ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತಂದಿದ್ದ ಒಂಟೆಗಳ ರಕ್ಷಣೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜುಲೈ 31: ಬಕ್ರೀದ್ ಹಬ್ಬದಂದು ಬಲಿ ಕೊಡಲು ತಂದಿದ್ದ ಎರಡು ಒಂಟೆಗಳನ್ನು ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬಾಲಕೃಷ್ಣ ಲೇಔಟ್ ನಲ್ಲಿ ರಕ್ಷಿಸಲಾಗಿದೆ.

ಎರಡು ಒಂಟೆಗಳನ್ನು ವಶಕ್ಕೆ ಪಡೆದ ಪೊಲೀಸರು, ಕಾಂಪೌಂಡ್ ನಲ್ಲಿ ಬಲಿ ಕೊಡಲು ಒಂಟೆಗಳನ್ನು ಕಟ್ಟಿ ಹಾಕಿದ್ದ ಫೈಸಲ್ ಎಂಬ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಕೋಲಾರ ಜಿಲ್ಲಾಡಳಿತ ಈ ಬಾರಿ ಒಂಟೆ, ಹಸುಗಳನ್ನು ಬಲಿ ಕೊಡುವುದನ್ನು ಸಂಪೂರ್ಣ ನಿಷೇಧಿಸಿದೆ. ಆದರೆ ಈ ಒಂಟೆಗಳನ್ನು ಫಾಸಿಲ್ ಎಂಬಾತ ತಂದು ಮದೀನ ಮಸೀದಿಯಲ್ಲಿ ಕಟ್ಟಿ ಹಾಕಿದ್ದ.

Police Rescued Two Camels Which Brought To Bakrid In Kolar

 ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರದ ಮಾರ್ಗಸೂಚಿ! ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರದ ಮಾರ್ಗಸೂಚಿ!

ಖಚಿತ ಮಾಹಿತಿ ಮೇರೆಗೆ ಪೊಲೀಸರು ಒಂಟೆಗಳನ್ನು ರಕ್ಷಿಸಿ ಮಾಲೂರು ತಾಲೂಕಿನ ಗೋಶಾಲೆಗೆ ಕಳುಹಿಸಿದ್ದಾರೆ. ಈ ಸಂಬಂಧ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಮಸೀದಿಯಲ್ಲಿದ್ದ ಒಂಟೆಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

English summary
Police rescued two camels and filed a case against person who brought camels to sacrifice in bakrid festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X