ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಪಿಪಿಇ ಕಿಟ್ ಧರಿಸಿ ಕಟಿಂಗ್ ಮಾಡಿದ ಮಾಲೀಕ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 02: ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಬ್ಬ ಇಲ್ಲಿನ ಬಂಗಾರಪೇಟೆಯ ಸಲೂನ್ ಗೆ ಬಂದು ಕಟಿಂಗ್ ಮಾಡಿಸಿಕೊಂಡು ಹೋಗಿದ್ದ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆ ಸಲೂನ್ ಗೆ ಬಂದಿದ್ದ ಜನರಲ್ಲಿ ಭಯ ಶುರುವಾಗಿತ್ತು.

ಜಿಲ್ಲಾಡಳಿತ ಸಲೂನ್ ನಡೆಸುತ್ತಿದ್ದವನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇರಿಸಿದೆ. ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಜನರ ಶೋಧ ನಡೆಸುತ್ತಿದೆ. ಈ ಒಂದು ಸಂಗತಿಯಿಂದ ಎಚ್ಚೆತ್ತುಕೊಂಡ ಅದೇ ಜಿಲ್ಲೆಯ ಸಲೂನ್ ಶಾಪ್ ಮಾಲೀಕರೊಬ್ಬರು ಪಿಪಿಇ ಕಿಟ್ ಧರಿಸಿ ಹೇರ್ ಕಟಿಂಗ್ ಮಾಡಲು ಮುಂದಾಗಿದ್ದಾರೆ.

ಕೋಲಾರದ ಸಲೂನ್ ನಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದವರಿಗೆ ನಡುಕ, ಕಾರಣ ಕೊರೊನಾ...ಕೋಲಾರದ ಸಲೂನ್ ನಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದವರಿಗೆ ನಡುಕ, ಕಾರಣ ಕೊರೊನಾ...

ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಸಲೂನ್ ಶಾಪ್ ಮಾಲೀಕ ಮಂಜುನಾಥ ಅವರು ಪಿಪಿಇ ಕಿಟ್ ಬಳಸಿ ಹೇರ್ ಕಟ್ಟಿಂಗ್ ಮಾಡಲು ಆರಂಭಿಸಿದ್ದು, ಜನರೂ ಸ್ವಲ್ಪ ನಿರಾಳವಾಗಿ ಸಲೂನ್ ಕಡೆ ಹೊರಟಿದ್ದಾರೆ. ಮಂಜುನಾಥ್ ಬೆಂಗಳೂರಿನಲ್ಲಿ ಎರಡು ಜೊತೆ ಪಿಪಿಇ ಕಿಟ್ ಗಳನ್ನು ಖರೀದಿಸಿದ್ದಾರೆ. ಗ್ರಾಹಕರಿಂದ ನಮಗೆ ತೊಂದರೆಯಾಗಬಾರದು, ನಮ್ಮಿಂದ ಗ್ರಾಹಕರಿಗೆ ತೊಂದರೆಯಾಗಬಾರದು, ಮುಂಜಾಗ್ರತಾ ಕ್ರಮ ವಹಿಸುವುದು ಎಲ್ಲಾ ದೃಷ್ಟಿಯಿಂದಲೂ ಒಳ್ಳೆಯದು ಎಂದು ಪಿಪಿಇ ಕಿಟ್ ಧರಿಸಿ ಕ್ಷೌರ, ಕಟಿಂಗ್ ಮಾಡುತ್ತಿರುವುದಾಗಿ ಮಂಜುನಾಥ್ ತಿಳಿಸಿದರು.

Salon Owner Wear PPE Kit And Doing Haircut In Kolar

ಒಂದು ಪಿಪಿಇ ಕಿಟ್ ಗೆ ಮೂರು ಸಾವಿರದಂತೆ ಎರಡು ಜೊತೆ ಪಿಪಿಇ ಕಿಟ್ ಖರೀದಿಸಿದ್ದಾರೆ ಇವರು. ಸ್ವಯಂ ಉದ್ಯೋಗ ಮಾಡುವವರು ಪಿಪಿಇ ಕಿಟ್ ಬಳಸಿಕೊಂಡು ಕೆಲಸ ಮಾಡಿದರೆ ಒಳ್ಳೆಯದು. ಕೊರೊನಾ ವೈರಸ್ ದೂರವಿಡುವ ಈ ಕ್ರಮವನ್ನು ಅನುಸರಿಸಿದರೆ ಸೋಂಕು ಹರಡುವುದನ್ನು ತಡೆಯಬಹುದು. ಅದೂ ನೂರಾರು ಜನ ಬಂದು ಹೋಗುವ ಸಾರ್ವಜನಿಕ ಜಾಗಗಳಲ್ಲಿ ಇದು ಅನಿವಾರ್ಯವೂ ಆಗಿದೆ ಎನ್ನುತ್ತಾರೆ ಮಂಜುನಾಥ್.

English summary
Salon owner in chitnalli of kolar district wears ppe kit and doing haircut to avoid coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X