ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಕೊರೊನಾ ವರದಿ ಬರದಿದ್ದರೂ ಪಾಸಿಟಿವ್ ಇದೆ ಎಂದ ಕೋಲಾರದ ಖಾಸಗಿ ಆಸ್ಪತ್ರೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜುಲೈ 22: ಕೊರೊನಾ ವೈರಸ್ ವರದಿ ಬರದಿದ್ದರೂ ಪಾಸಿಟಿವ್ ಬಂದಿದೆ ಎಂದು ಹೇಳಿರುವ ಕೋಲಾರದ ಆರ್.ಎಲ್ ಜಾಲಪ್ಪ ಖಾಸಗಿ ಆಸ್ಪತ್ರೆಯ ವಿರುದ್ಧ ಬೆಮೆಲ್ ಉದ್ಯೋಗಿ ಆರೋಪ ಮಾಡಿದ್ದಾರೆ.

Recommended Video

America ನಂತರ Indiaದಲ್ಲಿ ಅತಿ ಹೆಚ್ಚು Covid test | Oneindia Kannada

ಜಗತ್ತಿನ ಮಹಾಮಾರಿ ಕೊರೊನಾ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ವಸೂಲಿಗಿಳಿದಿವೆ ಎಂದು ಬೆಮೆಲ್ ನೌಕರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

"ಭಗವಂತನ ಇಚ್ಛೆ ಸಿಎಂ ಮೇಲೆ ಇರೋದಕ್ಕೇ ಕೊರೊನಾ ನಿಯಂತ್ರಣವಾಗಿದೆ"

ಕೆಜಿಎಫ್ ನಿವಾಸಿ, ಬೆಮೆಲ್ ನೌಕರ ಸಿರಾಜ್ ಅಹಮದ್ ಅವರು ತಮ್ಮ ಪತ್ನಿಯನ್ನು ಭಾನುವಾರ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಿನ್ನೆ ಬೆಳಿಗ್ಗೆ ಅವರ ಮೊಬೈಲ್ ಗೆ ಸ್ವ್ಯಾಬ್ ಟೆಸ್ಟ್ ಕಳುಹಿಸಲಾಗಿದೆ ಎಂಬ ಮೆಸೇಜ್ ಬಂದಿದೆ.

Kolar: Private Hospital Given Positive Report To Person Before Coronavirus Test Results Coming

ಆದರೆ ಆಸ್ಪತ್ರೆಯ ವೈದ್ಯರು ಕೊರೊನಾ ವೈರಸ್ ಪರೀಕ್ಷೆ ವರದಿ ಬರದಿದ್ದರೂ, ಕುಟುಂಬಸ್ಥರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ.

ರೋಗಿ ತೀವ್ರ ತೊಂದರೆಯಲ್ಲಿದ್ದಾರೆ, ಅವರು ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಿರಾಜ್ ಅಹಮದ್ ಕುಟುಂಬಸ್ಥರು ಹರಿಬಿಟ್ಟಿದ್ದಾರೆ.

English summary
A Bemel employee has Allegation against Kolar's RL Jalappa private hospital claiming Coronavirus positive despite the coronavirus report being unavailable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X