ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಿಯ ಉತ್ಪನ್ನಗಳ ತಯಾರಿ; ಇದು ಮಹಿಳೆಯರ ಸಾಧನೆಯ ಕಥೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 18; ಜೀವನದಲ್ಲಿ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ದೃಢವಾದ ಸಂಕಲ್ಪ, ಆತ್ಮವಿಶ್ವಾಸ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು. ಕೋಲಾರದ ಮಹಿಳೆಯರ ತಂಡವೊಂದು ಹಗಲಿರುಳು ಶ್ರಮಿಸಿ ಇಂದು ರಾಜ್ಯದ ಮೂಲೆ ಮೂಲೆಗೆ ದೇಶಿ ಉತ್ಪನ್ನಗಳನ್ನು ತಲುಪಿಸಿದ್ದಾರೆ.

ಇದು ತಮ್ಮ ಕಾಯಕನ್ನು ನಿಷ್ಠೆಯಿಂದ ಮಾಡುತ್ತಿರುವ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದ ವೇದಿಕ್ ಹಾಗೂ ವೈಭವ ಸ್ವಸಹಾಯ ಸಂಘದ ಮಹಿಳೆಯರು ಸಾಧನೆಯ ಹೆಜ್ಜೆ.

ಮೂರು ವರ್ಷದ ಬಳಿಕ ಎಡಿಡಿ ಇಂಜಿನಿಯರಿಂಗ್‌ಗೆ ಸಿಕ್ಕಿತು ಭೂಮಿ ಮೂರು ವರ್ಷದ ಬಳಿಕ ಎಡಿಡಿ ಇಂಜಿನಿಯರಿಂಗ್‌ಗೆ ಸಿಕ್ಕಿತು ಭೂಮಿ

ಕೃಷಿ, ಹೈನುಗಾರಿಕೆಯಲ್ಲಿ ಮೂಲಕ ಜೀವನ ಕಟ್ಟಿಕೊಂಡಿರುವ ಮಹಿಳೆಯರ ನಡುವೆ ಗುಂಡುಮನತ್ತ ಗ್ರಾಮದ ಈ ಸ್ವಾಭಿಮಾನಿ ಮಹಿಳೆಯರು ಹೊಸದೊಂದು ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಸಾವಯವ, ದೇಶಿಯ ಉತ್ಪನ್ನಗಳನ್ನು ತಯಾರು ಮಾಡಿ ರಾಜ್ಯದ ಮೂಲೆ ಮೂಲೆಗಳಿಗೆ ಪರಿಚಯಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಂಜಿನಿಯರಿಂಗ್ ಪದವೀಧರೆ! ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಂಜಿನಿಯರಿಂಗ್ ಪದವೀಧರೆ!

ಹತ್ತಕ್ಕೂ ಹೆಚ್ಚು ನಿರುದ್ಯೋಗಿ ಮಹಿಳೆಯರು ಹೊಸ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಗ್ರಾಮದ ರತ್ನಮ್ಮ ನೇತೃತ್ವದದಲ್ಲಿ ದೃಢ ನಿರ್ಧಾರ ಮಾಡಿ, ಸಾವಯುವ ಕೃಷಿಯ ಮೂಲಕ ಹಲವು ಬೆಳೆಗಳನ್ನು ಬೆಳೆದು ಅವುಗಳ ಮೂಲಕ ದೇಶಿಯ ತಿಂಡಿ, ತಿನಿಸುಗಳನ್ನು ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸಿದ್ದಾರೆ.

ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ! ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ!

ಸ್ವಸಹಾಯ ಗುಂಪು

ಸ್ವಸಹಾಯ ಗುಂಪು

ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದ ಮಹಿಳೆಯರು ಮಾವು, ಬೆಟ್ಟದ ನಲ್ಲಿಯಂತಹ ಕಿರು ಧಾನ್ಯಗಳ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತಾರೆ. ತಾವೇ ಮಾರ್ಕೆಟಿಂಗ್ ಮಾಡಿ ಆದಾಯದ ಮೂಲವನ್ನು ಕಂಡುಹಿಡಿದುಕೊಂಡಿದ್ದಾರೆ.

