ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ತೂರು ಪ್ರಕಾಶ್ ಭದ್ರತೆಗೆ ಪಂಜಾಬ್ ಬೌನ್ಸರ್ಸ್‌ಗಳು!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 15; ಅಪಹರಣ ಪ್ರಕರಣದ ಬಳಿಕ ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಕರಣದ ಬಳಿಕ ಇಬ್ಬರು ಪೊಲೀಸ್ ಗನ್ ಮ್ಯಾನ್‌ಗಳನ್ನು ನೀಡಲಾಗಿತ್ತು. ಆದರೆ, ಈಗ ಬೌನ್ಸರ್ಸ್‌ಗಳು ಸಹ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಸೋಮವಾರ ವರ್ತೂರು ಪ್ರಕಾಶ್ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ವರ್ತೂರು ಪ್ರಕಾಶ್ ಬೌನ್ಸರ್‌ಗಳ ಜೊತೆ ಆಗಮಿಸಿದ್ದನ್ನು ನೋಡಿ ಕ್ಷಣಕಾಲ ಎಲ್ಲರೂ ಅಚ್ಚರಿಗೊಂಡರು. ಬೌನ್ಸರ್ಸ್‌ಗಳ ಓಡಾಟಕ್ಕೇಂದೇ ಪ್ರತ್ಯೇಕ ಕಾರನ್ನು ಇಡಲಾಗಿದೆ.

ವರ್ತೂರು ಪ್ರಕಾಶ್ ಅಪಹರಣ ಪ್ರಕರಣ; ಪ್ರಮುಖ ಆರೋಪಿ ಬಂಧನವರ್ತೂರು ಪ್ರಕಾಶ್ ಅಪಹರಣ ಪ್ರಕರಣ; ಪ್ರಮುಖ ಆರೋಪಿ ಬಂಧನ

ಭದ್ರತೆಗಾಗಿ ವರ್ತೂರು ಪ್ರಕಾಶ್ ಪಂಜಾಬ್‌ನಿಂದ ಬೌನ್ಸರ್ಸ್‌ಗಳನ್ನು ಕರೆಸಿಕೊಂಡಿದ್ದಾರೆ. ವರ್ತೂರು ಪ್ರಕಾಶ್ ಮಾತನಾಡಿಸಲು ಬರುವವರನ್ನು ಬೌನ್ಸರ್ಸ್‌ಗಳು ಪರಿಶೀಲನೆ ಮಾಡಿ ಬಿಡುತ್ತಿರುವುದು ನೋಡಿ ಕಾರ್ಯಕರ್ತರು ಅಚ್ಚರಿಗೊಂಡರು.

ಪಂಚಾಯಿತಿ ಚುನಾವಣೆ; ಪ್ರಭಾವ ತೋರಿಸಿದ ವರ್ತೂರು ಪ್ರಕಾಶ್ ಪಂಚಾಯಿತಿ ಚುನಾವಣೆ; ಪ್ರಭಾವ ತೋರಿಸಿದ ವರ್ತೂರು ಪ್ರಕಾಶ್

Panjab Bouncers Security For Varthur Prakash

ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರನ್ನು 2020ರ ನವೆಂಬರ್ 26ರಂದು ಕೋಲಾರದ ಬೆಗ್ಲಿಹೊಸಹಳ್ಳಿ ತೋಟದ ಮನೆಯ ಬಳಿಯಿಂದ ಅಪಹರಣ ಮಾಡಲಾಗಿತ್ತು. ಡಿಸೆಂಬರ್ 3ರಂದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಕಾಂಗ್ರೆಸ್ ಕದ ತಟ್ಟುತ್ತಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಕದ ತಟ್ಟುತ್ತಿರುವ ಮಾಜಿ ಸಚಿವ ವರ್ತೂರು ಪ್ರಕಾಶ್

ಕೋಲಾರದ ತಮ್ಮ ಫಾರ್ಮ್‌ ಹೌಸ್‌ನಿಂದ ಮದುವೆ ಕಾರ್ಯಕ್ರಮಕ್ಕೆ ಹೋಗಲು ವರ್ತೂರು ಪ್ರಕಾಶ್ ಹೊರಟಿದ್ದರು. ಈ ವೇಳೆ ಎರಡು ಕಾರುಗಳಲ್ಲಿ ಹಿಂಬಾಲಿಸಿ ವರ್ತೂರು ಪ್ರಕಾಶ್ ಮತ್ತು ಅವರ ಚಾಲಕನನ್ನು ಅಪಹರಣ ಮಾಡಲಾಗಿತ್ತು.

ವರ್ತೂರು ಪ್ರಕಾಶ್ ಮತ್ತು ಅವರ ಕಾರು ಚಾಲಕನ ಮೇಲೆ ಹಲ್ಲೆ ಮಾಡಿ ಹಣವನ್ನು ಪಡೆದುಕೊಂಡಿದ್ದರು. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, 6 ಆರೋಪಿಗಳನ್ನು ಬಂಧಿಸಿದ್ದಾರೆ.

Recommended Video

ಹೊಸ ಉಪಗ್ರಹದಲ್ಲಿ ಬಾಹ್ಯಾಕಾಶಕ್ಕೆ ತೆರಳಲಿವೆ ಭಗವದ್ಗೀತೆ, ಪ್ರಧಾನಿ ಮೋದಿ ಚಿತ್ರ | Oneindia Kannada

English summary
After the kidnap incident Panjab based bouncers with former minister Varthur Prakash for security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X