ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಅವಳಿ ಮಕ್ಕಳಲ್ಲಿ ಒಂದನ್ನು ಆಸ್ಪತ್ರೆಯಲ್ಲೇ ಬಿಟ್ಟುಹೋದ ಅಪ್ಪಅಮ್ಮ

By ವಿಮಲಾ, ಕೋಲಾರ
|
Google Oneindia Kannada News

ಕೋಲಾರ, ಜನವರಿ 28: ತಮ್ಮ ಮಕ್ಕಳ ಬದುಕು ಬಂಗಾರವಾಗಬೇಕು ಎಂಬುದು ಎಲ್ಲಾ ಅಪ್ಪ ಅಮ್ಮಂದಿರ ಆಸೆ. ಅದಕ್ಕಾಗಿ ಅವರು ಏನು ಮಾಡಲೂ ಸಿದ್ಧ. ಹುಟ್ಟಿದಂದಿನಿಂದ ಅವರು ಬೆಳೆದು ದೊಡ್ಡವರಾಗುವವರೆಗೂ ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಮಕ್ಕಳು ಹೇಗೇ ಇರಲಿ, ಅವರು ಚೆನ್ನಾಗಿ ಬಾಳಬೇಕು ಎಂದು ಅವರಿಗೆ ಬೇಕಾದದ್ದೆಲ್ಲವನ್ನೂ ಕೊಟ್ಟು ಬೆಳೆಸುತ್ತಾರೆ. ಆದರೆ ಈ ಕಂದ ಮಾತ್ರ ಹುಟ್ಟುವಾಗಲೇ ಒಂಟಿಯಾಗಿದೆ.

ಕೋಲಾರದಲ್ಲಿ, ಅವಳಿ ಮಕ್ಕಳಿಗೆ ಜನ್ಮ ನೀಡಿ, ಒಂದನ್ನು ತೆಗೆದುಕೊಂಡು, ಮತ್ತೊಂದು ಪುಟ್ಟ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟುಹೋಗಿದ್ದಾರೆ ತಂದೆ ತಾಯಿ. ಒಂಟಿಯಾಗಿ ಅಳುತ್ತಿರುವ ಈ ಕಂದನನ್ನು ನೋಡಿದರೆ ಎಂಥವರ ಕರುಳೂ ಹಿಂಡಿದಂತಾಗುತ್ತದೆ.

 ಆರೋಗ್ಯದಲ್ಲಿ ಸಮಸ್ಯೆಯಿತ್ತೆಂದು ಹೀಗೆ ಮಾಡುವುದೇ?

ಆರೋಗ್ಯದಲ್ಲಿ ಸಮಸ್ಯೆಯಿತ್ತೆಂದು ಹೀಗೆ ಮಾಡುವುದೇ?

ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಪೋಷಕರು, ಆರೋಗ್ಯವಂತವಾಗಿರುವ ಒಂದು ಮಗುವನ್ನು ತಮ್ಮ ಬಳಿ ಇಟ್ಟುಕೊಂಡು, ಆರೋಗ್ಯದಲ್ಲಿ ಸಮಸ್ಯೆಯಿದ್ದ ಮತ್ತೊಂದು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ. ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರದ ಎಸ್ ಎನ್ ಆರ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

 ಒಂದು ಮಗುವಿನಲ್ಲಿ ಬೆನ್ನುಹುರಿ ಸಮಸ್ಯೆ

ಒಂದು ಮಗುವಿನಲ್ಲಿ ಬೆನ್ನುಹುರಿ ಸಮಸ್ಯೆ

ಕೋಲಾರ ಜಿಲ್ಲೆಯ ಮಾಲೂರು ಮೂಲದವರು ಈ ಮಗುವಿನ ತಂದೆ ತಾಯಿ. ತಾಯಿ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಅವಳಿ ಗಂಡುಮಕ್ಕಳು ಜನಿಸಿದ್ದವು.