ಸಿರಿಧಾನ್ಯಗಳ ಮಾರಾಟ

ಸಿರಿಧಾನ್ಯಗಳ ಮಾರಾಟ

ಇಂದಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನವಣೆ, ಸಾಮೆ, ಕೊರಲೆ, ಊದಲು, ಬರಗು, ರಾಗಿ, ಸಜ್ಜೆ, ಜೋಳ, ಮಾವಿನಿಂದ ತಯಾರಿಸಿರುವ ಉತ್ಪನ್ನಗಳು ಇಲ್ಲಿನ ವಿಶೇಷ. ಇಂತಹ ಸಾವಯುವ ಸಿರಿಧಾನ್ಯಗಳನ್ನ ತಂದು ಮಾರಾಟ ಮಾಡಲು ನಿರ್ಧರಿಸಿ ಆರಂಭಿಸಿದ ವೇದಿಕ್ ಸಂಸ್ಥೆ ಇಂದು ಯಶಸ್ಸುಕಂಡಿದೆ.

ರೈತರಿಂದಲೇ ಬೆಳೆ ಬೆಳೆಸಯತ್ತಾರೆ

ರೈತರಿಂದಲೇ ಬೆಳೆ ಬೆಳೆಸಯತ್ತಾರೆ

ಸಿರಿಧಾನ್ಯಗಳ ಬೆಳೆಗಳನ್ನು ರೈತರಿಂದಲೇ ಬೆಳೆಸಿ ಅವುಗಳ ಮೂಲಕ ತ್ವರಿತ ಉತ್ಪನ್ನಗಳನ್ನು ಸಿದ್ದಪಡಿಸಿ ರಾಜ್ಯಾದ್ಯಂತ ಮಾರಾಟ ಮಾಡುತ್ತಾರೆ. ಹಲವು ಮಹಿಳೆಯರು ವೇದಿಕ್ ಸಂಸ್ಥೆಯ ಮೂಲಕ ಉದ್ಯೋಗದಲ್ಲಿ ತೊಡಗಿದ್ದು, ಅವರಿಗೆ ಇದು ವೇದಿಕೆಯಾಗಿದೆ.

ಮಹಿಳೆಯರು ತಯಾರು ಮಾಡುವ ರಾಗಿ ಗಂಜಿ, ಉಪ್ಪಿಟ್ಟು ಖಾದ್ಯ, ಬೆಟ್ಟದ ನಲ್ಲಿಕಾಯಿಯ ಜ್ಯೂಸ್, ಉಪ್ಪಿನಕಾಯಿ, ಮಾವಿನ ಜ್ಯೂಸ್, ಮೊಳಕೆ ಕಾಳು, ಅಕ್ಕಿ, ಶಾವಿಗೆ, ಹಪ್ಪಳ ಸೇರಿದಂತೆ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬ್ರಾಂಡ್‌ಗಳಾಗಿವೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರ-ಹೆಚ್ಡಿಕೆ,ಸಿದ್ದು ಆರೋಪಕ್ಕೆ ರೇಣುಕಾಚಾರ್ಯ ಟಾಂಗ್ | Oneindia Kannada
ಆನ್‌ಲೈನ್‌ ಮೂಲಕವೂ ಮಾರಾಟ

ಆನ್‌ಲೈನ್‌ ಮೂಲಕವೂ ಮಾರಾಟ

ಗುಂಡಮನತ್ತ ಗ್ರಾಮದಲ್ಲಿ ತಯಾರಾಗುವ ಸಿರಿಧಾನ್ಯ ಉತ್ಪನ್ನಗಳು ಆನ್‌ಲೈನ್‌ಗಳಲ್ಲೂ ಸಹ ಮಾರಾಟ ವಾಗುತ್ತವೆ. ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯ ಸಹಕಾರ ಪಡೆದು ತಯಾರಿಕೆಗೆ ಬೇಕಾದ ಯಂತ್ರಗಳನ್ನು ಪಡೆದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಮೇಳಗಳಲ್ಲಿ ಪಾಲ್ಗೊಂಡು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

English summary
Kolar district Srinivaspur taluk Gundanamatta village mahila swasahaya sangha busy in production of Siridhanya products. Now team of the 10 women selling products in online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X