ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ: ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬೆಂಬಲಿಸಿ ಪೋಸ್ಟ್: ಮೂವರ ವಿರುದ್ಧ ಎಫ್‌ಐಆರ್- ಒಬ್ಬ ಬಂಧನ

|
Google Oneindia Kannada News

ಕೋಲಾರ ಸೆಪ್ಟೆಂಬರ್ 10: ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬೆಂಬಲಿಸಿ ಪೋಸ್ಟ್ ಮಾಡಿದ ಆರೋಪ ಮೇಲೆ ಕೋಲಾರದ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಓರ್ವನನ್ನು ಬಂಧಿಸಲಾಗಿದೆ. ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧ ಗೆದ್ದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬೆಂಬಲಿಸುವ ಚಿತ್ರಗಳು ಮತ್ತು ಪಠ್ಯಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಕೋಲಾರದ ಸುಹೇಲ್, ತೌಹಿದ್ ಮತ್ತು ಮನ್ಸೂರ್ ಎಂಬುವವರ ವಿರುದ್ಧ ದಾಖಲಿಸಲಾಗಿದೆ. ರಾಮಾಂಜಿ ವೆಂಕಟೇಶಪ್ಪ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನು ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಏಷ್ಯಾಕಪ್ ಸೂಪರ್-4 ಸುತ್ತಿನಲ್ಲಿ ಬುಧವಾರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಅತ್ಯಂತ ಜಿದ್ದಾಜಿದ್ದಿನ ಪಂದ್ಯ ನಡೆದಿದ್ದು, ಕೊನೆಯ ಓವರ್‌ನಲ್ಲಿ ಪಾಕಿಸ್ತಾನ 1 ವಿಕೆಟ್‌ನಿಂದ ಅಫ್ಘಾನ್ ತಂಡವನ್ನು ಸೋಲಿಸಿತು. ಈ ರೋಚಕ ಪಂದ್ಯವು ಶಾರ್ಜಾ ಮೈದಾನದಲ್ಲಿ ನಡೆಯಿತು. ಪಾಕಿಸ್ತಾನ ಕ್ರಿಕೆಟ್‌ ತಂಡ ಜಯ ಗಳಿಸಿದ ಬೆನ್ನಲ್ಲೇ ಕೋಲಾರದಲ್ಲಿ ಕಿಡಿಗೇಡಿಗಳು ಪಾಕಿಸ್ತಾನ್ ಪರ ಪೋಸ್ಟ್‌ರ್‌ಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ರಾಮಾಂಜಿ ವೆಂಕಟೇಶಪ್ಪ ಎನ್ನುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮೂವರಲ್ಲಿ ಓರ್ವನನ್ನು ಬಂಧಿಸಿದ್ದು ಇನ್ನಿಬ್ಬರ ಹುಡುಕಾಟ ನಡೆಸಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಜಯ

ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಜಯ

ಏಷ್ಯಾ ಕಪ್ 2022 ನಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ಏಷ್ಯಾ ಕಪ್​ನ ಫೈನಲ್​ ಸಹ ಪ್ರವೇಶಿಸಿದೆ. ಕೊನೆಯ ಓವರ್‌ನಲ್ಲಿ ಗೆಲುವಿಗೆ 11 ರನ್‌ಗಳ ಅಗತ್ಯವಿದ್ದಾಗ, 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಸೀಮ್ ಶಾ ಮೊದಲ 2 ಎಸೆತಗಳಲ್ಲಿ 2 ಸಿಕ್ಸರ್‌ಗಳನ್ನು ಸಿಡಿಸಿ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು. ಪಾಕಿಸ್ತಾನದ ಈ ಗೆಲುವಿನೊಂದಿಗೆ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾದ ಸವಾಲು ಅಂತ್ಯಗೊಂಡಿದೆ. ಇದರ ನಡುವೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಈ ಪಂದ್ಯದಲ್ಲಿ ಮೈದಾನದಲ್ಲಿಯೇ ಗಲಾಟೆಯಾಗಿದೆ. ಪಾಕಿಸ್ತಾನದ ಬ್ಯಾಟ್ಸ್‌ಮನ್ ಆಸಿಫ್ ಅಲಿ ಮತ್ತು ಅಫ್ಘಾನಿಸ್ತಾನದ ವೇಗದ ಬೌಲರ್ ಫರೀದ್ ಅಹ್ಮದ್ ಮೈದಾನದಲ್ಲಿ ವಾಗ್ವಾದ ನಡೆಸಿದರು. ಆದರೆ, ಅಂತಿಮವಾಗಿ ಅಫ್ಘಾನ್ ಆಟಗಾರ ಮತ್ತು ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತನ್ನು ಸರಿ ಮಾಡಿದರು.

