ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದ ಸಲೂನ್ ನಲ್ಲಿ ಪಿಪಿಇ ಕಿಟ್ ಧರಿಸಿ ಕ್ಷೌರ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜುಲೈ 6: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ಸಲೂನ್ ಗಳನ್ನು ಮುಚ್ಚಲಾಗಿತ್ತು. ಲಾಕ್‌ಡೌನ್ ನಿಯಮಗಳ ಸಡಿಲಿಕೆಯ ನಂತರ ಸಲೂನ್ ತೆರೆಯಲು ಸರ್ಕಾರ ಅನುಮತಿ ನೀಡಿತು. ಆದರೆ ಭಯದಿಂದಾಗಿ ಕ್ಷೌರದಂಗಡಿಗಳಿಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ ಕೋಲಾರ ನಗರದ ಗೌರಿಪೇಟೆ ಬಡಾವಣೆಯ ಬಾಯ್ಸ್ ಸಲೂನ್ ನಲ್ಲಿ ಪಿಪಿಇ ಕಿಟ್ ಬಳಸಿ ಕ್ಷೌರ ಮಾಡಲಾಗುತ್ತಿದೆ. ಸಲೂನ್ ಗಳಲ್ಲಿ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದ ಕಾರಣ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದೂ ಅವಶ್ಯವಾಗಿದೆ. ಹೀಗಾಗಿ ಕೋಲಾರದ ಕೆಲವು ಸಲೂನ್ ಗಳಲ್ಲಿ ಪಿಪಿಇ ಕಿಟ್ ಬಳಸಿ ಕ್ಷೌರ ಮಾಡಲಾಗುತ್ತಿದೆ. ಸಲೂನ್ ಗೆ ಬರುವ ಎಲ್ಲರಿಗೂ ಸ್ಯಾನಿಟೈಸ್ ಮಾಡಲಾಗುತ್ತದೆ.

ಮಂಗಳವಾರದ ಬದಲು ಭಾನುವಾರ ಸೆಲೂನ್‌ಗೆ ರಜೆಮಂಗಳವಾರದ ಬದಲು ಭಾನುವಾರ ಸೆಲೂನ್‌ಗೆ ರಜೆ

ಗ್ರಾಹಕರು ಕುಳಿತುಕೊಳ್ಳುವ ಸ್ಥಳ ಹಾಗೂ ಬಳಸುವ ವಸ್ತುಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಲಾಗಿದೆ. ಪಿಪಿಇ ಕಿಟ್ ಸೇರಿದಂತೆ ಇತರ ವಸ್ತುಗಳ ವೆಚ್ಚವನ್ನು ನಾವೇ ಭರಿಸುತ್ತಿದ್ದು, ಗ್ರಾಹಕರಿಗೆ ಯಾವುದೇ ಹೊರ ಆಗುತ್ತಿಲ್ಲ. ಈ ಕ್ರಮದಿಂದ ನಮಗೂ, ನಮ್ಮ ಸಲೂನ್ ಗೆ ಬರುವವರಿಗೂ ಸೋಂಕು ಹರಡದಂತೆ ಎಚ್ಚರ ವಹಿಸಲಾಗುತ್ತಿದೆ ಎನ್ನುತ್ತಾರೆ ಸಲೂನ್ ಮಾಲೀಕ ಮುರಳಿ.

PPE Kit Using In Kolar Salon To Avoid Coronavirus Spread

ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ಕೋಲಾರದ ಈ ಸಲೂನ್ ಮಾಲೀಕ ತೆಗೆದುಕೊಂಡಿರುವ ನಿರ್ಧಾರಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
PPE Kit is using at the Boy's Salon in Gowripete of Kolar City to prevent the spread of coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X