊದಿಕೆಯೊಂದು ಸೃಷ್ಟಿಯಾಗಲಿ.

ಮಾಸಿಕ 20 ಸಾವಿರ ಪಿಂಚಣಿ!
ಅದೆಲ್ಲಾ ಸರಿ, ಇವರ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಅವರ ಬಳಿಯೇ ಇದೆ. ಜಲಾನಯನ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಮಾಸಿಕ 20 ಸಾವಿರ ರು. ಪಿಂಚಣಿ ಬರುತ್ತಿದೆ. ಹೀಗಾಗಿ, ಜೀವನ ನಿರ್ವಹಣೆಗೇನೂ ಕೊರತೆಯಿಲ್ಲ. ಹಾಗಾಗಿ, ತಾವು ಸಂತೋಷದಿಂದ ಪ್ರಕೃತಿ ಸೇವೆಯಲ್ಲಿ ನಿರತರಾಗಿರುವುದಾಗಿ ಅವರು ತಿಳಿಸಿದ್ದಾರೆ.

English summary
The interesting story of 70 year old man, who aims to grow a man-made forest aroung the Chintamani region in Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X