ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಬಾಲ್ಯದ ಸಿಹಿ ಹಂಚಿದ ಮಕ್ಕಳ ಹಬ್ಬ

By Lekhaka
|
Google Oneindia Kannada News

ಅವರೆಲ್ಲ ಸದಾ ಹೋಂವರ್ಕ್, ಕಂಪ್ಯೂಟರ್, ಮೊಬೈಲ್, ಟಿ.ವಿ ಅಂತ ಕಾಲ ಕಳೆಯುತ್ತಿದ್ದ ಮಕ್ಕಳು. ಆದರೆ ಆ ದಿನ ಆ ಮಕ್ಕಳೆಲ್ಲಾ ಗೂಡಿನಿಂದ ಹೊರಬಂದ ಹಕ್ಕಿಗಳಂತಾಗಿದ್ದರು. ಹಾಡುತ್ತಾ ನಲಿಯುತ್ತಾ ತಮ್ಮ ಮನಸ್ಸಿಗೆ ಸಂತೋಷವಾಗುವ ರೀತಿಯಲ್ಲಿ ಕುಣಿದು ಕುಪ್ಪಣಿಸಿದರು.

ಈ ಒಂದು ಸನ್ನಿವೇಶಕ್ಕೆ ಕಾರಣವಾಗಿದ್ದು ವಿವೇಕಾನಂದ ಜಯಂತಿ. ವಿವೇಕಾನಂದ ಜಯಂತಿಯಂದು ಕೋಲಾರದಲ್ಲಿ ಭಾರತ್ ಸ್ಪೋರ್ಟ್ಸ್ ಮತ್ತು ಗೈಡ್ಸ್ ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಆ ದಿನ ನಮ್ಮ ದೇಶದ ಮುಂದಿನ ಪ್ರಜೆಗಳಾದ ಮಕ್ಕಳು ಏನೆಲ್ಲಾ ಹೊಸ ಪ್ರಯೋಗಗಳನ್ನು ಮಾಡಿದರು ಗೊತ್ತಾ? ಇಲ್ಲಿದೆ ನೋಡಿ ಆ ಚಿತ್ರಣ...

 250ಕ್ಕೂ ಹೆಚ್ಚು ಮಕ್ಕಳು ಭಾಗಿ

250ಕ್ಕೂ ಹೆಚ್ಚು ಮಕ್ಕಳು ಭಾಗಿ

ಭಾರತ್ ಸ್ಫೋರ್ಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆದ ಮಕ್ಕಳ ಹಬ್ಬದಲ್ಲಿ ಬಗೆ ಬಗೆ ಅಡುಗೆ, ವಿವಿಧ ಗ್ರಾಮೀಣ ಕ್ರೀಡೆ, ಜಾನಪದ ವೇಷಭೂಷಣ, ನೃತ್ಯ ಇವೆಲ್ಲವೂ ಪುಟಾಣಿಗಳನ್ನು ಸೆಳೆಯುತ್ತಿದ್ದವು. ಈ ಮಕ್ಕಳ ಹಬ್ಬದಲ್ಲಿ ಕೋಲಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಿಂದ ಬಂದಿದ್ದ ಸುಮಾರು 250ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಪಟ್ಟರು.

ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದುಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು

 ಕಲಿತು ಕಲಿಸಿದ ಮಕ್ಕಳು

ಕಲಿತು ಕಲಿಸಿದ ಮಕ್ಕಳು

ಮಕ್ಕಳಿಗಾಗಿ ವಿಶೇಷವಾಗಿ ತಿಂಡಿ ತಿನಿಸುಗಳನ್ನು ಮಾಡುವ ಸ್ಪರ್ಧೆ, ರಂಗೋಲಿ ಸ್ಪರ್ಧೆ ಸೇರಿದಂತೆ ಗೋಣಿಚೀಲದ ಓಟ, ಕಣ್ಣಿಗೆ ಬಟ್ಟೆಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಬಿಸ್ಕೆಟ್, ಹಗ್ಗ ಜಗ್ಗಾಟ, ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೆಲವು ಮಕ್ಕಳು ವೇದಿಕೆಯಲ್ಲಿ ವಿವಿಧ ವೇಷ ಭೂಷಣಗಳನ್ನು ತೊಟ್ಟು ನಾಟಕ, ಹಾಡು, ನೃತ್ಯ ಮಾಡುವ ಮೂಲಕ ಮನ ರಂಜನೆ ನೀಡಿದರು. ಕೆಲವು ಮಕ್ಕಳಂತೂ ತಮಟೆ ಸದ್ದಿಗೆ ವೇದಿಕೆ ಮೇಲೆ, ಗೂಡಿನಿಂದ ಹೊರ ಬಂದ ಪಕ್ಷಿಗಳಂತೆ ಕುಣಿದು ಕುಪ್ಪಳಿಸಿದರು.

