ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿ ಬಂದರೆ ಬಿಕೋ ಎನ್ನುತ್ತದೆ ಊರು; ಈ ಹಬ್ಬ ಜನಕ್ಕೆ ಸೂತಕ

By ವಿಮಲಾ ಡಿ.ಎನ್
|
Google Oneindia Kannada News

ಸಂಕ್ರಾಂತಿ ಹಬ್ಬ ಬರುತ್ತಿದ್ದಂತೆ ಎಲ್ಲೆಲ್ಲೂ ಸಂಭ್ರಮ ತುಂಬಿಕೊಳ್ಳುತ್ತದೆ. ಎಳ್ಳು ಬೆಲ್ಲ ಹಂಚಿಕೊಂಡು ಸುಗ್ಗಿಯನ್ನು ಸಡಗರದಿಂದ ಸ್ವಾಗತಿಸುವ ಈ ಹಬ್ಬ ಎಂದರೆ ಹಳ್ಳಿಗಳಲ್ಲಂತೂ ಸಂತೋಷ ಮೇಳೈಸಿರುತ್ತದೆ. ಆದರೆ ಈ ಹಳ್ಳಿಯಲ್ಲಿ ಮಾತ್ರ ಹಾಗಲ್ಲ. ಸಂಕ್ರಾಂತಿ ಬರುತ್ತಿದ್ದಂತೆ ಇಲ್ಲಿ ಸೂತಕದ ಛಾಯೆ ಆವರಿಸುತ್ತದೆ. ಇಡೀ ಊರಿಗೆ ಊರೇ ಭಯದಲ್ಲಿರುತ್ತದೆ.

ಸಂಕ್ರಾಂತಿ ಹಬ್ಬ ಮಾಡಿದರೆ ಊರಿಗೆ ಕೇಡಾಗುತ್ತದೆ. ದನ-ಕರುಗಳು ಒಂದೊಂದಾಗಿ ಸಾಯುತ್ತವೆ ಎಂದು ಈ ಊರಿನವರು ಸಂಕ್ರಾಂತಿ ಹಬ್ಬ ಮಾಡೋದನ್ನು ಬಿಟ್ಟು ನೂರಾರು ವರ್ಷಗಳೇ ಕಳೆದಿವೆ. ಅಷ್ಟಕ್ಕೂ ಈ ಊರು ಯಾವುದು? ಇಲ್ಲಿದೆ ಅದರ ವಿವರ...

 ಕೋಲಾರದ ಈ ಊರಲ್ಲಿ ಸಂಕ್ರಾಂತಿ ಎಂದರೆ ಸೂತಕ

ಕೋಲಾರದ ಈ ಊರಲ್ಲಿ ಸಂಕ್ರಾಂತಿ ಎಂದರೆ ಸೂತಕ

ಸಂಕ್ರಾಂತಿಯಂದು ಹೀಗೆ ಸೂತಕ ಆವರಿಸಿದಂತೆ ಕಾಣುವ ಗ್ರಾಮ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು. ಈ ಗ್ರಾಮದಲ್ಲಿ ಸಂಕ್ರಾಂತಿಯಂದು ಹಬ್ಬ ಮಾಡದೆ ಜನ ತಮ್ಮ ತಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಈ ಹಳ್ಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯಿದೆ. ಇತ್ತೀಚೆಗಂತೂ ಈ ಊರಲ್ಲಿ ವಿದ್ಯಾವಂತರು ಮತ್ತು ಸರ್ಕಾರಿ ಕೆಲಸಗಳಲ್ಲಿರುವವರೂ ಹೆಚ್ಚಾಗಿದ್ದಾರೆ. ಆದರೆ ಇವರು ಕೂಡಾ ಹಳೆ ಕಾಲದವರಂತೆ ಮೂಢನಂಬಿಕೆಯನ್ನೇ ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಮೈಸೂರಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ ಜೋರುಮೈಸೂರಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ ಜೋರು

 ಸಂಕ್ರಾಂತಿ ಮಾಡಿದರೆ ಊರಿಗೇ ಕೆಟ್ಟದ್ದು ಎಂಬ ನಂಬಿಕೆ

ಸಂಕ್ರಾಂತಿ ಮಾಡಿದರೆ ಊರಿಗೇ ಕೆಟ್ಟದ್ದು ಎಂಬ ನಂಬಿಕೆ

ಸಂಕ್ರಾಂತಿ ಹಬ್ಬವನ್ನು ಮಾಡಿದರೆ ಊರಿಗೆ ಕೆಟ್ಟದಾಗುತ್ತದೆ ಎಂದು ಹಿಂದಿನವರು ಹೇಳಿರುವ ಒಂದೇ ಕಾರಣಕ್ಕೆ ಆಧಾರವಿಲ್ಲದ ನಿಷೇಧವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ. ಪಕ್ಕದ ಊರುಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೂ ಇಲ್ಲಿ ಮಾತ್ರ ಯಾವುದೇ ವಿಶೇಷವಿಲ್ಲದೆ ಮಾಮೂಲಿನಂತೆಯೇ ಇರುತ್ತದೆ.