ಪಾಕ್ ಆಸಿಫ್ ಅಲಿ ಅಫ್ಘಾನಿಸ್ತಾನದ ಫರೀದ್ ಅಹ್ಮದ್ ನಡುವೆ ವಾಗ್ವಾದ

ಪಾಕ್ ಆಸಿಫ್ ಅಲಿ ಅಫ್ಘಾನಿಸ್ತಾನದ ಫರೀದ್ ಅಹ್ಮದ್ ನಡುವೆ ವಾಗ್ವಾದ

ಆಸಿಫ್ ಅಲಿ 19ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಫರೀದ್ ಅಹ್ಮದ್ ಅವರ ಬೌಲ್​ಗೆ ಸಿಕ್ಸರ್‌ ಸಿಡಿಸಿದರು. ನಂತರ ಫರೀದ್ ಮುಂದಿನ ಎಸೆತದಲ್ಲಿ ಆಸಿಫ್ ಅಲಿಯನ್ನು ಔಟ್ ಮಾಡಿದರು. ಆಸಿಫ್ ವಿಕೆಟ್ ಪಡೆದ ನಂತರ ಫರೀದ್ ಹರ್ಷೋದ್ಗಾರ ಆರಂಭಿಸಿದರು. ಫರೀದ್‌ನ ಸಂಭ್ರಮವನ್ನು ಕಂಡು ಕೋಪಗೊಂಡ ಆಸಿಫ್ ಅಲಿ ಫರೀದ್‌ನತ್ತ ಬ್ಯಾಟ್ ಎತ್ತಿದರು.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪಾಕ್​ನ ಆಟಗಾರ ಆಸಿಫ್​ ಅಲಿ ವರ್ತನೆಗೆ ಎಲ್ಲಡೆ ಟೀಕೆಗಳು ಕೇಳಿಬರುತ್ತಿದೆ. ಅಲ್ಲದೇ ಅಸೀಫ್ ಅಲಿ ಅವರನ್ನು ಐಸಿಸಿ ಕ್ರಿಕೆಟ್​ನಿಂದ ನಿಷೇಧ ಮಾಡಬೇಕೆಂದು ಟ್ವಿಟರ್​ನಲ್ಲಿ ಹ್ಯಾಷ್​ ಟ್ಯಾಗ್​ ಟ್ರೆಂಡ್​ ಆಗುತ್ತಿದೆ. ಪಂದ್ಯದ ನಂತರ ಅವರ ವಿರುದ್ಧ ಐಸಿಸಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಏಷ್ಯಾಕಪ್ ಫೈನಲ್ ಸೆಪ್ಟೆಂಬರ್ 11 ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ.

ಮೈದಾನಲ್ಲಿ ಕುರ್ಚಿ ಎಸೆದು ಬಡಿದಾಡಿಕೊಂಡ ಫ್ಯಾನ್ಸ್

ಮೈದಾನದಲ್ಲಿ ಆಟಗಾರರನ ನಡುವೆ ಮಾತಿನ ಚಕಮಕಿ ನಡೆದರೆ, ಇತ್ತ ಪಂದ್ಯದ ನಂತರ ಸ್ಟೇಡಿಯಂನಲ್ಲಿ 2 ತಂಡಗಳ ಅಭಿಮಾನಿಗಳ ನಡುವೆ ಜಗಳ ನಡೆದಿದೆ. ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುರ್ಚಿಗಳನ್ನು ಎತ್ತಿಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಪಾಕ್​ ವಿರುದ್ಧ ಅಫ್ಘಾನ ತಂಡ ಸೋಲನ್ನು ಅನುಭವಿಸಿದ ನಂತರ ಬೇಸರಗೊಂಡ ಅಭಿಮಾನಿಗಳು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳನ್ನು ಥಳಿಸಿ ಕ್ರೀಡಾಂಗಣವನ್ನು ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪಾಕಿಸ್ತಾನದ ದಿಗ್ಗಜ ಬೌಲರ್ ಶೋಯೆಬ್ ಅಖ್ತರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಅಫ್ಘಾನ್ ಅಭಿಮಾನಿಗಳಿಗೆ ನಿರಾಸೆ

ಅಫ್ಘಾನ್ ಅಭಿಮಾನಿಗಳಿಗೆ ನಿರಾಸೆ

ಬುಧವಾರ ನಡೆದ ಏಷ್ಯಾಕಪ್‌ನ ಈ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ 1 ವಿಕೆಟ್‌ನಿಂದ ಅಫ್ಘಾನಿಸ್ತಾನವನ್ನು ಸೋಲಿಸಿತು. ಪಾಕಿಸ್ತಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅವರು ಅದ್ಭುತ ಬೌಲಿಂಗ್ ಮಾಡುವ ಮೂಲಕ ಅಫ್ಘಾನಿಸ್ತಾನವನ್ನು 129 ರನ್‌ಗಳಿಗೆ ನಿರ್ಬಂಧಿಸುವಲ್ಲಿ ಯಶಸ್ವಿಯಾದರು. ಬಳಿಕ ಪಾಕಿಸ್ತಾನ 19.2 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಫ್ಘಾನ್ ಸೋಲಿನಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ ಕ್ರೀಡಾಂಗಣದಲ್ಲಿ ಅಭಿಮಾನಿಗಳ ನಡುವೆ ಜಗಳಕ್ಕೆ ಕಾರಣವೇನು ಎನ್ನುವುದು ಮಾತ್ರ ತಿಳಿದು ಬಂದಿಲ್ಲ.

English summary
An FIR has been registered against three people from Kolar for allegedly posting in support of the Pakistan cricket team and one has been arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X