• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರೀನಿವಾಸಪುರದ ವೈ ಹೊಸಕೋಟೆ ಸರಕಾರಿ ಶಾಲೆ; ಅಧಿಕಾರಿಗಳ ಗಿಳಿಪಾಠದ ಉತ್ತರ

By ಶ್ರೀನಿವಾಸಪುರ ಪ್ರತಿನಿಧಿ
|

ಶ್ರೀನಿವಾಸಪುರ (ಕೋಲಾರ ಜಿಲ್ಲೆ), ಜುಲೈ 25: ಸರಕಾರಿ ಶಾಲೆಯೊಂದು ಹಾಳು ಕೊಂಪೆಯಂತೆ ಬಿದ್ದಿರುವುದನ್ನು ಶ್ರೀನಿವಾಸಪುರ ತಾಲೂಕಿನ ವೈ. ಹೊಸಕೋಟೆಯಲ್ಲಿ ಕಾಣಬಹುದು. ಇದು ಅನೇಕ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಪ್ರತಿನಿಧಿಸುವಂತಿದೆ. ಹಾಗೆಯೇ ಇನ್ನು 8-10 ವರ್ಷಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜುಗಳ ಪರಿಸ್ಥಿತಿಗೆ ಕನ್ನಡಿಯೂ ಆಗಲಿದೆ.

ಈ ಪ್ರೌಢಶಾಲೆಯನ್ನು ಈ ಶೈಕ್ಷಣಿಕ ವರ್ಷದ ಆರಂಭವಾದ ಜೂನ್ ನಿಂದ ಮುಚ್ಚಲಾಗಿದ್ದರೆ ಇದೇ ಪ್ರಾಂಗಣದಲ್ಲಿ ಇರುವ ಹಿರಿಯ ಪ್ರಾಥಮಿಕ ಶಾಲೆಯನ್ನು ಕಳೆದ ಶೈಕ್ಷಣಿಕ ವರ್ಷದಿಂದ ಲಾಕೌಟ್ ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ಇರುವ ಸಾಮಾನ್ಯ ಕಾರಣವೆಂದರೆ; ಮಕ್ಕಳು ಈ ಶಾಲೆಗೆ ಬಾರದೆ ಇರುವುದು. ಈ ಹೇಳಿಕೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಗಿಳಿಪಾಠವಾಗಿದೆ.

ಕರ್ನಾಟಕದ 64% ಶಾಲೆಗಳಲ್ಲಿ ಆಟದ ಮೈದಾನ, ದೇಶದಲ್ಲೇ ಅಧಿಕ!

ಇದನ್ನು ಶಿಕ್ಷಣ ಇಲಾಖೆಯಿಂದ ಶಿಕ್ಷಕರು ಬಾಯಿಪಾಠ ಮಾಡಿಕೊಂಡಿದ್ದಾರೆ. ಇಲ್ಲಿಯ ಒಳ ಕಾರಣಗಳನ್ನು ಈ ಎರಡು ವರ್ಗ ಹುಡುಕಿದ್ದಿಲ್ಲ. ತಮ್ಮ ತಪ್ಪುಗಳನ್ನು ಸೇರಿಕೊಂಡು, ಎಲ್ಲ ತಪ್ಪುಗಳನ್ನು ಸಾರ್ವಜನಿಕರ ತಲೆಗೆ ಕಟ್ಟುವುದು ಇಷ್ಟೇ ಸಾಮಾನ್ಯವಾಗಿದೆ. ಈ ಬಗ್ಗೆ ಸೂಕ್ಷ್ಮ ಪ್ರಜ್ಞೆಯಿಂದ ಆಲೋಚಿಸಿದರೆ ಸಿಗುವ ಉತ್ತರವೆಂದರೆ ಶಿಕ್ಷಕರಾಗಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯಾಗಲಿ ಪೋಷಕರಲ್ಲಿ ನಂಬಿಕೆ ಹುಟ್ಟಿಸುತ್ತಿಲ್ಲ.