 ಊರಿಗೆ ಬಂದ ದೊಡ್ಡ ಕಾಯಿಲೆ

ಊರಿಗೆ ಬಂದ ದೊಡ್ಡ ಕಾಯಿಲೆ

ಹಿಂದೆ ರಾಜರ ಕಾಲದಲ್ಲಿ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ವಕ್ಕರಿಸಿಕೊಂಡು ಊರಲ್ಲಿದ್ದ ದನ-ಕರುಗಳು ಇದ್ದಕ್ಕಿಂದ್ದಂತೆ ಸಾಯಲು ಆರಂಭವಾಗಿತ್ತಂತೆ. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡೆಯುತ್ತಿರುವ ಅನಾಹುತವನ್ನು ನಿಲ್ಲಿಸುವಂತೆ ಬಸವನಲ್ಲಿ ಕೋರಿಕೊಂಡರಂತೆ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳಿಗೆ ಮಾಡುವ ಪೂಜೆ ಪುನಸ್ಕಾರವನ್ನು ಬೇರೊಂದು ದಿನ ನಿನಗೆ ಮಾಡ್ತೀವಿ ಅಂತ ಪ್ರಾರ್ಥನೆ ಮಾಡಿಕೊಂಡರಂತೆ. ಆಗ ರಾಸುಗಳ ಸಾವು ನಿಂತಿತ್ತಂತೆ.

ಗಗನದಲ್ಲಿ ಹಕ್ಕಿಯಾಗುವ ನೆಲ್ಲದ ಹುಲ್ಲು ಕಾಣುವ ಚಂದದ ಅನುಭವಕ್ಕೆ...ಗಗನದಲ್ಲಿ ಹಕ್ಕಿಯಾಗುವ ನೆಲ್ಲದ ಹುಲ್ಲು ಕಾಣುವ ಚಂದದ ಅನುಭವಕ್ಕೆ...

 ಅಂದಿನಿಂದಲೇ ಕೊನೆಯಾಯ್ತು ಸಂಕ್ರಾಂತಿ

ಅಂದಿನಿಂದಲೇ ಕೊನೆಯಾಯ್ತು ಸಂಕ್ರಾಂತಿ

ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ಪ್ರತೀತಿಯು ಅಂದಿನಿಂದಲೂ ಜಾರಿಗೆ ಬಂದಿದೆ. ಸಂಕ್ರಾಂತಿ ಅದ ಮೇಲೆ, ಅಂದರೆ ರಥಸಪ್ತಮಿ ದಿನ ಊರಲ್ಲಿರುವ ದೇವಾಲಯಗಳಿಗೆ ಪೂಜೆ ಮಾಡಿ ರಾಸುಗಳಿಗೆ ಅಲಂಕಾರ ಮಾಡಿ ಮೆರವಣಿಗೆ ಮಾಡುವ ಪ್ರತೀತಿ ನಡೆದುಕೊಂಡು ಬಂದಿದೆ.

ಒಟ್ಟಿನಲ್ಲಿ ಅರಾಭಿಕೊತ್ತನೂರಿನ ಹಿರಿಯರು ಆ ಕಾಲಕ್ಕೆ ಮಾಡಿದ್ದ ಸಂಕ್ರಾಂತಿ ಆಚರಣೆಯ ನಿಷೇಧ ಈ ಕಾಲಕ್ಕೂ ಆಧಾರ ರಹಿತವಾಗಿ ಮುಂದುವರೆದುಕೊಂಡು ಬಂದಿದೆ. ಆದರೆ ಇದು ಎಷ್ಟು ಸರಿ? ಈ ತಲೆಮಾರಿನ ಜನರಲ್ಲಿ ಈ ಪ್ರಶ್ನೆಯೂ ಕಾಡಬೇಕಲ್ಲವೇ?

English summary
People of this village believed that if they celebrate sankranthi, it may bring bad to village. so the sankranthi festival celebration banned here since Hundreds of years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X