ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಮಸ್ಯೆ; ರೈತರಿಂದ ಪ್ರತಿಭಟನೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜನವರಿ 29: ಕೋಲಾರ ಜಿಲ್ಲೆಯಾದ್ಯಂತ ಬಿಎಸ್ಎನ್ಎಲ್ ಮೊಬೈಲ್ ನೆಟ್‌ ವರ್ಕ್ ಹಾಗೂ ಬ್ರಾಡ್ ಬ್ಯಾಂಡ್‌ಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಜಿಲ್ಲಾ ರೈತ ಸಂಘದವರು ಈ ಕುರಿತು ಪ್ರತಿಭಟನೆ ನಡೆಸಿದರು.

ಶುಕ್ರವಾರ ಕೋಲಾರದ ಬಿಎಸ್ಎನ್ಎಲ್ ಕಚೇರಿಯ ಮುಂಭಾಗ ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯಲ್ಲಿ ಬಿಎಸ್ಎನ್ಎನ್ ನೆಟ್ ವರ್ಕ್ ಗ್ರಾಹಕರು ಒಂದಿಲ್ಲೊಂದು ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಶುಭ ಸುದ್ದಿ, ಸಿಗಲಿದೆ ಹೈ ಸ್ಪೀಡ್ ಇಂಟರ್‌ನೆಟ್‌ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಶುಭ ಸುದ್ದಿ, ಸಿಗಲಿದೆ ಹೈ ಸ್ಪೀಡ್ ಇಂಟರ್‌ನೆಟ್‌

ಪಕ್ಕದಲ್ಲೇ ಇದ್ದು ಕರೆ ಮಾಡಿದರೆ ನಾಟ್ ರೀಚಬಲ್ ಅಥವಾ ಸ್ವಿಚ್ ಆಫ್ ಅಂತ ಬರುತ್ತಿದೆ. ಕರೆಸ್ಸಿ ಹಾಕಿಸಿಕೊಂಡಿದ್ದು ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಲಾಯಿತು.

ವಿಶೇಷ ಲೇಖನ; ಕೇಂದ್ರ ಬಜೆಟ್‌, ಕೋಲಾರ ಜಿಲ್ಲೆಯ ನಿರೀಕ್ಷೆಗಳು ವಿಶೇಷ ಲೇಖನ; ಕೇಂದ್ರ ಬಜೆಟ್‌, ಕೋಲಾರ ಜಿಲ್ಲೆಯ ನಿರೀಕ್ಷೆಗಳು

 Raitha Sangha Protest Against BSNL Network

ರೈತರು ಕೇಂದ್ರ ಸರ್ಕಾರ ಹಾಗೂ ಬಿಎಸ್ಎನ್ಎಲ್ ಅಧಿಕಾರಿಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು. ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶವನ್ನು ಹೊರ ಹಾಕಿದರು. ಇದೇ ವೇಳೆ ಅಧಿಕಾರಿಯೊಬ್ಬರು ರೈತ ಸಂಘದ ಸದಸ್ಯರನ್ನು ಏಕವಚನದಲ್ಲಿ ಮಾತಾಡಿಸಿದ್ದು, ಆಕ್ರೋಶಕ್ಕೆ ಕಾರಣವಾಯಿತು.

ಕೆಂಪುಕೋಟೆಗೆ ನುಗ್ಗಿದ ರೈತರು; ಯಾರು, ಏನು ಹೇಳಿದರು? ಕೆಂಪುಕೋಟೆಗೆ ನುಗ್ಗಿದ ರೈತರು; ಯಾರು, ಏನು ಹೇಳಿದರು?

ಪ್ರತಿಭಟನಾನಿರತ ರೈತರು, "ಏಯ್ ಹುಷಾರು ನಾವು ಇಲ್ಲೇ ಬಟ್ಟೆ ಬಿಚ್ಚಿ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ. ಕೂಡಲೇ ಕ್ಷಮೆ ಕೇಳು ಎಂದು ಕೂಗಾಡಿದರು".

ಪ್ರತಿಭಟನಾನಿರತ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

English summary
Kolar district raitha sangha activists protest against BSNL officers. Farmers alleged that net work and broadband not working in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X