ಹುಟ್ಟಿದ ಇಬ್ಬರು ಗಂಡು ಮಕ್ಕಳಲ್ಲಿ ಒಂದು ಮಗು ಆರೋಗ್ಯವಾಗಿದೆ. ಮತ್ತೊಂದು ಮಗುವಿಗೆ ಬೆನ್ನು ಹುರಿ ಸಮಸ್ಯೆಯಿದ್ದುದಾಗಿ ತಿಳಿದುಬಂದಿತ್ತು. ಇದರಿಂದ ಬೇಸರಗೊಂಡ ಮಗುವಿನ ಪೋಷಕರು ಜನವರಿ 4ರಂದು ಒಂದು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮತ್ತೊಂದು ಮಗುವನ್ನು ಮಾತ್ರ ಕೊಂಡೊಯ್ದಿದ್ದಾರೆ.

ಐವರೂ ಹೆಣ್ಣು ಮಕ್ಕಳು ಹುಟ್ಟಿದರೆಂದು ಮಾರಲು ಮುಂದಾದ ತಂದೆ ತಾಯಿಐವರೂ ಹೆಣ್ಣು ಮಕ್ಕಳು ಹುಟ್ಟಿದರೆಂದು ಮಾರಲು ಮುಂದಾದ ತಂದೆ ತಾಯಿ

 ಓದಿದವರೇ ಹೀಗೆ ನಡೆದುಕೊಂಡರೆ...

ಓದಿದವರೇ ಹೀಗೆ ನಡೆದುಕೊಂಡರೆ...

ಮಗುವಿನ ತಾಯಿ ಬಿಎ ಪದವೀಧರೆ. ತಂದೆ ಪಿಯುಸಿ ಓದಿ ಕೃಷಿ ಮಾಡುತ್ತಿದ್ದಾರೆ. ವಿದ್ಯಾವಂತರೇ ಈ ರೀತಿ ಅಮಾನವೀಯವಾಗಿ ನಡೆದುಕೊಂಡಿರುವುದಕ್ಕೆ ಆಸ್ಪತ್ರೆ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ ಪೋಷಕರ ಕಠಿಣ ಮನಸ್ಸಿನಿಂದ ಮಗು ಅನಾಥವಾಗಿದೆ. ಆ ಮಗುವನ್ನು ವಾಪಸ್ಸು ಕೊಂಡೊಯ್ಯಲು ಪೋಷಕರು ನಿರಾಕರಿಸಿದ್ದಾರೆ.

 ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಯಲ್ಲಿ ಮಗು

ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಯಲ್ಲಿ ಮಗು

ಮಗುವನ್ನು ಬಿಟ್ಟು ತಂದೆ ತಾಯಿ ಹೋದಾಗಿನಿಂದ, ಅಂದರೆ ಸುಮಾರು ಇಪ್ಪತ್ತು ದಿನಗಳಿಂದ ಈ ಮಗು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಯಲ್ಲಿದೆ. ಮಗುವನ್ನು ವಾಪಸ್ ಕೊಂಡೊಯ್ಯಲು ಪೋಷಕರಿಗೆ 60 ದಿನಗಳ ಗಡುವು ನೀಡಲಾಗಿದೆ. ಅವರು ಕೊನೆಗೂ ಒಪ್ಪದಿದ್ದರೆ ಬೆಂಗಳೂರಿನ ಶಿಶು ಮಂದಿರದಲ್ಲಿ ಆರು ವರ್ಷದವರೆಗೂ ಪಾಲನೆ ಮಾಡಲು ಮಕ್ಕಳ ಕಲ್ಯಾಣ ಸಮಿತಿ ನಿರ್ಧರಿಸಿದೆ. ಮುಂದೆ ಆ ತಂದೆ ತಾಯಿ ಮನಸ್ಸು ಕರಗಿ ಮಗುವನ್ನು ಕರೆದುಕೊಂಡು ಹೋಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಸಮಿತಿ ಸಿಬ್ಬಂದಿ.

English summary
There was an inhumane incident in Kolar, where parents who had given birth to twins, had taken one child and left another in the hospital,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X