ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕಾಶದಲ್ಲಿಸ್ಫೋಟ ಸದ್ದು ಕೇಳಿದ್ದು ನಿಜನಾ ?

|
Google Oneindia Kannada News

ಕೋಲಾರ. ಜನವರಿ 09: ಆಕಾಶದಿಂದ ಭಯಂಕರ ಶಬ್ಧ ಕೇಳಿ ಬಂತು, ಆ ಶಬ್ಧಕ್ಕೆ ಹೆಲಿಕ್ಯಾಪ್ಟರ್ ಪತನಗೊಂಡಿದೆ ಎಂಬ ಸುದ್ದಿ ಜಿಲ್ಲೆಯಲ್ಲಿ ಭಾರೀ ಸಂಚನಲ ಹುಟ್ಟುಹಾಕಿದೆ.

ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹಾಗೂ ಟೇಕಲ್ ನ ಸಮೀಪ ಸದ್ದುಕೇಳಿ ಬಂತು ಎಂದು ಹಬ್ಬಿಸಲಾಗಿದೆ. ಭಯಂಕರ ಶಬ್ಧ ಕೇಳಿ ಜನ‌ರ ಬೆಚ್ಚಿ ಬಿದ್ದಿದ್ದಾರೆ ಎಂದು ವದಂತಿ ಹಬ್ಬಿಸಲಾಗಿದೆ. ಈ ಸುದ್ದಿಯ ಜತೆ ಹೆಲಿಕಾಪ್ಟರ್ ಪತನದ ಪೋಟೋ ಟ್ಯಾಗ್ ಮಾಡಿ ಹರಿ ಬಿಡಲಾಗಿದೆ. ಇದು ಜಿಲ್ಲೆಯಾದ್ಯಂತ ವಾಟ್ಸಪ್ ಸಂದೇಶಗಳಲ್ಲಿ ಹರಿದಾಡುತ್ತಿದ್ದು, ಎಲ್ಲರಲ್ಲೂ ಆತಂಕ ಸೃಷ್ಟಿಸುತ್ತಿದೆ.

Sonic boom sound in kolar? Fake news goes viral

ವಾಸ್ತವದಲ್ಲಿ ಆ ತರ ಯಾವುದೇ ಶಬ್ಧ ಬಂದಿಲ್ಲ. ಸುದ್ದಿ ಜತೆ ಹರಿ ಬಿಟ್ಟಿರುವ ಪೋಟೋ ಗಳು ಕೆಲ ವರ್ಷಗಳ ಹಿಂದೆ ಪತನಗೊಂಡಿದ್ದ ಹೆಲಿಕಾಪ್ಟರ್ದ್ದು ಎಂದು ದೃಢಪಟ್ಟಿದೆ. ಆದರೂ ಜನ‌ ಶಬ್ಧದ ನಕಲಿ ಸುದ್ದಿ ಕಿವಿಯಿಂದ ಕಿವಿಗೆ ತಲುಪಿ ಒಟ್ಟಾರೆ ಹಳ್ಳಿಗಳಿಗೂ ಸಾಮೂಹಿಕ ಸನ್ನಿಯಂತೆ ಹಬ್ಬಿದೆ. ಕೋಲಾರ ಜಿಲ್ಲೆಯ ಬಂಗಾರುಪೇಟೆಯಲ್ಲಿ ಯಾವುದೇ ಶಬ್ಧ ಕೇಳಿ ಬಂದಿಲ್ಲ. ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಸ್ಪಷ್ಟ ಪಡಿಸಿದ್ದಾರೆ. ಕಳೆದ ಮೂರು ದಿನದಿಂದ ನಕಲಿ ಸುದ್ದಿ ವಾಟ್ಸ್ ಪ್ ನಲ್ಲಿ ವೈರಲ್ ಅಗುತ್ತಿದ್ದು, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದಂತೆ ಸ್ಥಳೀಯ ಪೊಲೀಸ್ ಅಧಿಕಾರಿ ಸ್ಪಷ್ಪಪಡಿಸಿದ್ದಾರೆ.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

English summary
sonic boom sound in kolar, fake news goes viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X