ಭಾವಿ ಶಿಕ್ಷಕ- ಶಿಕ್ಷಕಿಯರ ಕನಸಿಗೆ ಕಲ್ಲು

ಇದು ಸಮಸ್ಯೆಯ ಗಾಂಭೀರ್ಯ ಬಲ್ಲವರಿಗೆ ಮಾತ್ರ ಅರ್ಥವಾಗುತ್ತದೆ. ಇಲಾಖೆ ಮತ್ತು ಶಿಕ್ಷಕರು ನಿಜಕ್ಕೂ ಸರಕಾರಿ ಶಾಲೆಗಳ ಸರ್ವಾಂಗೀಣ ಆರೋಗ್ಯದತ್ತ ಕ್ರೀಯಾಶೀಲರಾಗದಿದ್ದರೆ ಶಿಕ್ಷಕರಾಗಲು ಬೇಕಿರುವ ಆರ್ಹತಾ ತರಬೇತಿ ಪಡೆದ ಲಕ್ಷಾಂತರ ಭಾವಿ ಶಿಕ್ಷಕ ಯುವಕ-ಯುವತಿಯರ ಕನಸುಗಳಿಗೆ ಕಲ್ಲು ಹಾಕಿದವರಾಗುತ್ತಾರೆ ಎಂಬುದಂತೂ ಸೂರ್ಯನಷ್ಟೇ ಸತ್ಯ.

ಮಲ್ಲಿಗೆ ಕೃಷಿ ಮಾಡಿ ಶಿಕ್ಷಕರಿಗೆ ಸಂಬಳ ನೀಡುವ ವಿದ್ಯಾರ್ಥಿಗಳು

ಸರಕಾರದ ಪರಿಣಾಮ ಚಿಂತನೆಯ ಬಂಜೆತನದಿಂದಾಗಿ. ಇಲ್ಲಿ ಸಮಸ್ಯೆಗಳು ಹುಟ್ಟಲ್ಲ, ಕಾರಣವಾಗಿದೆ ಎಂಬುದು ಶಿಕ್ಷಣ ಸೂಕ್ಷ್ಮಮತಿಗಳ ಅಭಿಪ್ರಾಯ. ಇದೇ ಸರಕಾರ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವಿ ರಾಜಕಾರಣಿ, ಬಂಡವಾಳಶಾಹಿ ಹಿತ ರಕ್ಷಕ ಎಂಬಂತೆ 'ಪ್ರತಿಷ್ಠ ಶಾಲೆಗಳೆಂದು ಆ ಶಾಲೆಗಳನ್ನು ಪ್ರಮೋಟ್ ಮಾಡಿದ್ದು ಸರ್ಕಾರಿ ಶಾಲೆಗಳು ಖಾಲಿ ಹೊಡೆಯಲು ಮುಖ್ಯ ಕಾರಣ'.

ಇಲ್ಲಿ ಸರಕಾರ ತನ್ನ ವ್ಯವಸ್ಥೆಯ ಯಾವ ಸರಕಾರಿ ಶಾಲೆಯನ್ನೂ ಪ್ರತಿಷ್ಠಿತ ಶಾಲೆಯೆಂದು ಸಾರ್ವಜನಿಕರಿಗೆ ಹೇಳಲೇ ಇಲ್ಲ. ಒಂದು ರೀತಿಯಲ್ಲಿ ಸರಕಾರವು ಶ್ರೀಮಂತ ಖಾಸಗಿ ಶಾಲೆಗಳ ರಾಯಭಾರಿ ಏನೋ ಎಂಬ ಅನುಮಾನ ಹುಟ್ಟುವಂತಾದುದು ವರ್ತಮಾನದ ಸತ್ಯವೂ ಆಗಿದೆ.

ನಾನೇನೂ ಕಮ್ಮಿಯಿಲ್ಲ ಅಂತಿದೆ ಸಿಂಗಟಗೆರೆಯ ಕನ್ನಡ ಶಾಲೆ

ಸಮಸ್ಯೆಯ ಮುಳ್ಳನ್ನು ತೆಗೆಯದೇ ಬಿಟ್ಟಿದೆ

ಅಕ್ಷರ ದಾಸೋಹ, ಹಾಲುಭಾಗ್ಯ, ಸಮವಸ್ತ್ರ ದಾನ, ಉಚಿತ ಪಠ್ಯ ಪುಸ್ತಕ, 8ನೇ ತರಗತಿಯಿಂದ ಸೈಕಲ್, ವಿದ್ಯಾರ್ಥಿನಿಲಯ ವ್ಯವಸ್ಥೆ, ವಿವಿಧ ವೇತನಗಳು ಹೀಗೆ ಪಟ್ಟಿಯ ಬಾಲ ಬೆಳೆಸುತ್ತದೆ. ಆದರೆ ಸಮಸ್ಯೆಯ ಮುಳ್ಳನ್ನು ತೆಗೆಯದೇ ಬಿಟ್ಟಿದೆ.

