ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಹೂತಿಟ್ಟ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 5: ಮರಳಿನ ದಿಬ್ಬ ಕುಸಿದು ವ್ಯಕ್ತಿ ಮೃತಪಟ್ಟ ಘಟನೆಯನ್ನು ಮುಚ್ಚಿಹಾಕುವ ಯತ್ನ ಹಿನ್ನೆಲೆಯಲ್ಲಿ ಹೂತ್ತಿಟ್ಟ ಶವವನ್ನು ಅಧಿಕಾರಿಗಳು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Recommended Video

ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಬೂಸಾಲಕುಂಟೆಯಲ್ಲಿ ಘಟನೆ ನಡೆದಿದ್ದು, ಮುಳಬಾಗಿಲು ತಹಶೀಲ್ದಾರ್ ರಾಜಶೇಖರ್ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ವಿಶ್ವ ಪರಿಸರ ದಿನ: ಕೋಲಾರ ಜಿಲ್ಲೆಗೆ 5 ಲಕ್ಷ ಔಷಧಿ ಸಸಿವಿಶ್ವ ಪರಿಸರ ದಿನ: ಕೋಲಾರ ಜಿಲ್ಲೆಗೆ 5 ಲಕ್ಷ ಔಷಧಿ ಸಸಿ

ಜೂನ್ 3 ರಂದು ಮುಳಬಾಗಿಲು ತಾಲ್ಲೂಕಿನ ತಾತಿಕಲ್ಲು ಗ್ರಾಮದ ಹೊರವಲಯದಲ್ಲಿ ಮರುಳ ದಿಬ್ಬ ಕುಸಿದು ಅಯೂಬ್(25) ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದರು.

Post-Mortem Examination Of The Buried Corpse In Kolar

ದೇವರಾಜ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆ ಘಟನೆ ನಡೆದಿದ್ದು, ಪೊಲೀಸರಿಗೆ ವಿಷಯ ತಿಳಿಸದೇ ಘಟನೆ ಮರೆಮಾಚಲು ಅಕ್ರಮ ಮರಳು ದಂಧೆಕೋರರು ಯತ್ನಿಸಿದ್ದಾರೆ.

ಯಾರಿಗೂ ಗೊತ್ತಾಗದಂತೆ ತರಾತುರಿಯಲ್ಲಿ ಶವವನ್ನು ಬೂಸಾಲಕುಂಟೆಗೆ ಸಾಗಿಸಿದ ದಂಧೆಕೋರರು, ಮೃತನ ಕುಟುಂಬಸ್ಥರಿಗೆ ಹಣದ ಆಮಿಷ ತೋರಿಸಿ ಮೇ 3 ರಂದೇ ಶವಸಂಸ್ಕಾರ ಮಾಡಿದ್ದಾರೆ.

ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ

ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಜಿಲ್ಲಾ ಎಸ್ಪಿ ಕಾರ್ತಿಕ ರೆಡ್ಡಿ ಆದೇಶದ ಮೇರೆಗೆ ಇಂದು ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಕಳೆದು ತಿಂಗಳಷ್ಟೇ ಮುಳುಬಾಗಿಲು ತಾಲೂಕಿನ ಕುರುವೆನ್ನೂರು ಗ್ರಾಮದಲ್ಲಿ ಅಕ್ರಮ ಮರಳು ತೆಗೆಯಲು ಹೋಗಿ ದಿಬ್ಬ ಕುಸಿದು ಯುವಕನ್ನೊಬ್ಬ ಮೃತಪಟ್ಟಿದ್ದನು.

English summary
The Buried corpse has been unearthed post-mortem led by Mulubagilu Tahsildar Rajashekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X