 ಚೌಕಟ್ಟಿನಿಂದ ಹೊರಬಂದ ಮಕ್ಕಳು

ಚೌಕಟ್ಟಿನಿಂದ ಹೊರಬಂದ ಮಕ್ಕಳು

ಸಾಮಾನ್ಯವಾಗಿ ಮಕ್ಕಳು ಕೇವಲ ಸ್ಕೂಲ್, ಹೋಂ ವರ್ಕ್ ನಲ್ಲಿ ಕಳೆದುಹೋಗಿರುತ್ತಾರೆ. ಬಿಡುವು ಸಿಕ್ಕಾಗ ಮೊಬೈಲ್ ಫೋನ್, ಟಿವಿ, ಇನ್ನಿತರ ಚಟುವಟಿಕೆಗಳಲ್ಲಿ ಕಾಲ ಕಳೆಯುತ್ತಾರೆ. ಶಾಲೆಗಳಲ್ಲಿ ಹೆಚ್ಚೆಂದ್ರೆ ಕ್ರಿಕೆಟ್, ವಾಲಿಬಾಲ್ ಕ್ರೀಡೆಗಳಲ್ಲಿ ತೊಡಗುತ್ತಾರೆ. ಮಕ್ಕಳನ್ನು ಚೌಕಟ್ಟಿನಿಂದ ಹೊರ ತರಬೇಕು, ಜೊತೆಗೆ ಗ್ರಾಮೀಣ ಕ್ರೀಡೆಗಳ ಕುರಿತು ಮಕ್ಕಳಿಗೆ ಪರಿಚಯಿಸಬೇಕು ಎನ್ನುವ ಕಾರಣಕ್ಕೆ ಸಂಕ್ರಾಂತಿ ಹಾಗೂ ವಿವೇಕಾನಂದ ಜಯಂತಿ ಅಂಗವಾಗಿ ಈ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.

ಬಿಸಾಡಿದ್ದ ರೈಲು ಬೋಗಿಗಳೀಗ ಮೈಸೂರಿನ ಈ ಮಕ್ಕಳ ಸುಂದರ ಪಾಠ ಶಾಲೆಬಿಸಾಡಿದ್ದ ರೈಲು ಬೋಗಿಗಳೀಗ ಮೈಸೂರಿನ ಈ ಮಕ್ಕಳ ಸುಂದರ ಪಾಠ ಶಾಲೆ

 ಖುಷಿ ಖುಷಿಯಾಗಿ ಕಲಿತ ಮಕ್ಕಳು

ಖುಷಿ ಖುಷಿಯಾಗಿ ಕಲಿತ ಮಕ್ಕಳು

ಒಟ್ಟಾರೆ ಸದಾ ಶಾಲೆ, ಪಾಠ, ಹೋಂವರ್ಕ್ ಎನ್ನುತ್ತಿದ್ದ ಮಕ್ಕಳ ಬಾಯಲ್ಲಿ ಈ ಭಿನ್ನ ಕಾರ್ಯಕ್ರಮದಿಂದ ನಗು ಮೂಡಿತ್ತು. ಈ ಮಕ್ಕಳ ಹಬ್ಬದಲ್ಲಿ ಫುಲ್ ಖುಷಿಯಾಗಿ ಹಕ್ಕಿಗಳಂತೆ ಹಾಡಿ ಕುಣಿಯುತ್ತಿದ್ದ ಅವರನ್ನು ನೋಡುವುದೇ ಚೆಂದ ಅನಿಸುತ್ತಿತ್ತು.

English summary
Special programme 'Makkala Habba" was conducted by bharath scouts and guides for children on behalf of swami vivekananda jayanthi and makara sankranthi in kolar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X