ಅನೇಕ ಅಧಿಕಾರಿಗಳಿಗೆ ಖಾಸಗಿ ಶಾಲೆಗಳ ಬಗೆಗೆ ಇರುವ ಒಲವು ತನಗೆ ಅನ್ನ ಬಟ್ಟೆ ನೀಡುವ ಸರಕಾರಿ ಶಾಲೆಗಳ ಬಗ್ಗೆ ಇರದಿರುವುದು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯ ಮುಗಿಸಿರುವ ಅನೇಕ ಶಿಕ್ಷಕರ ಅನುಭವದಲ್ಲಿದೆ. ಇವರು ಸರಕಾರಿ ಶಾಲೆಗಳಿಗೆ ಬಂದಾಗ ಇರುವ ಲೋಪದೊಂದಿಗೆ ಇಲ್ಲದ ಲೋಪಗಳನ್ನು ಸೇರಿಸಿ, ಶಿಕ್ಷಕರನ್ನು ಟೀಕಿಸಿ ನಿರಾಸಕ್ತರನ್ನಾಗಿ ಮಾಡುವುದುಂಟು. ಇದರಿಂದಾಗಿ ಕ್ರೀಯಾಶೀಲ ಶಿಕ್ಷಕರು ಮಂಕಾಗುತ್ತಾರೆ.

ನಲಿ-ಕಲಿ ಪೋಷಕರ ಮನಸ್ಸನ್ನು ಗೆದ್ದುದ್ದಿಲ್ಲ. ಇದು ರಾಜಕಾರಣಿ- ಇಲಾಖೆ ಅಧಿಕಾರಿಗಳಷ್ಟೆ ಪ್ರಿಯವಾದುದು. ಈ ಬಗ್ಗೆ ಶಿಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ನಲಿ-ಕಲಿ ಬಗ್ಗೆ "ನಲಿ-ಕಲಿ-ಮರಿ" ಎಂಬ ಮಾತು ಜೋಕಾಗಿ ಹರಿದಾಡುತ್ತಿರುತ್ತದೆ. ಇಲ್ಲಿ ಪ್ರತಿಷ್ಠೆಗೆ ಬೀಳದೆ ಕ್ರಮಬದ್ಧ ಅಕ್ಷರಮಾಲೆ ಕಲಿಕೆಯನ್ನು ಆರಂಭಿಸಿದ್ದೇ ಆದರೆ ಪೋಷಕರ ಮನಸ್ಸನ್ನು ಸ್ಪಲ್ಪ ಪ್ರಮಾಣದಲ್ಲಿ ಇತ್ತ ಸೆಳೆಯಬಹುದು.

ಸರಕಾರಿ ಶಾಲೆಗಳ ಪತನದ ಹಾದಿಯಲ್ಲಿ ಎಸ್.ಡಿ.ಎಂ.ಸಿ.ಗಳತ್ತಲೂ ಗಮನ ಹರಿಸಬಹುದು. ಇವನ್ನು ರೂಪಿಸಿದ ಉದ್ದೇಶ ಘನವಾದುದು. ಆದರೆ ಬಳಸಿಕೊಳ್ಳುವಾಗ ಆ ಉದ್ದೇಶದಲ್ಲಿ ಆ ಘನತೆ ಉಳಿಯಲಿಲ್ಲ. ಒಂದು ರೀತಿಯಲ್ಲಿ ಎಸ್.ಡಿ.ಎಂ.ಸಿಗಳು ಗ್ರಾಮ ಪಂಚಾಯತಿ ರಾಜಕೀಯದ ತರಬೇತಿ ಕೇಂದ್ರಗಳು ಎಂಬ ಸಾರ್ವಜನಿಕ ಟೀಕೆಯನ್ನು ಗಮನಿಸಬೇಕು.

ರಾಜಕೀಯ ಕಾರಣಗಳಿಂದ ವಿಫಲ ಆಗಿರುವುದಕ್ಕೆ ಉದಾಹರಣೆ

ಶಾಲೆಗಳಿಗೆ ಪಕ್ಷ ರಾಜಕಾರಣ ಪ್ರವೇಶವಾದುದು ಎಸ್.ಡಿ.ಎಂ.ಸಿಗಳ ಮೂಲಕ. ಒಂದು ಮಹತ್ವವಾದ ಸಂಸ್ಥೆ ರಾಜಕೀಯ ಕಾರಣಗಳಿಂದ ವಿಫಲವಾಗುವುದು ಹೇಗೆ ಎಂಬುದಕ್ಕೆ ಎಸ್.ಡಿ.ಎಂ.ಸಿಗಳು ಜೀವಂತ ನಿದರ್ಶನಗಳು.

ಇಷ್ಟೇ ಮುಖ್ಯವಾಗಿ ಪಾಠ ಬೋಧನೆಯ ಕರ್ತವ್ಯ ನಿರ್ವಹಿಸುವವರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬಿಟ್ಟಿದ್ದಾರೆಯೇ, ತಮ್ಮ ಭೋಧನಾ ವ್ಯವಸ್ಥೆಯಲ್ಲಿ ಉಳಿಸಿಕೊಂಡಿದ್ದಾರೆಯೇ ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಸರಕಾರಿ ಶಾಲೆಗಳ ಅವಸಾನದ ಸಮಸ್ಯೆಗಳಲ್ಲಿ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ.

ಅಂದರೆ, ಸಾರ್ವಜನಿಕರಲ್ಲಿ ಸರಕಾರಿ ಶಾಲೆಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ನಂಬಿಕೆ ಹುಟ್ಟಿಸುವಂತಹ ಜವಾಬ್ದಾರಿಯನ್ನು ಶಿಕ್ಷಣ ಮಂತ್ರಿ, ಶಿಕ್ಷಣ ಇಲಾಖೆ, ಶಿಕ್ಷಕರು ಸಾರ್ವಜನಿಕವಾಗಿ ವಹಿಸಿಕೊಳ್ಳಬೇಕಾಗುತ್ತದೆ. ಆಗಷ್ಟೆ ವೈ. ಹೊಸಕೋಟೆಯಲ್ಲಿನ ಶಾಲಾ ಪರಿಸ್ಥಿತಿಗೆ ಸರಕಾರಿ ಶಾಲೆಗಳು ತಲುಪದಂತೆ ಮಾಡಬಹುದು.

ಭಯದಲ್ಲಿ ಅಂಗನವಾಡಿ: ಊರಿನ ಮಧ್ಯದಲ್ಲಿದ್ದ ಅಂಗನವಾಡಿಯನ್ನು ಮಸಣ ಮೌನದಂತಿರುವ ಈ ಶಾಲೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಏಳು ಪುಟ್ಟಪುಟ್ಟ ಮಕ್ಕಳು ಹಾಗೂ ಸಹಾಯಕಿಯನ್ನು ಕಟ್ಟಿಕೊಂಡು ಏಗುತ್ತಿರುವ ನೇತ್ರಾವತಮ್ಮನವರು ಭಯದ ನಡುವೆ ಕೆಲಸ ಮಾಡುವಂತಾಗಿದೆ.

ಮುಚ್ಚಿದ ಶಾಲೆ ಊರ ಹೊರಗಿದೆ. ಇತ್ತಿಚಿನ ದಿನಗಳಲ್ಲಿ ಹಗಲಿನಲ್ಲಿಯೂ ಕುಡುಕರ ಹಾಗೂ ಅನ್ಯ ಚಟುವಟಿಕೆಯ ಜನ ಇಂಥ ಸ್ಥಳಗಳನ್ನು ಆಯ್ದುಕೊಳ್ಳುವುದು ಹಳ್ಳಿಗಳಿಗೂ ಹಬ್ಬಿದೆ. ಅಂಗನವಾಡಿ ಕೇಂದ್ರವನ್ನು ಹಿಂದಿನ ಸ್ಥಳಕ್ಕೆ ಸ್ಥಳಾಂತರಿಸುವುದು ಕ್ಷೇಮವೆಂಬುದು ಆಕೆಯ ಅಭಿಪ್ರಾಯವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kolar district Srinivasapura taluk Y Hosakote government school in horrible condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more